ಭಾರತದ ಏಕದಿನ ರ‍್ಯಾಂಕಿಂಗ್ 114 ಅಂಕಗಳಿಂದ 113 ಅಂಕಗಳಿಗೆ ಕುಸಿಯಲಿದೆ. ಆದರೆ 2022-23ರಲ್ಲಿ ಭಾರತ ಈಗಾಗಲೇ 46 ಪಂದ್ಯಗಳನ್ನು ಆಡಿದ್ದರೆ, ಆಸೀಸ್ ಕೇವಲ 34 ಪಂದ್ಯಗಳನ್ನು ಆಡಿದೆ. ಇದರೊಂದಿಗೆ ಮೂರನೇ ಏಕದಿನ ಪಂದ್ಯದಲ್ಲಿ ಆಸೀಸ್ ಗೆದ್ದರೆ ಏಕದಿನ ರ‍್ಯಾಂಕಿಂಗ್ ನಲ್ಲಿ ನಂಬರ್ ಒನ್ ಸ್ಥಾನಕ್ಕೇರಲಿದೆ. ಭಾರತ ಗೆದ್ದರೆ 115 ಅಂಕ ತಲುಪಿ ಅಗ್ರಸ್ಥಾನದಲ್ಲಿ ಮುಂದುವರಿಯಲಿದೆ. ಆಸೀಸ್ ಕೊನೆಯ ಏಕದಿನ ಪಂದ್ಯವನ್ನು ಗೆದ್ದು ಏಕದಿನದಲ್ಲಿ ಅಗ್ರಸ್ಥಾನವನ್ನು ಮರಳಿ ಪಡೆಯುವ ಉತ್ಸಾಹದಲ್ಲಿದ್ದರೆ, ಭಾರತವು ತನ್ನ ಮುನ್ನಡೆ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.
ಪ್ರಸ್ತುತ ODI ತಂಡದ ಶ್ರೇಯಾಂಕಗಳು: ಭಾರತವು ಪ್ರಸ್ತುತ 114 ಅಂಕಗಳೊಂದಿಗೆ ICC ODI ತಂಡ ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ 112 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ 111 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇಂಗ್ಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಕ್ರಮವಾಗಿ 4, 5 ಮತ್ತು 6ನೇ ಸ್ಥಾನದಲ್ಲಿವೆ. ಬಾಂಗ್ಲಾದೇಶ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ಕ್ರಮವಾಗಿ 7, 8, 9 ಮತ್ತು 10 ನೇ ಸ್ಥಾನದಲ್ಲಿವೆ.