ಅದು ಆಗಬೇಕಾದರೆ ನಾಲ್ಕನೇ ದಿನ ರವೀಂದ್ರ ಜಡೇಜಾ ವಿಕೆಟ್ ಕಬಳಿಸಬೇಕು. ಇದೀಗ ಚೆಂಡು ತಿರುಗುತ್ತಿರುವ ಕಾರಣ ರವೀಂದ್ರ ಜಡೇಜಾ ಪ್ರಮುಖ ಪಾತ್ರ ವಹಿಸಲಿದ್ದಾರೆ. ಮೂರನೇ ದಿನ ಎರಡು ವಿಕೆಟ್ ಪಡೆದ ಜಡೇಜಾ ನಾಲ್ಕನೇ ದಿನವೂ ವಿಕೆಟ್ ಪಡೆದರೆ ಆಸ್ಟ್ರೇಲಿಯಾ ಬೇಗನೇ ಔಟಾಗುವ ಸಾಧ್ಯತೆ ಇದೆ. ಒಂದು ವೇಳೆ ಆಸ್ಟ್ರೇಲಿಯಾ 170 ರನ್‌ಗಳಿಗಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದ್ದರೆ ಭಾರತ 350 ರನ್‌ಗಳ ಗುರಿಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.