ಶ್ರೇಯಸ್ ಅಯ್ಯರ್ ಮೊದಲ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಎರಡಂಕಿ ಮುಟ್ಟಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅಯ್ಯರ್ ಕಳೆದ ವರ್ಷ ನವೆಂಬರ್‌ನಲ್ಲಿ ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯ ಅವರಿಗೆ ಸ್ಮರಣೀಯವಾಗಿತ್ತು. ಅಯ್ಯರ್ ಮೊದಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿಯೇ ಶತಕ ಗಳಿಸಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 65 ರನ್ ಗಳಿಸಿದ್ದರು.
ರಿಷಬ್ ಪಂತ್ (578 ರನ್) ಮತ್ತು ರವೀಂದ್ರ ಜಡೇಜಾ (328 ರನ್) ನಂತರ ಶ್ರೇಯಸ್ ಐಯ್ಯರ್ ಈ ವರ್ಷ ಟೆಸ್ಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರರಾಗಿದ್ದಾರೆ. ಚಟ್ಟೋಗ್ರಾಮ್ ಟೆಸ್ಟ್‌ಗೆ ಮೊದಲು 2022 ರಲ್ಲಿ ಐಯ್ಯರ್ ಕೇವಲ ಎರಡು ಅರ್ಧಶತಕಗಳನ್ನು ಗಳಿಸಿದ್ದರು. ಆದರೆ, ಚಟ್ಟೋಗ್ರಾಮ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದರು. ಚಟ್ಟೋಗ್ರಾಮ್ ಟೆಸ್ಟ್ ನಲ್ಲಿ ಅವರು ಬ್ಯಾಟಿಂಗ್ ಮಾಡುತ್ತಿರುವ ರೀತಿ ನೋಡಿದರೆ ವರ್ಷದ ಮೊದಲ ಟೆಸ್ಟ್ ಶತಕ ಸಿಡಿಸುವ ರೀತಿ ಕಂಡುಬರುತ್ತಿದೆ.