ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಚಟ್ಟೋಗ್ರಾಮ್ನಲ್ಲಿ ಬುಧವಾರ ಆರಂಭವಾಗಿದೆ. ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರಾಹುಲ್ ಮತ್ತು ಗಿಲ್ ಇನಿಂಗ್ಸ್ ಆರಂಭಿಸಿದರು. ರಾಹುಲ್(22), ಗಿಲ್(20), ಕೊಹ್ಲಿ(1) ಬೇಗನೇ ಪೆವಿಲಿಯನ್ ಸೇರಿದರು. ಆದರೆ ಪೂಜಾರ ಮತ್ತು ಪಂತ್ ಪ್ರಮುಖ ಜೊತೆಯಾಟ ಭಾರತಕ್ಕೆ ಕೊಂಚ ಆಸೆರೆ ಆಯಿತು. ಪಂತ್ 45 ಎಸೆತಗಳಲ್ಲಿ ನಿರ್ಣಾಯಕ 46 ರನ್ ಗಳಿಸಿದರು. ಅದು ಬಿಟ್ಟರೆ ಮತ್ತೊಂದು ಅಪರೂಪದ ದಾಖಲೆ ಅವರ ಖಾತೆ ಸೇರಿದೆ.
ಸಾರ್ವಕಾಲಿಕ ದಾಖಲೆಯ ಪಟ್ಟಿ: ಅಂತಾರಾಷ್ಟ್ರೀಯ ಪರಿಭಾಷೆಯಲ್ಲಿ ಅತಿ ಕಡಿಮೆ ಟೆಸ್ಟ್ ಇನ್ನಿಂಗ್ಸ್ಗಳಲ್ಲಿ 50 ಸಿಕ್ಸರ್ಗಳನ್ನು ಬಾರಿಸಿದವರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶಾಹಿದ್ ಆಫ್ರಿದಿ ಸೇರಿದ್ದಾರೆ. ಅಫ್ರಿದಿ ಕೇವಲ 46 ಇನ್ನಿಂಗ್ಸ್ಗಳಲ್ಲಿ 50 ಸಿಕ್ಸರ್ಗಳನ್ನು ಬಾರಿಸಿದ್ದರು. ನಂತರ ಕ್ರಮವಾಗಿ ರೋಹಿತ್ ಶರ್ಮಾ 51, ರಿಷಭ್ ಪಂತ್ 54, ಟಿಮ್ ಸೌಥಿ 60 ಮತ್ತು ಆಂಡ್ರ್ಯೂ ಫ್ಲಿಂಟಾಫ್ 71 ರನ್ ಗಳಿಸಿದ್ದಾರೆ.