ಇದರ ಬಳಿಕ ವಿರಾಟ್ ಕೊಹ್ಲಿಯನ್ನು ಔಟ್ ಎಂದು ಘೋಷಿಸಿದ್ದಕ್ಕಾಗಿ ಆನ್ ಫೀಲ್ಡ್ ಅಂಪೈರ್ ನಿತಿನ್ ಮೆನನ್ ಮತ್ತು ಮೂರನೇ ಅಂಪೈರ್ ವಿರುದ್ಧ ಅಭಿಮಾನಿಗಳು ಕೋಪಗೊಂಡಿದ್ದಾರೆ. ಮ್ಯಾಥ್ಯೂ ಕುನೆಮನ್ ಬೌಲಿಂಗ್ ನಲ್ಲಿ ಕೊಹ್ಲಿ ಡಿಫೆನ್ಸ್ ಆಡಲು ಯತ್ನಿಸಿದರು. ಆದರೆ ಚೆಂಡು ಪ್ಯಾಡ್‌ಗೆ ಬಡಿಯಿತು. ಎಲ್ಬಿಗೆ ಮನವಿ ಮಾಡಿದರು. ಅಂಪೈರ್ ಔಟ್ ನೀಡಿದರು. ಆದರೆ ಕೊಹ್ಲಿ ರಿವ್ಯೂ ತೆಗೆದುಕೊಂಡರು. ಆಗ ಚೆಂಡು ಪ್ಯಾಡ್ ಮತ್ತು ಬ್ಯಾಟ್‌ಗೆ ಏಕಕಾಲದಲ್ಲಿ ಬಡಿದಿದ್ದು ಕಂಡುಬಂದಿತು. ಈ ಸಂದರ್ಭದಲ್ಲಿ ಕ್ರಿಕೆಟ್ ಕಾನೂನು 36.2.2 ರ ಪ್ರಕಾರ ಬ್ಯಾಟ್‌ಗೆ ಮೊದಲ ಸ್ಪರ್ಶ ಸಂಭವಿಸಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ ಮೂರನೇ ಅಂಪೈರ್ ಕೊಹ್ಲಿಯನ್ನು ಔಟ್ ಎಂದು ಘೋಷಿಸಿದರು.