IND vs BAN 2nd ODI: ಟೀಂ ಇಂಡಿಯಾಗೆ ಬಿಗ್ ಶಾಕ್, ಆಸ್ಪತ್ರೆಗೆ ದಾಖಲಾದ ರೋಹಿತ್ ಶರ್ಮಾ
IND vs BAN 2nd ODI: ಈಗಾಗಲೇ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದ್ದು, ಸರಣಿ ಕೈತಪ್ಪುವ ಭೀತಿಯಲ್ಲಿದೆ. ಎರಡನೇ ಏಕದಿನ ಪಂದ್ಯ ಗೆದ್ದು ಸರಣಿ ಸಮಬಲ ಮಾಡಿಕೊಳ್ಳಬೇಕು ಎಂದುಕೊಂಡಿದ್ದ ಟೀಂ ಇಂಡಿಯಾಗೆ ಇದೀಗ ಬಿಗ್ ಶಾಕ್ ಎದುರಾಗಿದೆ.
ಈಗಾಗಲೇ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದ್ದು, ಸರಣಿ ಕೈತಪ್ಪುವ ಭೀತಿಯಲ್ಲಿದೆ. ಎರಡನೇ ಏಕದಿನ ಪಂದ್ಯ ಗೆದ್ದು ಸರಣಿ ಸಮಬಲ ಮಾಡಿಕೊಳ್ಳಬೇಕು ಎಂದುಕೊಂಡಿದ್ದ ಟೀಂ ಇಂಡಿಯಾಗೆ ಇದೀಗ ದೊಡ್ಡ ಹಿನ್ನಡೆ ಆಗಿದೆ.
2/ 8
ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯಗೊಂಡು ಮೈದಾನ ತೊರೆದಿದ್ದಾರೆ. ಫೀಲ್ಡಿಂಗ್ ಮಾಡುವಾಗ ಚೆಂಡು ರೋಹಿತ್ ಬೆರಳಿಗೆ ಬಲವಾಗಿ ಬಡಿದಿತ್ತು. ಸ್ವಲ್ಪ ಹೊತ್ತು ನೋವಿನಿಂದ ಬಳಲುತ್ತಿದ್ದ ರೋಹಿತ್ ನಂತರ ಮೈದಾನದಿಂದ ನಿರ್ಗಮಿಸಿದರು.
3/ 8
ರೋಹಿತ್ನನ್ನು ಸ್ಕ್ಯಾನಿಂಗ್ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ರೋಹಿತ್ ಗಾಯದಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ಅಗತ್ಯವಿತ್ತು ಎನ್ನಲಾಗುತ್ತಿದೆ.
4/ 8
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ಇನಿಂಗ್ಸ್ ನ ಮೊದಲ ಓವರ್ ನಲ್ಲಿ ಕೇವಲ 1 ರನ್ ಗಳಿಸಲಷ್ಟೇ ಶಕ್ತವಾಯಿತು. ಮೊಹಮ್ಮದ್ ಸಿರಾಜ್ ಎಸೆದ ಇನಿಂಗ್ಸ್ ನ ಎರಡನೇ ಓವರ್ ನಲ್ಲಿ ನಾಲ್ಕನೇ ಎಸೆತದಲ್ಲಿ ಅನಾಮೊಲ್ ನೀಡಿದ ಕ್ಯಾಚ್ ಹಿಡಿಯುವ ಯತ್ನದಲ್ಲಿ ರೋಹಿತ್ ಶರ್ಮಾ ಕೈಗೆ ಗಾಯ ಮಾಡಿಕೊಂಡರು.
5/ 8
ಕೈಗೆ ಒರಗಿದ ಚೆಂಡನ್ನು ಸ್ವೀಕರಿಸಲು ತಡವಾಗಿ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ ಕ್ಯಾಚ್ ಕೈಬಿಟ್ಟಿದ್ದಲ್ಲದೆ ಕೈ ಬೆರಳು ನೆಲಕ್ಕೆ ಬಲವಾಗಿ ಬಡಿದಿದೆ. ರೋಹಿತ್ ಶರ್ಮಾ ಕೈಯಿಂದ ರಕ್ತಸ್ರಾವವಾಗಿದ್ದು, ಫಿಸಿಯೋ ಸಲಹೆ ಮೇರೆಗೆ ಭಾರತ ತಂಡದ ನಾಯಕ ಡಗೌಟ್ ತಲುಪಿದರು.
6/ 8
ರೋಹಿತ್ ಶರ್ಮಾ ಬ್ಯಾಟಿಂಗ್ ಗೆ ಬರದಿದ್ದರೆ ಟೀಂ ಇಂಡಿಯಾ ಸಂಕಷ್ಟ ಹೆಚ್ಚಬಹುದು. ಮೊದಲ ಏಕದಿನ ಪಂದ್ಯದಲ್ಲಿ ಸೋತಿದ್ದ ಭಾರತ ತಂಡ ಇನ್ನುಳಿದ ಎರಡು ಏಕದಿನ ಪಂದ್ಯಗಳನ್ನು ಗೆದ್ದರೆ 2-1 ಅಂತರದಿಂದ ಸರಣಿ ವಶಪಡಿಸಿಕೊಳ್ಳಬಹುದು. ಇಲ್ಲವಾದಲ್ಲಿ ಸರಣಿ ಕೈತಪ್ಪಲಿದೆ. ಸದ್ಯ ರೋಹಿತ್ ಬದಲು ಕೆಎಲ್ ರಾಹುಲ್ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.
7/ 8
ಈ ಪಂದ್ಯದಲ್ಲಿ ಟೀಂ ಇಂಡಿಯಾ ಎರಡು ಬದಲಾವಣೆಯೊಂದಿಗೆ ಕಣಕ್ಕೆ ಇಳಿಯಲಿದೆ. ಅಕ್ಷರ್ ಪಟೇಲ್ ಮತ್ತು ಉಮ್ರಾನ್ ಮಲಿಕ್ ಅಂತಿಮ ತಂಡದಲ್ಲಿ ಸ್ಥಾನ ಪಡೆದರು. ಶೆಬಾಜ್ ಅಹ್ಮದ್ ಮತ್ತು ಕುಲದೀಪ್ ಸೇನ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
8/ 8
ಭಾರತ ತಂಡದ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.