ಇಶಾನ್ ಕಿಶನ್ ಶನಿವಾರ ತಮ್ಮ ಏಕದಿನ ವೃತ್ತಿಜೀವನದ ಮೊದಲ ಶತಕ ದಾಖಲಿಸಿ ಅಬ್ಬರಿಸಿದದ್ದಲ್ಲದೇ ಇದೀಗ ದ್ವಿಶತಕ ಸಿಡಿಸಿ ಮಿಂಚಿದರು. 24 ವರ್ಷದ ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕಿಶನ್ 131 ಎಸೆತದಲ್ಲಿ 24 ಫೋರ್ ಮತ್ತು 10 ಬೌಂಡರಿ ಮೂಲಕ 210 ರನ್ ಗಳಿಸಿ ಮಿಂಚಿದರು.
2/ 7
ಕಿಶನ್ ಜೊತೆಗೂಡಿ ಭರ್ಜರಿಯಾಗಿ ಆಟವಾಡಿದ ಕಿಂಗ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ ಶತಕ ಸಿಡಿಸಿದರು. ಏಷ್ಯಾಕಪ್ 2022ರ ಬಳಿಕ ಇದೀಗ ಮತ್ತೊಮ್ಮೆ ಕೊಹ್ಲಿ ಬ್ಯಾಟ್ ಅಬ್ಬರಿಸಿತು.
3/ 7
ಏಕದಿನ ಮಾದರಿಯಲ್ಲಿ ಕೊಹ್ಲಿ 44ನೇ ಶತಕ ಸಿಡಿಸಿ ಸಂಭ್ರಮಿಸಿದರು. ಕೊಹ್ಲಿ ಇದಲ್ಲದೇ ಸಚಿ ನ್ ಬಳಿಕ ವಿಶ್ವ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೇ ಈ ಮೂಲಕ ಒಟ್ಟು 3 ಮಾದರಿಯಲ್ಲಿ 72 ಶತಕ ಸಿಡಿಸಿ ಪಾಂಟಿಂಗ್ ದಾಖಲೆ ಮುರಿದರು.
4/ 7
39ನೇ ಓವರ್ ನ ನಾಲ್ಕನೇ ಎಸೆತದಲ್ಲಿ ವಿರಾಟ್ ಶತಕ ಪೂರೈಸಿದರು. ಈ ಮೂಲಕ ಕೊಹ್ಲಿ ಅಂತಾರಾಷ್ಟ್ರೀಯ ವೃತ್ತಿ ಬದುಕಿನ 72ನೇ ಶತಕ ಸಿಡಿಸುವ ಮೂಲಕ ಸಾಲು ಸಾಲು ದಾಖಲೆಗಳನ್ನು ಮುರಿದಿದ್ದಾರೆ.
5/ 7
ಇಂದು ನಡೆದ ಬಾಂಗ್ಲಾದೇಶ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 91 ಎಸೆತದಲ್ಲಿ 2 ಸಿಕ್ಸ್ ಮತ್ತು11 ಪೋರ್ ಮೂಲಕ ಭರ್ಜರಿಯಾಗಿ 113 ರನ್ ಗಳಿಸಿದರು.
6/ 7
ಬಾಂಗ್ಲಾದೇಶದ ವಿರುದ್ಧ ಇಂದು ಇಶಾನ್ ಕಿಶನ್ ಮತ್ತು ವಿರಾಟ್ ಕೊಹ್ಲಿ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದರು. ಈ ಜೋಡಿ 150 ಕ್ಕೂ ಹೆಚ್ಚಿನ ರನ್ಗಳ ಜೊತೆಯಾಟವಾಡಿದರು. ಈ ಮೂಲಕ ಭರ್ಜರಿ ಮೊತ್ತವನ್ನು ಟೀಂ ಇಂಡಿಯಾ ಕಲೆಹಾಕುವಲ್ಲಿ ಸಹಾಯಕರಾದರು.