IND vs AUS: ಕೆಎಲ್ ರಾಹುಲ್​ಗೆ ಇದು ಕೊನೆ ಅವಕಾಶ, ಹೇಗಿರಲಿದೆ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ಲೇಯಿಂಗ್​ 11?

IND vs AUS 2nd Test: ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದ ಮೇಲೆ ಆಸೀಸ್ ಮತ್ತು ಭಾರತ ಗಮನಹರಿಸಿವೆ. ಮೊದಲ ಪಂದ್ಯದ ಸೋಲಿನಿಂದ ಹೊರಬರಲು ಆಸ್ಟ್ರೇಲಿಯಾ ಭರ್ಜರಿ ಸಿದ್ಧತೆ ನಡೆಸಿದೆ.

First published:

  • 19

    IND vs AUS: ಕೆಎಲ್ ರಾಹುಲ್​ಗೆ ಇದು ಕೊನೆ ಅವಕಾಶ, ಹೇಗಿರಲಿದೆ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಬಾರ್ಡರ್ ಗವಾಸ್ಕರ್ ಟ್ರೋಫಿ 2023ರಲ್ಲಿ ಭಾರತ ಉತ್ತಮ ಆರಂಭ ಪಡೆದಿದೆ. 4 ಟೆಸ್ಟ್‌ಗಳ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ 1-0 ಮುನ್ನಡೆ ಸಾಧಿಸಿದೆ. ನಾಗ್ಪುರದಲ್ಲಿ ನಡೆದ ಆರಂಭಿಕ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ.

    MORE
    GALLERIES

  • 29

    IND vs AUS: ಕೆಎಲ್ ರಾಹುಲ್​ಗೆ ಇದು ಕೊನೆ ಅವಕಾಶ, ಹೇಗಿರಲಿದೆ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಇದೀಗ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಎರಡನೇ ಟೆಸ್ಟ್‌ಗಾಗಿ ದೆಹಲಿಗೆ ತೆರಳಿದೆ. ಈಗ ಎರಡನೇ ಟೆಸ್ಟ್​ಗಾಗಿ ಉಭಯ ತಂಡಗಳು ಭರ್ಜರಿ ಸಿದ್ಧತೆ ನಡೆಸಿದೆ.

    MORE
    GALLERIES

  • 39

    IND vs AUS: ಕೆಎಲ್ ರಾಹುಲ್​ಗೆ ಇದು ಕೊನೆ ಅವಕಾಶ, ಹೇಗಿರಲಿದೆ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಸೂರ್ಯಕುಮಾರ್ ಯಾದವ್ ಸ್ಥಾನದಲ್ಲಿ ಶ್ರೇಯಸ್?: ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದ ಮೇಲೆ ಆಸೀಸ್ ಮತ್ತು ಭಾರತ ಗಮನಹರಿಸಿವೆ. ಮೊದಲ ಪಂದ್ಯದ ಸೋಲಿನಿಂದ ಹೊರಬರಲು ಆಸ್ಟ್ರೇಲಿಯಾ ಸಿದ್ಧತೆ ನಡೆಸಿದೆ. ಭಾರತ ಉತ್ತಮ ಪ್ರದರ್ಶನ ನೀಡುವ ಉದ್ದೇಶದಿಂದ ತಂಡದ ಸಂಯೋಜನೆಯ ಮೇಲೆ ಪ್ರಮುಖವಾಗಿ ಗಮನ ಹರಿಸುವ ಸಾಧ್ಯತೆ ಇದೆ.

    MORE
    GALLERIES

  • 49

    IND vs AUS: ಕೆಎಲ್ ರಾಹುಲ್​ಗೆ ಇದು ಕೊನೆ ಅವಕಾಶ, ಹೇಗಿರಲಿದೆ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ವಾಸ್ತವವಾಗಿ, ಮೊದಲ ಟೆಸ್ಟ್‌ನಲ್ಲಿ ರೋಹಿತ್, ಜಡೇಜಾ ಮತ್ತು ಅಕ್ಷರ್ ಹೊರತುಪಡಿಸಿ ಉಳಿದ ಆಟಗಾರರು ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಗ್ರ ಕ್ರಮಾಂಕದಲ್ಲಿ ರೋಹಿತ್ ಏಕಾಂಗಿಯಾಗಿ ನಿಂತರೆ, ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲವಾಯಿತು. ಶ್ರೇಯಸ್ ಅಯ್ಯರ್ ಫಿಟ್ನೆಸ್ ಸಾಧಿಸಿದ ನಂತರ ತಂಡವನ್ನು ಸೇರಿಕೊಂಡಿದ್ದಾರೆ.

