IND vs AUS 3rd Test: 2 ಬಾರಿ ಜೀವದಾನ ಸಿಕ್ಕರೂ ಬುದ್ದಿ ಕಲಿಯದ ರೋಹಿತ್, ಬ್ಯಾಟಿಂಗ್​ ಮರೆತ್ರಾ ಹಿಟ್​ಮ್ಯಾನ್​ ಅಂದ್ರು ಫ್ಯಾನ್ಸ್

IND vs AUS 3rd Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್​ ಪಂದ್ಯ ಇಂದೋರ್​ನಲ್ಲಿ ನಡೆಯುತ್ತಿದೆ. ಆದರೆ ಈ ಟೆಸ್ಟ್​​ ಪಂದ್ಯದ ಮೊದಲ ದಿನವೇ ಭಾರತ ಆಲ್​ಔಟ್​ ಆಗುವ ಮೂಲಕ ನಿರಾಸೆ ಮೂಡಿಸಿದೆ.

First published:

  • 17

    IND vs AUS 3rd Test: 2 ಬಾರಿ ಜೀವದಾನ ಸಿಕ್ಕರೂ ಬುದ್ದಿ ಕಲಿಯದ ರೋಹಿತ್, ಬ್ಯಾಟಿಂಗ್​ ಮರೆತ್ರಾ ಹಿಟ್​ಮ್ಯಾನ್​ ಅಂದ್ರು ಫ್ಯಾನ್ಸ್

    ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ 3ನೇ ಟೆಸ್ಟ್ ಪಂದ್ಯ ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

    MORE
    GALLERIES

  • 27

    IND vs AUS 3rd Test: 2 ಬಾರಿ ಜೀವದಾನ ಸಿಕ್ಕರೂ ಬುದ್ದಿ ಕಲಿಯದ ರೋಹಿತ್, ಬ್ಯಾಟಿಂಗ್​ ಮರೆತ್ರಾ ಹಿಟ್​ಮ್ಯಾನ್​ ಅಂದ್ರು ಫ್ಯಾನ್ಸ್

    ಭಾರತ ತಂಡವೂ ಸಹ 2 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಆದರೆ ಆಸೀಸ್​ ಬೌಲಿಂಗ್​ ದಾಳಿಗೆ ತತ್ತರಿಸಿದ ಭಾರತ 109 ರನ್​​ಗಳಿಗೆ ಆಲೌಟ್​ ಆಯಿತು. ಭಾರತದ ನಾಯಕ ರೋಹಿತ್​ ಶರ್ಮಾ ಸಹ ಬೇಗ ಔಟ್​ ಆಗುವ ಮೂಲಕ ನಿರಾಸೆ ಮೂಡಿಸಿದರು.

    MORE
    GALLERIES

  • 37

    IND vs AUS 3rd Test: 2 ಬಾರಿ ಜೀವದಾನ ಸಿಕ್ಕರೂ ಬುದ್ದಿ ಕಲಿಯದ ರೋಹಿತ್, ಬ್ಯಾಟಿಂಗ್​ ಮರೆತ್ರಾ ಹಿಟ್​ಮ್ಯಾನ್​ ಅಂದ್ರು ಫ್ಯಾನ್ಸ್

    ಆದರೆ. ಆಸ್ಟ್ರೇಲಿಯಾದ ತಪ್ಪಿನಿಂದ ರೋಹಿತ್ ಶರ್ಮಾ ಎರಡು ಬಾರಿ ಔಟಾಗದೇ ಉಳಿದಿದ್ದರು. ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ, ನಾಯಕ ಸ್ಟೀವ್ ಸ್ಮಿತ್ ಮತ್ತು ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಸ್ವಲ್ಪ ಧೈರ್ಯ ಮಾಡಿದ್ದರೆ, ಟೀಂ ಇಂಡಿಯಾ ಪಂದ್ಯದ ಮೊದಲ ಎಸೆತದಿಂದಲೇ ಸಂಕಷ್ಟಕ್ಕೆ ಸಿಲುಕುತ್ತಿತ್ತು.

    MORE
    GALLERIES

  • 47

    IND vs AUS 3rd Test: 2 ಬಾರಿ ಜೀವದಾನ ಸಿಕ್ಕರೂ ಬುದ್ದಿ ಕಲಿಯದ ರೋಹಿತ್, ಬ್ಯಾಟಿಂಗ್​ ಮರೆತ್ರಾ ಹಿಟ್​ಮ್ಯಾನ್​ ಅಂದ್ರು ಫ್ಯಾನ್ಸ್

    ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಆಡದ ಸ್ಟಾರ್ಕ್ ಈ ಪಂದ್ಯದಲ್ಲಿ ಪುನರಾಗಮನ ಮಾಡಿದರು. ಮೊದಲ ಎಸೆತದಲ್ಲಿ ರೋಹಿತ್ ಅವರನ್ನು ಔಟ್ ಮಾಡಿದ್ದರು. ಆದರೆ ಆನ್‌ಫೀಲ್ಡ್ ಅಂಪೈರ್ ನಿತಿನ್ ಮೆನನ್ ನಾಟೌಟ್ ಎಂದು ಘೋಷಿಸಿದರು. ಆದರೂ, ಆಸೀಸ್ ರಿವ್ಯೂ ತೆಗೆದುಕೊಳ್ಳಲಿಲ್ಲ. ಇದರೊಂದಿಗೆ. ರೋಹಿತ್ ಪ್ರಥಮ ಬಾರಿಗೆ ಉಳಿದರು.

