ಟೆಸ್ಟ್ ಪಂದ್ಯ ಆರಂಭವಾದ ಮೊದಲ ಗಂಟೆಯಲ್ಲಿ ಬೌಲರ್‌ಗಳ ಪ್ರಾಬಲ್ಯ ಹೆಚ್ಚಲಿದ್ದು, ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯಿಂದ ಆಡಬೇಕಿದೆ. ಆರಂಭದಿಂದಲೂ ಬ್ಯಾಟ್ಸ್‌ಮನ್‌ಗಳ ಮೇಲೆ ಬೌಲರ್‌ಗಳಿಗೆ ಅಗ್ರೆಸ್ಸಿವ್ ಆಗಿ ದಾಳಿ ನಡೆಸುತ್ತಾರೆ. ಇತ್ತೀಚೆಗೆ ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್ ಹೊರಹೊಮ್ಮಿದ್ದಾರೆ.
ಕಪಿಲ್ ದೇವ್: ಟೀಂ ಇಂಡಿಯಾ ಆಲ್ಟೈಮ್ ಟೆಸ್ಟ್ ಪ್ಲೇಯರ್ ಕಪಿಲ್ ದೇವ್ ಒಬ್ಬರು. ಕಪಿಲ್ ದೇವ್ ಟೆಸ್ಟ್ ವೃತ್ತಿ ಜೀವನದಲ್ಲಿ 61 ಸಿಕ್ಸರ್ ಸಿಡಿಸಿದ್ದಾರೆ. 1980ರಲ್ಲಿ ಸಾಕಷ್ಟು ಮಂದಿ ಉತ್ತಮ ಫಾಸ್ಟ್ ಬೌಲರ್ಗಳನ್ನು ಎದುರಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ 61 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಬೌಲರ್‌ಗಳಿಗೆ ಯಾವುದೇ ಮಿತಿಗಳು ಇಲ್ಲದ ಸಂದರ್ಭದಲ್ಲಿ, ಯಾವುದೇ ಸೆಫ್ಟಿ ಇಲ್ಲದ ಸಮಯದಲ್ಲಿ ಸಿಕ್ಸರ್ ಸಿಡಿಸುವುದು ಎಲ್ಲರಿಗೂ ಸಾಧ್ಯವಿಲ್ಲ ಅಂತ ಹೇಳಬಹುದು.
ರೋಹಿತ್ ಶರ್ಮಾ: ಟೀಂ ಇಂಡಿಯಾ ಪರ ಟೆಸ್ಟ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದುಕೊಂಡಿದ್ದಾರೆ. ಲಿಸ್ಟ್ನಲ್ಲಿ ಇತರರಿಗೆ ಹೋಲಿಕೆ ಮಾಡಿದರೆ ರೋಹಿತ್ ಶರ್ಮಾ ಕಡಿಮೆ ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ ಆಗಿರುವ ಹಿಟ್ಮ್ಯಾನ್ ಕಡಿಮೆ ಇನ್ನಿಂಗ್ಸ್ಗಳಲ್ಲಿ 68 ಸಿಕ್ಸರ್ ಸಿಡಿಸಿದ್ದಾರೆ. 80 ಇನ್ನಿಂಗ್ಸ್ಗಳಲ್ಲಿ ರೋಹಿತ್ ಸಾಧನೆ ಮಾಡಿದ್ದಾರೆ. 10 ವರ್ಷಗಳ ಟೆಸ್ಟ್ ವೃತ್ತಿ ಜೀವನದಲ್ಲಿ ಟೀಂ ಇಂಡಿಯಾ ಪರ 47 ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. 2019ರಲ್ಲಿ ಟೆಸ್ಟ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲು ಆರಂಭಿಸಿದ ಬಳಿಕ ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದ್ದು, ರೋಹಿತ್ ಭವಿಷ್ಯದಲ್ಲಿ ಟೀಂ ಇಂಡಿಯಾ ಪರ ಟೆಸ್ಟ್ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸುವ ಸಾಧನೆ ಮಾಡುವ ಅವಕಾಶವಿದೆ. ಬೆನ್ ಸ್ಟೋಕ್ಸ್ ದಾಖಲೆಯನ್ನು ಮುರಿಯುವ ಅವಕಾಶವನ್ನು ರೋಹಿತ್ ಹೊಂದಿದ್ದಾರೆ.
ಎಂಎಸ್ ಧೋನಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಅತ್ಯಾಧಿಕ ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. 90 ಟೆಸ್ಟ್ ಪಂದ್ಯಗಳಲ್ಲಿ 144 ಇನ್ನಿಂಗ್ಸ್ಗಳಿಂದ 78 ಸಿಕ್ಸರ್ ಸಿಡಿಸಿದ್ದಾರೆ. ಧೋನಿ ಟೆಸ್ಟ್ ಕ್ರಿಕೆಟ್ ಆರಂಭದಲ್ಲಿ ಆಕ್ರಮಣಕಾರಿಯಾಗಿ ಆಡಿದ್ರೂ ಆ ಬಳಿಕ ನಾಯಕತ್ವ ಜವಾಬ್ದಾರಿ ವಹಿಸಿಕೊಂಡ ಕಾರಣ ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಿಸಿಕೊಂಡಿದ್ದರು.
ವಿರೇಂದ್ರ ಸೆಹ್ವಾಗ್: ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಾಧಿಕ ಸಿಕ್ಸರ್ ಸಿಡಿಸಿದ ಆಟಗಾರ ಪಟ್ಟಿಯಲ್ಲಿ ಸೆಹ್ವಾಗ್ ಮೊದಲ ಸ್ಥಾನದಲ್ಲಿದ್ದಾರೆ. ಅಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿ ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರಲ್ಲಿ ಸೆಹ್ವಾಗ್ 6ನೇ ಸ್ಥಾನದಲ್ಲಿದ್ದಾರೆ. 164 ಟೆಸ್ಟ್ ಇನ್ನಿಂಗ್ಸ್ನಲ್ಲಿ 49.34 ಸರಾಸರಿಯಲ್ಲಿ 8,586 ಟೆಸ್ಟ್ ರನ್ಗಳನ್ನು ಸೆಹ್ವಾಗ್ ಸಿಡಿಸಿದ್ದಾರೆ. ಇದರಲ್ಲಿ 2 ದ್ವಿಶತಕ, 23 ಶತಕಗಳು ಸೇರಿದೆ.