IND vs AUS 2023: ಗುಡ್‌ ನ್ಯೂಸ್‌ ಬೆನ್ನಲ್ಲೇ ಟೀಂ ಇಂಡಿಯಾಗೆ ಬ್ಯಾಡ್ ನ್ಯೂಸ್! ತಂಡಕ್ಕೆ ಸಂಜು ಇನ್, ಬುಮ್ರಾ ಔಟ್!

IND vs AUS 2023: ಇತ್ತೀಚೆಗೆ, ಸಂಜು ಸ್ಯಾಮ್ಸನ್ ತಮ್ಮ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ವರದಿಯಾಗಿದೆ.

First published:

  • 18

    IND vs AUS 2023: ಗುಡ್‌ ನ್ಯೂಸ್‌ ಬೆನ್ನಲ್ಲೇ ಟೀಂ ಇಂಡಿಯಾಗೆ ಬ್ಯಾಡ್ ನ್ಯೂಸ್! ತಂಡಕ್ಕೆ ಸಂಜು ಇನ್, ಬುಮ್ರಾ ಔಟ್!

    ಈ ವರ್ಷ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಸಂಜು ಸ್ಯಾಮ್ಸನ್ ಗಾಯಗೊಂಡಿದ್ದು ಗೊತ್ತೇ ಇದೆ. ಥರ್ಡ್ ಮ್ಯಾನ್ ದಿಕ್ಕಿನತ್ತ ಬೌಂಡರಿ ತಲುಪಿದ ಚೆಂಡನ್ನು ತಡೆಯುವ ಸಲುವಾಗಿ ಸಂಜು ಡೈವ್ ಮಾಡುವಾಗ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು.

    MORE
    GALLERIES

  • 28

    IND vs AUS 2023: ಗುಡ್‌ ನ್ಯೂಸ್‌ ಬೆನ್ನಲ್ಲೇ ಟೀಂ ಇಂಡಿಯಾಗೆ ಬ್ಯಾಡ್ ನ್ಯೂಸ್! ತಂಡಕ್ಕೆ ಸಂಜು ಇನ್, ಬುಮ್ರಾ ಔಟ್!

    ಸ್ಕ್ಯಾನಿಂಗ್ ಮಾಡಿದ ನಂತರ ವೈದ್ಯರು ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ಸೂಚಿಸಿದ್ದರು. ಹೀಗಾಗಿ ಸಂಜು ಸ್ಯಾಮ್ಸನ್ ನ್ಯೂಜಿಲೆಂಡ್ ವಿರುದ್ಧದ ODI ಮತ್ತು T20 ಸರಣಿಯನ್ನು ಕಳೆದುಕೊಂಡಿದ್ದಾರೆ.

    MORE
    GALLERIES

  • 38

    IND vs AUS 2023: ಗುಡ್‌ ನ್ಯೂಸ್‌ ಬೆನ್ನಲ್ಲೇ ಟೀಂ ಇಂಡಿಯಾಗೆ ಬ್ಯಾಡ್ ನ್ಯೂಸ್! ತಂಡಕ್ಕೆ ಸಂಜು ಇನ್, ಬುಮ್ರಾ ಔಟ್!

    ಇತ್ತೀಚೆಗೆ, ಸಂಜು ಸ್ಯಾಮ್ಸನ್ ತಮ್ಮ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ಮಾರ್ಚ್ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಆಯ್ಕೆಗೆ ಸಂಜು ಸ್ಯಾಮ್ಸನ್ ಲಭ್ಯವಾಗಲಿದ್ದಾರೆ.

    MORE
    GALLERIES

  • 48

    IND vs AUS 2023: ಗುಡ್‌ ನ್ಯೂಸ್‌ ಬೆನ್ನಲ್ಲೇ ಟೀಂ ಇಂಡಿಯಾಗೆ ಬ್ಯಾಡ್ ನ್ಯೂಸ್! ತಂಡಕ್ಕೆ ಸಂಜು ಇನ್, ಬುಮ್ರಾ ಔಟ್!

    ಅದೇ ಸಮಯದಲ್ಲಿ, ಬೆನ್ನುನೋವಿನಿಂದ ಕಳೆದ ವರ್ಷದಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಕೂಡ ಫಿಟ್ನೆಸ್ ಪರೀಕ್ಷೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಆದರೆ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂದು ವರದಿಯಾಗಿದೆ.

