ಬಾಂಗ್ಲಾದೇಶದ ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನ್ ಅವರ ಪತ್ನಿ ಉಮ್ಮೆ ಅಹ್ಮದ್ ಶಿಶಿರ್ ತುಂಬಾ ಸುಂದರವಾಗಿದ್ದಾರೆ, ಅವರಿಗೆ ಹೆಚ್ಚಿನ ಮಾಡೆಲಿಂಗ್ ಆಫರ್ಗಳು ಬರುತ್ತವೆ. ಶಿಶಿರ್ ಮಿನ್ನೇಸೋಟ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಅವರು ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಗಳಿಸಿದ್ದಾರೆ. ಉಮ್ಮೆ ಅಹ್ಮದ್ ಶಿಶಿರ್ ಅಮೆರಿಕದಲ್ಲಿ ಬೆಳೆದಿದ್ದಾರೆ, ಆದ್ದರಿಂದ ಅವರ ಜೀವನಶೈಲಿಯೂ ಅದೇ ಆಗಿದೆಯಂತೆ.
ತಮೀಮ್ ಇಕ್ಬಾಲ್ ಮತ್ತು ಆಯೇಶಾ ಸಿದ್ದಿಕಿ ಜೋಡಿ ಬಾಂಗ್ಲಾ ಕ್ರಿಕೆಟ್ನ ಸ್ಟಾರ್ ಜೋಡಿಗಳಲ್ಲಿ ಒಂದು. ಆಯೇಷಾ 16 ವರ್ಷದವಳಿದ್ದಾಗ, ತಮೀಮ್ ಅವರನ್ನು ಲವ್ ಮಾಡಿದ್ದರಂತೆ. ಆದರೆ ಮೊದಲು ಆಯೇಷಾ ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ಆಯೇಷಾ ತನ್ನ ವಿದ್ಯಾಭ್ಯಾಸಕ್ಕಾಗಿ ಮಲೇಷ್ಯಾಕ್ಕೆ ಹೋದ ವೇಳೆ ತಮೀಮ್ ಬಾಂಗ್ಲಾದೇಶಕ್ಕಾಗಿ ಆಡಲು ಪ್ರಾರಂಭಿಸಿದ್ದರು. ನಂತರ ಅವರು ವಿವಾಹವಾದರು ಮತ್ತು ಈಗ ಅವರಿಗೆ ಇಬ್ಬರು ಸುಂದರ ಮಕ್ಕಳಿದ್ದಾರೆ.
ಭಾರತೀಯ ಮೂಲಕ ಲಿಟನ್ ದಾಸ್ ಸದ್ಯ ಬಾಂಗ್ಲಾ ಕ್ರಿಕೆಟ್ನ ಏಕದಿನ ನಾಯಕರಾಗಿದ್ದಾರೆ. ಅವರ ಪತ್ನಿ ದೇವಶ್ರೀ ಸಂಚಿತಾ ಅವರು ಭಾರತೀಯ ದೂರದರ್ಶನ ನಟಿ ಮತ್ತು ರೂಪದರ್ಶಿ ಆಗಿದ್ದರು. ಅಲ್ಲದೇ ದೇವಶ್ರೀ ತನ್ನದೇ ಆದ YouTube ಚಾನಲ್ ಅನ್ನು ಸಹ ಹೊಂದಿದ್ದಾರೆ. ಅದರಲ್ಲಿ ಅವರು ತನ್ನ ಅಭಿಮಾನಿಗಳಿಗೆ ಕೆಲವು ಮೇಕ್ಅಪ್ ಸಲಹೆಗಳು ಮತ್ತು ಅಡುಗೆ ಟ್ಯುಟೋರಿಯಲ್ ಗಳ ವಿಡಿಯೋವನ್ನು ಹಂಚಿಕೊಳ್ಳುತ್ತಾರೆ. ಇನ್ನು, ಕೆಲ ದಿನಗಳ ಹಿಂದೆ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ದೇವಶ್ರೀ ಗಾಯಗೊಂಡಿದ್ದರು, ಆದರೆ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.
