ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 571 ರನ್ ಗಳಿಸಿ ಆಸೀಸ್ ವಿರುದ್ಧ 91 ರನ್ ಮುನ್ನಡೆ ಸಾಧಿಸಿತ್ತು. ಭಾರತದ ಬೃಹತ್ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಹೈಲೈಟ್ ಎಂದು ಹೇಳಬಹುದು. ರನ್ ಮಷಿನ್ ವಿರಾಟ್ ಕೊಹ್ಲಿ ಬರೋಬ್ಬರಿ 1,205 ದಿನಗಳ ನಂತರ ಅವರ 28ನೇ ಟೆಸ್ಟ್ ಶತಕವನ್ನು ಪೂರೈಸಿದ್ದರು. 364 ಎಸೆತಗಳಲ್ಲಿ 186 ರನ್ ಗಳಿಸಿದ ವಿರಾಟ್ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
* 75 ಅಂತರಾಷ್ಟ್ರೀಯ ಶತಕಗಳು : ನಾಲ್ಕನೇ ಟೆಸ್ಟ್‌ನಲ್ಲಿ ಕೊಹ್ಲಿ ತಮ್ಮ 28ನೇ ಶತಕವನ್ನು ಗಳಿಸಿದ್ದರು. ಅಲ್ಲದೆ ಒಟ್ಟಾರೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ಪರ ವೇಗವಾಗಿ 75ನೇ ಶತಕ ಸಿಡಿಸಿದ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಭಾರತ ಪರ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ವಿರಾಟ್ ಕೊಹ್ಲಿ ಆಗಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ 75 ಶತಕಗಳನ್ನು ಗಳಿಸಿದ್ದರು. ಸಚಿನ್ 566 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರೆ, ಕೊಹ್ಲಿ 552 ಇನ್ನಿಂಗ್ಸ್‌ಗಳಲ್ಲಿ 75 ಶತಕ ಗಳಿಸಿ ಮಿಂಚಿಸಿದ್ದಾರೆ.
* ತವರಿನಲ್ಲಿ ವೇಗವಾಗಿ 11,000 ರನ್ ಪೂರೈಸಿದ ಆಟಗಾರ : ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 186 ರನ್ ಸಿಡಿಸಿದ್ದ ಕೊಹ್ಲಿ ಖಾತೆಗೆ ಮತ್ತೊಂದು ಅಪರೂಪದ ದಾಖಲೆ ಸೇರ್ಪಡೆಯಾಗಿದೆ. ಸ್ಟಾರ್ ಆಟಗಾರ ಕೊಹ್ಲಿ ತವರಿನಲ್ಲಿ 11,000 ರನ್ ಗಳಿಸಿದ್ದು, ವೇಗವಾಗಿ ಅಂದರೆ ಕೇವಲ 224 ಇನ್ನಿಂಗ್ಸ್‌ಗಳಲ್ಲಿ ದಾಖಲೆಯನ್ನು ನಿರ್ಮಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಸಚಿನ್ ಹಾಗೂ ರಿಕಿ ಪಾಂಟಿಂಗ್ ತಮ್ಮ ತಮ್ಮ ದೇಶಗಳ ಪರ ಈ ಸಾಧನೆ ಮಾಡಿದ್ದರು. ಕೊಹ್ಲಿ ಭಾರತದ ಪಿಚ್‌ಗಳಲ್ಲಿ 58.46 ಸರಾಸರಿಯಲ್ಲಿ 11,050 ರನ್ ಗಳಿಸಿದ್ದಾರೆ. ಇದರಲ್ಲಿ 35 ಶತಕ ಹಾಗೂ 51 ಅರ್ಧಶತಕಗಳು ಸೇರಿದೆ.
* 2023ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತ್ಯಧಿಕ ಸ್ಕೋರ್ : ಈ ವರ್ಷದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ವೈಯುಕ್ತಿಕವಾಗಿ ನಾಲ್ಕು ಬಾರಿ ಅಧಿಕ ಸ್ಕೋರ್ ಗಳಿಸಿದ್ದ ಕೊಹ್ಲಿ, ಅಹಮದಾಬಾದ್ ಟೆಸ್ಟ್ನಲ್ಲೂ ಶತಕ (186 ರನ್) ದಾಖಲಿಸಿದ್ದರು. ಇದರೊಂದಿಗೆ ಅಂತಿಮ ಟೆಸ್ಟ್ನಲ್ಲೂ ಅತ್ಯಧಿಕ ಸ್ಕೋರ್ ಗಳಿಸಿದ ಆಟಗಾರ ಕೊಹ್ಲಿ ಎನಿಸಿಕೊಂಡಿದ್ದಾರೆ. ಉಳಿದಂತೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಆಟಗಾರ ಉಸ್ಮಾನ್ ಖವಾಜಾ ಅವರ 180 ರನ್ ಗಳಿಸಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
* ಆಸೀಸ್ ವಿರುದ್ಧ ಅತಿ ಹೆಚ್ಚು ರನ್ ಸಿಡಿಸಿದ 2ನೇ ಆಟಗಾರ : ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 4,856 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 6,707 ರನ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುತ್ತಿದ್ದಂತೆ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದ್ದರು. ವೆಸ್ಟ್ ಇಂಡೀಸ್ ಮಾಜಿ ಸ್ಟಾರ್ ಆಟಗಾರ ಆಸ್ಟ್ರೇಲಿಯಾ ವಿರುದ್ಧ 4,714 ರನ್ ಗಳಿಸಿದ್ದಾರೆ.
* ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ : ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ (WTC) ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಭಾರತ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 2019ರಲ್ಲಿ WTCಯಲ್ಲಿ 52 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ 1,797 ರನ್ ಗಳಿಸಿದ್ದಾರೆ. ಉಳಿದಂತೆ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ 36 ಇನ್ನಿಂಗ್ಸ್‌ಗಳಲ್ಲಿ 1,794 ರನ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.