    MORE
    GALLERIES

  • 59

    IND vs AUS: ಕೆಎಲ್ ರಾಹುಲ್​ಗೆ ಇದು ಕೊನೆ ಅವಕಾಶ, ಹೇಗಿರಲಿದೆ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಇದೇ ವೇಳೆ ಅವರು ದೆಹಲಿಯಲ್ಲಿ ಎರಡನೇ ಟೆಸ್ಟ್ ಆಡುವ ಸಾಧ್ಯತೆ ಇದೆ. ಸೂರ್ಯಕುಮಾರ್ ಯಾದವ್ ಸ್ಥಾನದಲ್ಲಿ ಶ್ರೇಯಸ್ ತಂಡ ಸೇರುವ ಸೂಚನೆಗಳಿವೆ. ಟಿ20ಯಲ್ಲಿ ಟೀಂ ಇಂಡಿಯಾದ ನಂ.1 ಬ್ಯಾಟ್ಸ್ ಮನ್ ಆಗಿರುವ ಸೂರ್ಯಕುಮಾರ್ ಯಾದವ್ ಈ ಪಂದ್ಯದಿಂದ ಹೊರಗಿಡುವ ಸಾಧ್ಯತೆ ಹೆಚ್ಚಿದೆ.

    MORE
    GALLERIES

  • 69

    IND vs AUS: ಕೆಎಲ್ ರಾಹುಲ್​ಗೆ ಇದು ಕೊನೆ ಅವಕಾಶ, ಹೇಗಿರಲಿದೆ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಕೆಎಲ್ ರಾಹುಲ್ ಶಕ್ತಿ ಪ್ರದರ್ಶಿಸುತ್ತಾರಾ?: ಭಾರತ ತಂಡದಲ್ಲಿ ಈ ಬದಲಾವಣೆಯಾಗುವ ಸಾಧ್ಯತೆಗಳಿವೆ. ಇದರ ನಡುವೆ ಕೆಎಲ್ ರಾಹುಲ್ ಫಾರ್ಮ್ ಬಗ್ಗೆ ಪ್ರಶ್ನೆಗಳು ಎದ್ದಿವೆ.

    MORE
    GALLERIES

  • 79

    IND vs AUS: ಕೆಎಲ್ ರಾಹುಲ್​ಗೆ ಇದು ಕೊನೆ ಅವಕಾಶ, ಹೇಗಿರಲಿದೆ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಆದರೆ ದೆಹಲಿ ಟೆಸ್ಟ್ ನಲ್ಲೂ ರಾಹುಲ್ ಆಡುವ ಸಾಧ್ಯತೆ ಇದೆ. ಇದರೊಂದಿಗೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ರಾಹುಲ್ ಗೆ ಮತ್ತೊಂದು ಅವಕಾಶ ನೀಡಲಿದೆ. ಇದರೊಂದಿಗೆ ಗಿಲ್ ಮತ್ತೊಮ್ಮೆ ನಿರಾಸೆ ಎದುರಿಸಲಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ವಿಫಲರಾದರೆ, ಮೂರನೇ ಟೆಸ್ಟ್‌ಗೆ ಶುಭಮನ್ ಗಿಲ್‌ಗೆ ಬಾಗಿಲು ತೆರೆಯುತ್ತದೆ ಎಂದು ಹೇಳಲಾಗುತ್ತದೆ.

    MORE
    GALLERIES

  • 89

    IND vs AUS: ಕೆಎಲ್ ರಾಹುಲ್​ಗೆ ಇದು ಕೊನೆ ಅವಕಾಶ, ಹೇಗಿರಲಿದೆ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಭಾರತ  ಸಂಭಾವ್ಯ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್, ಬ್ಯಾಟ್ಸ್‌ಮನ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್

    MORE
    GALLERIES

  • 99

    IND vs AUS: ಕೆಎಲ್ ರಾಹುಲ್​ಗೆ ಇದು ಕೊನೆ ಅವಕಾಶ, ಹೇಗಿರಲಿದೆ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ಲೇಯಿಂಗ್​ 11?

    ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್, ಬ್ಯಾಟರ್), ಇಶಾನ್ ಕಿಶನ್ (ವಿಕೆಟ್ ಕೀಪರ್, ಬ್ಯಾಟರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೂರ್ಯಕುಮಾರ್ ಯಾದವ್.

    MORE
    GALLERIES