Ravichandran Ashwin: ಕಪಿಲ್​ ದೇವ್​ ದಾಖಲೆ ಮುರಿದ ಅಶ್ವಿನ್​​, ಐಸಿಸಿ ನಂಬರ್​ 1 ಬೌಲರ್​ ಆದ ಸ್ಪಿನ್​ ಮಾಂತ್ರಿಕ

Ravichandran Ashwin: ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಅಶ್ವಿನ್ 3 ವಿಕೆಟ್ ಕಬಳಿಸುವ ಮೂಲಕ ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದಿದ್ದಾರೆ.

First published:

 • 18

  Ravichandran Ashwin: ಕಪಿಲ್​ ದೇವ್​ ದಾಖಲೆ ಮುರಿದ ಅಶ್ವಿನ್​​, ಐಸಿಸಿ ನಂಬರ್​ 1 ಬೌಲರ್​ ಆದ ಸ್ಪಿನ್​ ಮಾಂತ್ರಿಕ

  ಪ್ರಸ್ತುತ ಭಾರತದ ಅನುಭವಿ ಬೌಲರ್ ರವಿಚಂದ್ರನ್ ಅಶ್ವಿನ್​ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನ ಅಶ್ವಿನ್ 3 ವಿಕೆಟ್ ಕಬಳಿಸುವ ವಿಶೇಷ ಸಾಧನೆ ಮಾಡಿದರು.

  MORE
  GALLERIES

 • 28

  Ravichandran Ashwin: ಕಪಿಲ್​ ದೇವ್​ ದಾಖಲೆ ಮುರಿದ ಅಶ್ವಿನ್​​, ಐಸಿಸಿ ನಂಬರ್​ 1 ಬೌಲರ್​ ಆದ ಸ್ಪಿನ್​ ಮಾಂತ್ರಿಕ

  ಹೌದು, ಆಸೀಸ್​ ವಿರುದ್ಧ 3 ವಿಕೆಟ್ ಪಡೆಯುವ ಮೂಲಕ ಅಶ್ವಿನ್​ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ಕಪಿಲ್ ದೇವ್ 687 ವಿಕೆಟ್ ಪಡೆದ ದಾಖಲೆ ಹೊಂದಿದ್ದರು.

  MORE
  GALLERIES

 • 38

  Ravichandran Ashwin: ಕಪಿಲ್​ ದೇವ್​ ದಾಖಲೆ ಮುರಿದ ಅಶ್ವಿನ್​​, ಐಸಿಸಿ ನಂಬರ್​ 1 ಬೌಲರ್​ ಆದ ಸ್ಪಿನ್​ ಮಾಂತ್ರಿಕ

  ಆದರೆ ಆಸ್ಟ್ರೇಲಿಯ ವಿರುದ್ಧದ ಮೂರನೇ ಪಂದ್ಯದಲ್ಲಿ ಅಶ್ವಿನ್ 689 ವಿಕೆಟ್ ಪಡೆದು ಕಪಿಲ್ ದಾಖಲೆಯನ್ನು ಮುರಿದಿದ್ದಾರೆ. ಇದರೊಂದಿಗೆ ರವಿಚಂದ್ರನ್ ಅಶ್ವಿನ್ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

  MORE
  GALLERIES

 • 48

  Ravichandran Ashwin: ಕಪಿಲ್​ ದೇವ್​ ದಾಖಲೆ ಮುರಿದ ಅಶ್ವಿನ್​​, ಐಸಿಸಿ ನಂಬರ್​ 1 ಬೌಲರ್​ ಆದ ಸ್ಪಿನ್​ ಮಾಂತ್ರಿಕ

  ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ 953 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಹರ್ಭಜನ್ ಸಿಂಗ್ 707 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್ ಮೂರನೇ ಸ್ಥಾನದಲ್ಲಿದ್ದರೆ. ಕಪಿಲ್ ದೇವ್ 687 ವಿಕೆಟ್ ಗಳಿಸಿದ್ದಾರೆ. ಜಹೀರ್ ಖಾನ್ 597 ವಿಕೆಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

