IND vs BAN 2nd ODI: ಟೀಂ ಇಂಡಿಯಾದಲ್ಲಿ ಹೆಚ್ಚಾಯ್ತು ಗಾಯಾಳುಗಳ ಸಮಸ್ಯೆ, ಮತ್ತೊಬ್ಬ ಸ್ಟಾರ್ ಬೌಲರ್ ಔಟ್!
IND vs BAN 2nd ODI: ಮೊದಲ ODI ನಲ್ಲಿ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕುಲದೀಪ್ ಸೇನ್ ಬೆನ್ನುನೋವಿನಿಂದಾಗಿ ಎರಡನೇ ODI ನಿಂದ ಹಿಂದೆ ಸರಿದರು. ಆದರೆ ಇಂದಿನ ಪಂದ್ಯದಲ್ಲಿ ಮತ್ತೆ ಇಬ್ಬರು ಆಟಗಾರರಿಗೆ ಇಂಜೂರಿ ಆಗಿದೆ.
ಬಾಂಗ್ಲಾದೇಶ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಗಾಯದ ಸಮಸ್ಯೆ ಕಾಡುತ್ತಿದೆ. ಅಕ್ಷರ್ ಪಟೇಲ್ ಚೇತರಿಸಿಕೊಂಡ ಬಳಿಕ. ಮತ್ತೆ ಮೂವರು ಆಟಗಾರರು ಗಾಯಗೊಂಡಿದ್ದರು.
2/ 8
ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಕುಲದೀಪ್ ಸೇನ್ ಬೆನ್ನುನೋವಿನಿಂದಾಗಿ ಎರಡನೇ ಏಕದಿನ ಪಂದ್ಯದಿಂದ ಹಿಂದೆ ಸರಿದಿದ್ದರು. ಅವರ ಬದಲಿಗೆ ಉಮ್ರಾನ್ ಮಲಿಕ್ ಅಂತಿಮ ತಂಡದಲ್ಲಿ ಸ್ಥಾನ ಪಡೆದರು.
3/ 8
ಫೀಲ್ಡಿಂಗ್ ವೇಳೆ ರೋಹಿತ್ ಶರ್ಮಾ ಗಾಯಗೊಂಡಿದ್ದು ಗೊತ್ತೇ ಇದೆ. ಬಾಂಗ್ಲಾದೇಶದ ಇನಿಂಗ್ಸ್ ನ ಎರಡನೇ ಓವರ್ ನಲ್ಲಿ ಅನ್ಮುಲ್ ಹಕ್ ನೀಡಿದ ಕ್ಯಾಚ್ ಹಿಡಿಯಲು ರೋಹಿತ್ ಯತ್ನಿಸಿದರು. ಆದರೆ ಚೆಂಡು ಅವರ ಎಡಗೈ ಹೆಬ್ಬೆರಳಿಗೆ ಬಲವಾಗಿ ಬಡಿಯಿತು.
4/ 8
ಅವರು ತಕ್ಷಣವೇ ಮೈದಾನವನ್ನು ತೊರೆದರು. ಸ್ವಲ್ಪ ಸಮಯದ ನಂತರ ರೋಹಿತ್ ಅವರನ್ನು ಹೆಬ್ಬೆರಳು ಸ್ಕ್ಯಾನಿಂಗ್ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿಯಾಗಿದೆ. ರೋಹಿತ್ ಗಾಯಗೊಂಡಿರುವ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಮಾಹಿತಿ ನೀಡಿದೆ.
5/ 8
ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ ಗಾಯಗೊಂಡಿದ್ದಾರೆ. ಭಾರತದ ಬೌಲರ್ ದೀಪಕ್ ಚಹಾರ್ ಬೌಲಿಂಗ್ ಮಾಡುವಾಗ ತೊಡೆಯ ಸ್ನಾಯುವಿಗೆ ಗಾಯ ಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಅವರು ಎರಡನೇ ಏಕದಿನ ಪಂದ್ಯದಲ್ಲಿ ಕೇವಲ ಮೂರು ಓವರ್ ಬೌಲ್ ಮಾಡಿದರು.
6/ 8
ಕಷ್ಟಪಟ್ಟು ಮೂರನೇ ಓವರ್ ಮುಗಿಸಿದ ದೀಪಕ್ ಚಹಾರ್ ಮೈದಾನದಿಂದ ನಿರ್ಗಮಿಸಿದರು. ಈ ವರ್ಷ ದೀಪಕ್ ಚಹಾರ್ ಗಾಯಗೊಂಡಿರುವುದು ಇದು ನಾಲ್ಕನೇ ಬಾರಿ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅವರು ಮೊದಲ ಬಾರಿಗೆ ಸ್ನಾಯು ನೋವಿಗೆ ಒಳಗಾಗಿದ್ದರು.
7/ 8
ಇದರಿಂದಾಗಿ ಐಪಿಎಲ್ ಜೊತೆಗೆ ಹಲವು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ನಂತರ ಅವರು ಚೇತರಿಸಿಕೊಂಡರು ಮತ್ತು ತಂಡವನ್ನು ಸೇರಿಕೊಂಡರು ಆದರೆ ಅವರು ಟಿ 20 ವಿಶ್ವಕಪ್ಗೆ ಮೊದಲು ಮತ್ತೆ ಗಾಯಗೊಂಡ ಕಾರಣ ವಿಶ್ವಕಪ್ನಿಂದ ಹೊರಬಿದ್ದರು.
8/ 8
ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ದೀಪಕ್ ಮತ್ತೆ ಗಾಯಗೊಂಡಿದ್ದಾರೆ. ಆಟಗಾರರ ಫಿಟ್ನೆಸ್ ಬಗ್ಗೆ ಬಿಸಿಸಿಐ ಕಾಳಜಿ ವಹಿಸುತ್ತದೆಯೇ ಎಂಬ ಅನುಮಾನವಿದೆ. ಇದೇ ರೀತಿ ಮುಂದುವರಿದರೆ ದೀಪಕ್ ಚಹಾರ್ ಅವರ ವೃತ್ತಿಜೀವನ ಶೀಘ್ರದಲ್ಲೇ ಕೊನೆಗೊಂಡರೂ ಆಶ್ಚರ್ಯವಿಲ್ಲ.