ಎಡಗೈ ಬ್ಯಾಟ್ಸ್‌ಮನ್‌ಗಳು ಎಡಗೈ ಸ್ಪಿನ್ನರ್‌ಗಳನ್ನು ಎದುರಿಸುವುದು ಸುಲಭ. ಆದರೆ ರವೀಂದ್ರ ಜಡೇಜಾ ಕೇವಲ 89 ಎಸೆತಗಳಲ್ಲಿ ನಾಲ್ಕು ಬಾರಿ ಡೇವಿಡ್ ವಾರ್ನರ್ ವಿಕೆಟ್ ಪಡೆದಿದ್ದಾರೆ. ವಾರ್ನರ್ ಅವರನ್ನು 2013ರ ಸರಣಿಯಲ್ಲಿ ಜಡೇಜಾ ಎರಡು ಬಾರಿ ಮತ್ತು 2017ರ ಸರಣಿಯಲ್ಲಿ ಎರಡು ಬಾರಿ ಔಟ್ ಮಾಡಿದ್ದರು. ಹೀಗಾಗಿ ಈ ಟೆಸ್ಟ್ ಸರಣಿಯಲ್ಲಿ ಜಡೇಜಾ ವಿರುದ್ಧ ಅವರು ಯಾವ ರೀತಿ ಆಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.