ಮುಶ್ಫಿಕರ್ ರಹೀಮ್ ಮತ್ತು ಪತ್ನಿ ಜನ್ನತುಲ್ ಕಿಫಾಯತ್ ಅವರ ಪ್ರೇಮಕಥೆ ತುಂಬಾ ಸುಂದರವಾಗಿದೆ. ಇವರಿಬ್ಬರ ಪ್ರೇಮಕಥೆ ಸಿನಿಮಾದಂತೆ ಶುರುವಾಯಿತು. ಮೊದಲ ನೋಟದ ಪ್ರೀತಿಯದು. ಅವರು ಒಂದು ಮದುವೆಯಲ್ಲಿ ಪರಸ್ಪರ ಭೇಟಿಯಾದರು ಮತ್ತು ನಂತರ ಅವರು ಪರಸ್ಪರ ಪ್ರೀತಿಸಲು ಆರಂಭಿಸಿದರಂತೆ. ಅವರು ಎರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ ನಂತರ 2014 ರಲ್ಲಿ ವಿವಾಹವಾದರು.
ನಜ್ಮುಲ್ ಹೊಸೈನ್ ಬಾಂಗ್ಲಾದೇಶದ ಕ್ರಿಕೆಟಿಗ. ಸಬ್ಬಿರ್ ರೆಹಮಾನ್ ನಂತರ ದೇಶೀಯ T20 ಗಳಲ್ಲಿ ಶತಕ ಗಳಿಸಿದ ಎರಡನೇ ಬಾಂಗ್ಲಾದೇಶದವರಾಗಿದ್ದಾರೆ. ಅವರು ಕೋವಿಡ್ -19 ಸಾಂಕ್ರಾಮಿಕ ರೋಗದ ಲಾಕ್ಡೌನ್ ಸಮಯದಲ್ಲಿ 2020 ರಲ್ಲಿ ಸಬ್ರೀನ್ ಸುಲ್ತಾನಾ ರತ್ನ ಅವರನ್ನು ವಿವಾಹವಾದರು. ಎಡಗೈ ಬ್ಯಾಟ್ಸ್ಮನ್ 4 ವರ್ಷಗಳ ಡೇಟಿಂಗ್ ನಂತರ ಜುಲೈ 11 ರಂದು ತನ್ನ ಗೆಳತಿಯನ್ನು ವಿವಾಹವಾದರು.
ಅಫೀಫ್ ಹುಸೇನ್ 2021 ರಲ್ಲಿ ವಿವಾಹವಾದರು. ಆದರೆ, ಅವರ ಪತ್ನಿ ಹೆಸರು ಅಥವಾ ಅವರ ಬಗ್ಗೆ ಬೇರೆ ಯಾವುದೇ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ. ಅಫೀಫ್ ಆಗಾಗ ತಮ್ಮ ಪತ್ನಿ ಜೊತೆಗಿನ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಾರೆ. ಅಫೀಫ್ ಹೊಸೈನ್ ಬಾಂಗ್ಲಾದೇಶದ ಅತ್ಯಂತ ಪ್ರತಿಭಾವಂತ ಆಟಗಾರರಲ್ಲಿ ಒಬ್ಬರು. ಅವರು 2016 ರಲ್ಲಿ ಅಂಡರ್-19 ಏಷ್ಯಾ ಕಪ್ನಲ್ಲಿ ಮಿಂಚುವ ಮೂಲಕ ರಾಷ್ಟ್ರೀಯ ತಂಡಕ್ಕೆ ಎಂಟ್ರಿಕೊಟ್ಟರು.
ಅನಾಮುಲ್ ಹಕ್ 2012 ರಿಂದ ಬಾಂಗ್ಲಾದೇಶಕ್ಕಾಗಿ ಆಡುತ್ತಿದ್ದಾರೆ. ಅನಾಮುಲ್ ಹಕ್ ಬಾಂಗ್ಲಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿದ್ದಾರೆ. 15ನೇ ವಯಸ್ಸಿನಿಂದಲೂ ದೇಶೀಯ ಸರ್ಕ್ಯೂಟ್ನಲ್ಲಿ ಆಟವಾಡುತ್ತಿದ್ದಾರೆ. ಅನಾಮುಲ್ ಹಕ್ ಸುಮಾರು 10 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಫರಿಯಾ ಎರಾ ಅವರನ್ನು ವಿವಾಹವಾದರು. ಮದುವೆ ಸಮಾರಂಭವು ಜೂನ್ 2018 ರಲ್ಲಿ ನಡೆಯಿತು. 2020ರ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿದೆ.