IND vs AUS: 3ನೇ ಟೆಸ್ಟ್​ನಿಂದ RCB ಬೌಲರ್​ ಔಟ್​? ಯಾರಿಗೆ ಸಿಗಲಿದೆ ಚಾನ್ಸ್?

IND vs AUS: ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್‌ಗಳಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಆದರೆ ಇದಾದ ಬಳಿಕವೂ ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್-11ರಲ್ಲಿ ಬದಲಾವಣೆ ಮಾಡಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

First published:

  • 17

    IND vs AUS: 3ನೇ ಟೆಸ್ಟ್​ನಿಂದ RCB ಬೌಲರ್​ ಔಟ್​? ಯಾರಿಗೆ ಸಿಗಲಿದೆ ಚಾನ್ಸ್?

    ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿದೆ. ಮೊದಲ ಎರಡು ಟೆಸ್ಟ್‌ಗಳು ಕೇವಲ 3 ದಿನಗಳಲ್ಲಿ ಮುಗಿದವು. ಮೂರನೇ ಟೆಸ್ಟ್ ಮಾರ್ಚ್ 1 ರಿಂದ ಇಂದೋರ್‌ನಲ್ಲಿ ನಡೆಯಲಿದೆ. ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಸತತ 2 ಟೆಸ್ಟ್ ಗೆದ್ದ ನಂತರವೂ ಪ್ಲೇಯಿಂಗ್-11 ರಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.

    MORE
    GALLERIES

  • 27

    IND vs AUS: 3ನೇ ಟೆಸ್ಟ್​ನಿಂದ RCB ಬೌಲರ್​ ಔಟ್​? ಯಾರಿಗೆ ಸಿಗಲಿದೆ ಚಾನ್ಸ್?

    ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ ಇನಿಂಗ್ಸ್ ಮತ್ತು ದೆಹಲಿಯಲ್ಲಿ ನಡೆದ ಟೆಸ್ಟ್‌ನಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿದೆ. ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಬಗ್ಗೆ ಮಾತನಾಡುತ್ತಾ, ಅವರು ಮೊದಲ ಟೆಸ್ಟ್‌ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದರು. ಇದಾದ ನಂತರ ಅವರಿಗೆ ಇದುವರೆಗೂ ವಿಕೆಟ್​ ಪಡೆಯಲು ಸಾಧ್ಯವಾಗಲಿಲ್ಲ.

    MORE
    GALLERIES

  • 37

    IND vs AUS: 3ನೇ ಟೆಸ್ಟ್​ನಿಂದ RCB ಬೌಲರ್​ ಔಟ್​? ಯಾರಿಗೆ ಸಿಗಲಿದೆ ಚಾನ್ಸ್?

    28 ವರ್ಷದ ಮೊಹಮ್ಮದ್ ಸಿರಾಜ್ ನಾಗ್ಪುರ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಉಸ್ಮಾನ್ ಖವಾಜಾ ಅವರನ್ನು ಔಟ್ ಮಾಡಿದರು. ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಒಂದು ಓವರ್ ಬೌಲ್ ಮಾಡಿದರು. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಿರಾಜ್ ಮೊದಲ ಇನಿಂಗ್ಸ್ ನಲ್ಲಿ 10 ಓವರ್ ಬೌಲಿಂಗ್ ಮಾಡಿದ್ದರು. ಎರಡನೇ ಇನಿಂಗ್ಸ್‌ನಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಈ ಟೆಸ್ಟ್‌ನಲ್ಲಿ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

    MORE
    GALLERIES

  • 47

    IND vs AUS: 3ನೇ ಟೆಸ್ಟ್​ನಿಂದ RCB ಬೌಲರ್​ ಔಟ್​? ಯಾರಿಗೆ ಸಿಗಲಿದೆ ಚಾನ್ಸ್?

    ದೆಹಲಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ ತಮ್ಮ ಬೌನ್ಸರ್ ಬಾಲ್‌ನಿಂದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಿದರು. ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಅವರ ಬ್ಯಾಟಿಂಗ್​ ನಿಯಂತ್ರಸುವಲ್ಲಿ ಯಶಸ್ವಿಯಾದರು.

    MORE
    GALLERIES

  • 57

    IND vs AUS: 3ನೇ ಟೆಸ್ಟ್​ನಿಂದ RCB ಬೌಲರ್​ ಔಟ್​? ಯಾರಿಗೆ ಸಿಗಲಿದೆ ಚಾನ್ಸ್?

    ಮೊಹಮ್ಮದ್ ಸಿರಾಜ್ 2 ಟೆಸ್ಟ್‌ಗಳಲ್ಲಿ ಒಂದು ವಿಕೆಟ್ ಪಡೆದಿರಬಹುದು. ಆದರೆ ಅವರು ಹೊಸ ಚೆಂಡಿನೊಂದಿಗೆ ಅತ್ಯುತ್ತಮ ಲಯದಲ್ಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಕಮ್ಮಿ ಎನ್ನಬಹುದು. ಇದುವರೆಗೆ 17 ಟೆಸ್ಟ್ ಪಂದ್ಯಗಳಲ್ಲಿ 47 ವಿಕೆಟ್ ಪಡೆದಿದ್ದಾರೆ. 73 ರನ್‌ಗಳಿಗೆ 5 ವಿಕೆಟ್ ಪಡೆದದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 200ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.

    MORE
    GALLERIES

  • 67

    IND vs AUS: 3ನೇ ಟೆಸ್ಟ್​ನಿಂದ RCB ಬೌಲರ್​ ಔಟ್​? ಯಾರಿಗೆ ಸಿಗಲಿದೆ ಚಾನ್ಸ್?

    ಎಡಗೈ ವೇಗದ ಬೌಲರ್ ಜಯದೇವ್ ಉನದ್ಕತ್ ಕೂಡ ಟೆಸ್ಟ್ ತಂಡದಲ್ಲಿದ್ದಾರೆ. ಹಿಂದೆ, ಅವರು ತಮ್ಮ ನಾಯಕತ್ವದಲ್ಲಿ ಸೌರಾಷ್ಟ್ರಕ್ಕೆ ರಣಜಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದರು. ಫೈನಲ್‌ನಲ್ಲಿ ಅವರು ಬಂಗಾಳ ವಿರುದ್ಧ 9 ವಿಕೆಟ್‌ಗಳನ್ನು ಪಡೆದರು. ಇದಾದ ನಂತರವೂ ಅವರಿಗೆ ಮೂರನೇ ಟೆಸ್ಟ್‌ನಲ್ಲಿ ಅವಕಾಶ ಸಿಗುವುದು ಕಷ್ಟವಾಗಿದೆ. ಮೊದಲ 2 ಟೆಸ್ಟ್‌ಗಳಲ್ಲಿಯೂ ಅವರು ಪ್ಲೇಯಿಂಗ್-11 ರ ಭಾಗವಾಗಿರಲಿಲ್ಲ.

    MORE
    GALLERIES

  • 77

    IND vs AUS: 3ನೇ ಟೆಸ್ಟ್​ನಿಂದ RCB ಬೌಲರ್​ ಔಟ್​? ಯಾರಿಗೆ ಸಿಗಲಿದೆ ಚಾನ್ಸ್?

    ಮೂರನೇ ಟೆಸ್ಟ್‌ಗೆ ಆಡುವ-11ರಲ್ಲಿ ಬದಲಾವಣೆ ಕುರಿತು ನೋಡುವುದಾದರೆ, ಕೆಎಲ್ ರಾಹುಲ್ ಮೇಲೆ ಸಾಕಷ್ಟು ಕಳಪೆ ಫಾರ್ಮ್​ನಲ್ಲಿರುವುದರಿಂದ ಅವರನ್ನು ತಂಡದಿಂದ ಕೈಬಿಡಬಹುದು. ರಾಹುಲ್ ಬದಲಿಗೆ ರೋಹಿತ್ ಶರ್ಮಾ ಜೊತೆಗೆ ಶುಭಮನ್ ಗಿಲ್‌ಗೆ ಆರಂಭಿಕರಾಗಿ ಅವಕಾಶ ನೀಡಬಹುದು.

    MORE
    GALLERIES