    MORE
    GALLERIES

  • 57

    IND vs AUS 3rd Test: 2 ಬಾರಿ ಜೀವದಾನ ಸಿಕ್ಕರೂ ಬುದ್ದಿ ಕಲಿಯದ ರೋಹಿತ್, ಬ್ಯಾಟಿಂಗ್​ ಮರೆತ್ರಾ ಹಿಟ್​ಮ್ಯಾನ್​ ಅಂದ್ರು ಫ್ಯಾನ್ಸ್

    ಆದರೆ ಬಳಿಕ ನೋಡಿದಾಗ ಅದು ಔಟ್​ ಆಗಿತ್ತು. ಇದರಿಂದಾಗಿ ರೋಹಿತ್​ ಮೊದಲ ಜೀವದಾನ ಪಡೆದರು. ಅಲ್ಲದೆ, ಅದೇ ಓವರ್‌ನ ನಾಲ್ಕನೇ ಎಸೆತದಲ್ಲಿ ರೋಹಿತ್ ಮತ್ತೊಮ್ಮೆ ಔಟಾದರು. ಇದನ್ನು ಅಂಪೈರ್ ನಾಟೌಟ್ ಎಂದು ಘೋಷಿಸಿದರು. ಆದರೆ, ಇಲ್ಲೂ ಆಸ್ಟ್ರೇಲಿಯಾ ತಂಡ ರಿವ್ಯೂ ಮೊರೆ ಹೋಗಲಿಲ್ಲ.

    MORE
    GALLERIES

  • 67

    IND vs AUS 3rd Test: 2 ಬಾರಿ ಜೀವದಾನ ಸಿಕ್ಕರೂ ಬುದ್ದಿ ಕಲಿಯದ ರೋಹಿತ್, ಬ್ಯಾಟಿಂಗ್​ ಮರೆತ್ರಾ ಹಿಟ್​ಮ್ಯಾನ್​ ಅಂದ್ರು ಫ್ಯಾನ್ಸ್

    ಆಸ್ಟ್ರೇಲಿಯಾ ರಿವ್ಯೂ ತೆಗೆದುಕೊಂಡಿದ್ದರೆ ರೋಹಿತ್ ಪೆವಿಲಿಯನ್ ಸೇರಬೇಕಿತ್ತು. ಏಕೆಂದರೆ ಬಾಲ್ ಟ್ರ್ಯಾಕಿಂಗ್ ನಲ್ಲಿ ರೋಹಿತ್ ಔಟಾಗಿರುವುದು ಕಂಡು ಬಂದಿತು. ಆದರೆ ಆ ನಂತರ ರೋಹಿತ್ ಮೊದಲ ಓವರ್​ನ ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿ ಸ್ವಲ್ಪ ಒತ್ತಡದಿಂದ ಹೊರಬಂದರು. ಆದರೆ, ರೋಹಿತ್‌ಗೆ ಈ ಎರಡು ಜೀವದಾನವನ್ನು ಹೆಚ್ಚು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.

    MORE
    GALLERIES

  • 77

    IND vs AUS 3rd Test: 2 ಬಾರಿ ಜೀವದಾನ ಸಿಕ್ಕರೂ ಬುದ್ದಿ ಕಲಿಯದ ರೋಹಿತ್, ಬ್ಯಾಟಿಂಗ್​ ಮರೆತ್ರಾ ಹಿಟ್​ಮ್ಯಾನ್​ ಅಂದ್ರು ಫ್ಯಾನ್ಸ್

    ಆದರೆ ರೋಹಿತ್​ ಶರ್ಮಾ 23 ಎಸೆತಗಳಲ್ಲಿ 12 ರನ್ ಗಳಿಸಿದ ನಂತರ ಮ್ಯಾಥ್ಯೂ ಕುಹ್ನೆಮನ್ ಎಸೆತದಲ್ಲಿ ಸ್ಟಂಪ್ ಔಟ್ ಆದರು. ಇದರೊಂದಿಗೆ ಭಾರತ 27 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆ ನಂತರವೂ ಆಸ್ಟ್ರೇಲಿಯಾದ ಬೌಲರ್‌ಗಳು ಭಾರತದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಿದರು.

    MORE
    GALLERIES