IND vs BAN: ಟೀಂ ಇಂಡಿಯಾ ಸೋಲಿಗೆ ಆ ಇಬ್ಬರು ಮಾಡಿದ ತಪ್ಪೇ ಕಾರಣ, ಕಾರ್ತಿಕ್ ಶಾಕಿಂಗ್ ಹೇಳಿಕೆ
Dinesh Karthik: ಇಂದು ಭಾರತ ಮತ್ತು ಬಾಂಗ್ಲಾದೇಶ ನಡುವಿನ 3 ಪಂದ್ಯಗಳ ಸರಣಿಯ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆಯಿಂದ ಬಾಂಗ್ಲಾ ಸರಣಿ ಜಯ ದಾಖಲಿಸಿದೆ.
ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಾಂಗ್ಲಾದೇಶ ಈಗಾಗಲೇ 2-0 ಅಂತರದಿಂದ ಸರಣಿಯನ್ನು ಗೆದ್ದಿದೆ. ಇಂದು ಕೊನೆಯ ಏಕದಿನ ಪಂದ್ಯ ನಡೆಯಲಿದೆ.
2/ 8
ಇಂದಿನ ಪಂದ್ಯವನ್ನಾದರೂ ಗೆದ್ದು ವೈಟ್ವಾಶ್ನಿಂದ ತಪ್ಪಿಸಿಕೊಳ್ಳಲು ಸಜ್ಜಾಗಿದ್ದರೆ, ಅತ್ತ ಬಾಂಗ್ಲಾ ತಂಡ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಉತ್ಸಾಹದಲ್ಲಿದೆ.
3/ 8
ಭಾರತದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಭಾರತದ ಸೋಲಿಗೆ ಮೂರು ಕಾರಣಗಳನ್ನು ತಿಳಿಸಿದ್ದಾರೆ. ಕ್ರಿಕ್ಬಜ್ ಜೊತೆ ಮಾತನಾಡಿದ ಅವರು, ಟೀಂ ಇಂಡಿಯಾ ಸೋಲಿಗೆ ಕಾರಣಗಳನ್ನು ವಿಶ್ಲೇಷಿಸಿದ್ದಾರೆ.
4/ 8
ಅದರಲ್ಲಿಯೂ ಪ್ರಮುಖವಾಗಿ ಭಾರತದ ಮೊದಲ ಪಂದ್ಯದ ಸೋಲಿನ ಬಗ್ಗೆ ಮಾತನಾಡಿರುವ ಕಾರ್ತಿಕ್, ಒಂದು ಹಂತದಲ್ಲಿ ಭಾರತ ಗೆಲ್ಲಲೇಬೇಕಾದ ಸ್ಥಿತಿಯಲ್ಲಿತ್ತು ಎಂದು ಕಾರ್ತಿಕ್ ಹೇಳಿದ್ದಾರೆ. ಆದರೆ ನಿರ್ಣಾಯಕ ಸಮಯದಲ್ಲಿ ಭಾರತ ಕಳಪೆ ಫೀಲ್ಡಿಂಗ್ ಮೂಲಕ ಬೆಲೆ ತೆರಿಬೇಕಾಯಿತು ಎಂದಿದ್ದಾರೆ.
5/ 8
ಬಾಂಗ್ಲಾದೇಶ ಒಂದು ಹಂತದಲ್ಲಿ 136 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಪರಿಸ್ಥಿತಿಯಲ್ಲಿ ಭಾರತ ಸುಲಭವಾಗಿ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಿರ್ಣಾಯಕ ಕ್ಷಣಗಳಲ್ಲಿ ಕ್ಯಾಚ್ ಕೈಚೆಲ್ಲಿದ ರಾಹುಲ್ ಹಾಗೂ ಸುಂದರ್ ಪಂದ್ಯದ ಗತಿಯನ್ನೇ ಬದಲಿಸಿದರು ಎಂದು ಹೇಳಿದ್ದಾರೆ.
6/ 8
ಕೆಎಲ್ ರಾಹುಲ್ ಕೈಬಿಟ್ಟ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಿಸಿತು. ಅದೇ ಸಮಯದಲ್ಲಿ ವಾಷಿಂಗ್ಟನ್ ಸುಂದರ್ ಕ್ಯಾಚ್ಗಾಗಿ ಏಕೆ ಪ್ರಯತ್ನಿಸಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಫ್ಲಡ್ ಲೈಟ್ ನಿಂದಾಗಿ ಚೆಂಡನ್ನು ನೋಡಲಾಗದಿದ್ದರೆ ಸುಂದರ್ ಮಾತ್ರ ಹೇಳಬಲ್ಲರು ಎಂದು ಕಾರ್ತಿಕ್ ಹೇಳಿದರು.
7/ 8
ಕೊನೆಯಲ್ಲಿ ಮೇಧಿ ಹಸನ್ ಉತ್ತಮ ಬ್ಯಾಟಿಂಗ್ ಮಾಡಿದರು. ಪಂದ್ಯದಲ್ಲಿ ಭಾರತದ ಫೀಲ್ಡಿಂಗ್ ತುಂಬಾ ಉತ್ತಮವಾಗಿರಲಿಲ್ಲ. ಜೊತೆಗೆ ಅದೇ ಸಮಯದಲ್ಲಿ ತುಂಬಾ ಕೆಟ್ಟದಾಗಿಯೂ ಇರಲಿಲ್ಲ ಎಂದು ಅವರು ಹೇಳಿದರು.
8/ 8
ಆದರೆ ಭಾರತ ತಢಂವು ಕ್ಷೇತ್ರರಕ್ಷಣೆಯಲ್ಲಿ ಇನ್ನಷ್ಟು ಹೆಚ್ಚಿನ ಅಭ್ಯಾಸ ಮಾಡಬೇಕಿದೆ. ಏಕೆಂದರೆ ಇಂತಹ ನಿರ್ಣಾಯಕ ಪಂದ್ಯದಲ್ಲಿ ಫಲ್ಡಿಂಗ್ ಸಹ ಅಷ್ಟೇ ಮುಖ್ಯವಾಗಿರುತ್ತದೆ ಎಂದಿದ್ದಾರೆ.