ಈ ಇನ್ನಿಂಗ್ಸ್ ವೇಳೆ ವಿರಾಟ್ ಸಂಪೂರ್ಣ ಫಿಟ್ ಆಗಿರಲಿಲ್ಲ ಎಂದು ಪತ್ನಿ ಹೇಳಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಪಂದ್ಯದ ಚಿತ್ರವನ್ನು ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಅನಾರೋಗ್ಯದ ನಡುವೆಯೂ ಆಡುವುದು ಮತ್ತು ಮೈದಾನದಲ್ಲಿ ಈ ರೀತಿಯ ಮಾನಸಿಕ ಸಮತೋಲನವು ನನಗೆ ತುಂಬಾ ಸ್ಫೂರ್ತಿ ನೀಡುತ್ತದೆ ಎಂದು ಬರೆದಿದ್ದಾರೆ.