  MORE
  GALLERIES

 • 58

  Ravichandran Ashwin: ಕಪಿಲ್​ ದೇವ್​ ದಾಖಲೆ ಮುರಿದ ಅಶ್ವಿನ್​​, ಐಸಿಸಿ ನಂಬರ್​ 1 ಬೌಲರ್​ ಆದ ಸ್ಪಿನ್​ ಮಾಂತ್ರಿಕ

  ಇದಲ್ಲದೇ ಅಶ್ವಿನ್​ ಆಸೀಸ್​ ವಿರುದ್ಧ ಭರ್ಜರಿ ಪ್ರದರ್ಶನ ನೀಡುವ ಮೂಲಕ ಐಸಿಸಿ ಟೆಸ್ಟ್​ ಬೌಲರ್​ ರ‍್ಯಾಂಕಿಂಗ್​ನಲ್ಲಿಯೂ ಏರಿಕೆ ಕಂಡಿದ್ದಾರೆ. ಅಲ್ಲದೇ ಇಂಗ್ಲೆಂಡ್​ ಬೌಲರ್​ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

  MORE
  GALLERIES

 • 68

  Ravichandran Ashwin: ಕಪಿಲ್​ ದೇವ್​ ದಾಖಲೆ ಮುರಿದ ಅಶ್ವಿನ್​​, ಐಸಿಸಿ ನಂಬರ್​ 1 ಬೌಲರ್​ ಆದ ಸ್ಪಿನ್​ ಮಾಂತ್ರಿಕ

  ಐಸಿಸಿ ನೂತನ ರ‍್ಯಾಂಕಿಂಗ್​ನಲ್ಲಿ ಅಶ್ವಿನ್​ 864 ಪಾಯಿಂಟ್​ ಜೊತೆ ಅಗ್ರಸ್ಥಾನದಲ್ಲಿದ್ದಾರೆ. ಬಳಿಕ ಇಂಗ್ಲೆಂಡ್​ ಆಟಗಾರ ಜೇಮ್ಸ್ ಆ್ಯಂಡ್ರೂಸನ್​ 859 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

  MORE
  GALLERIES

 • 78

  Ravichandran Ashwin: ಕಪಿಲ್​ ದೇವ್​ ದಾಖಲೆ ಮುರಿದ ಅಶ್ವಿನ್​​, ಐಸಿಸಿ ನಂಬರ್​ 1 ಬೌಲರ್​ ಆದ ಸ್ಪಿನ್​ ಮಾಂತ್ರಿಕ

  ಅಶ್ವಿನ್​​ ಮಾತ್ರವಲ್ಲದೇ ಭಾರತದ ಪರ ಜಸ್ಪ್ರಿತ್​ ಬುಮ್ರಾ 4ನೇ ಸ್ಥಾನ ಮತ್ತು 763 ಅಂಕಗಳೊಂದಿಗೆ ರವೀಂದ್ರ ಜಡೇಜಾ ಸಹ 8ನೇ ಸ್ಥಾನದಲ್ಲಿರುವ ಮೂಲಕ ಐಸಿಸಿ ಶ್ರೇಯಾಂಕದ ಟಾಪ್​ 10 ಪಟ್ಟಿಯಲ್ಲಿದ್ದಾರೆ.

  MORE
  GALLERIES

 • 88

  Ravichandran Ashwin: ಕಪಿಲ್​ ದೇವ್​ ದಾಖಲೆ ಮುರಿದ ಅಶ್ವಿನ್​​, ಐಸಿಸಿ ನಂಬರ್​ 1 ಬೌಲರ್​ ಆದ ಸ್ಪಿನ್​ ಮಾಂತ್ರಿಕ

  ಟೀಂ ಇಂಡಿಯಾ ಪ್ಲೇಯಿಂಗ್​ 11: ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ಮತ್ತು ಉಮೇಶ್ ಯಾದವ್.

  MORE
  GALLERIES