    MORE
    GALLERIES

  • 58

    IND vs AUS 2023: ಗುಡ್‌ ನ್ಯೂಸ್‌ ಬೆನ್ನಲ್ಲೇ ಟೀಂ ಇಂಡಿಯಾಗೆ ಬ್ಯಾಡ್ ನ್ಯೂಸ್! ತಂಡಕ್ಕೆ ಸಂಜು ಇನ್, ಬುಮ್ರಾ ಔಟ್!

    ಜಸ್ಪ್ರೀತ್ ಬುಮ್ರಾ 100 ಪ್ರತಿಶತ ಫಿಟ್ನೆಸ್ ಸಾಧಿಸಲು ಇನ್ನೂ ಒಂದು ತಿಂಗಳು ತೆಗೆದುಕೊಳ್ಳಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದು ಟೀಂ ಇಂಡಿಯಾ ಪಾಲಿಗೆ ಒಂದು ರೀತಿಯ ಬ್ಯಾಡ್ ನ್ಯೂಸ್ ಆಗಿದೆ. ಏಕೆಂದರೆ ಬುಮ್ರಾ ಅವರಂತಹ ಬೌಲರ್ ತಂಡದಿಂದ ಹಲವು ದಿನಗಳ ಕಾಲ ದೂರ ಇರುವುದು ತಂಡಕ್ಕೆ ಹಿನ್ನಡೆಯಾಗಿದೆ.

    MORE
    GALLERIES

  • 68

    IND vs AUS 2023: ಗುಡ್‌ ನ್ಯೂಸ್‌ ಬೆನ್ನಲ್ಲೇ ಟೀಂ ಇಂಡಿಯಾಗೆ ಬ್ಯಾಡ್ ನ್ಯೂಸ್! ತಂಡಕ್ಕೆ ಸಂಜು ಇನ್, ಬುಮ್ರಾ ಔಟ್!

    ಸದ್ಯ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡುತ್ತಿದ್ದು, ಆ ಬಳಿಕ ಫೆಬ್ರವರಿ 9ರಿಂದ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಬಾರ್ಡರ್-ಗವಾಸ್ಕರ್ ಸರಣಿಯ ಭಾಗವಾಗಿ ಉಭಯ ತಂಡಗಳು 4 ಟೆಸ್ಟ್ ಪಂದ್ಯಗಳನ್ನು ಆಡಲಿವೆ.

    MORE
    GALLERIES

  • 78

    IND vs AUS 2023: ಗುಡ್‌ ನ್ಯೂಸ್‌ ಬೆನ್ನಲ್ಲೇ ಟೀಂ ಇಂಡಿಯಾಗೆ ಬ್ಯಾಡ್ ನ್ಯೂಸ್! ತಂಡಕ್ಕೆ ಸಂಜು ಇನ್, ಬುಮ್ರಾ ಔಟ್!

    ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಲು ಭಾರತ ಈ ಟೆಸ್ಟ್ ಸರಣಿಯನ್ನು ಗೆಲ್ಲಲೇಬೇಕು. ಈ ಟೆಸ್ಟ್ ಸರಣಿಯಿಂದ ಬುಮ್ರಾ ದೂರ ಉಳಿಯುವ ಸಾಧ್ಯತೆ ಇದೆ. ಮತ್ತು ಆಸೀಸ್ ಜೊತೆಗಿನ ಏಕದಿನ ಸರಣಿಯಿಂದ ಫಿಟ್ ಆಗಲು ಅವಕಾಶವಿದೆ.

    MORE
    GALLERIES

  • 88

    IND vs AUS 2023: ಗುಡ್‌ ನ್ಯೂಸ್‌ ಬೆನ್ನಲ್ಲೇ ಟೀಂ ಇಂಡಿಯಾಗೆ ಬ್ಯಾಡ್ ನ್ಯೂಸ್! ತಂಡಕ್ಕೆ ಸಂಜು ಇನ್, ಬುಮ್ರಾ ಔಟ್!

    ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಯ ಮೊದಲು ಬುಮ್ರಾ ಮರಳುವುದು ಸಾಧ್ಯವಿಲ್ಲ. ಹೀಗಾಗಿ ಬುಮ್ರಾ ತಂಡದಿಂದ ಹೊರಗುಳಿಯಲಿದ್ದು, ಇದೇ ವೇಳೆ ಸಂಜು ಸ್ಯಾಮ್ಸನ್​ ಮತ್ತೊಮ್ಮೆ ತಂಡಕ್ಕೆ ಮರಳುವ ಸಾಧ್ಯತೆ ಇದೆ.

    MORE
    GALLERIES