ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ದ್ರಾವಿಡ್, ಶ್ರೇಯಸ್ ಅಯ್ಯರ್ ಅವರು ಮತ್ತೆ ಬಂದಿದ್ದು, ಅವರು ಫಿಟ್ ಆಗಿರುವುದು ಸಂತಸ ತಂದಿದೆ. ಇವತ್ತು ತರಬೇತಿಯನ್ನೂ ಮಾಡಿದರು. ಅವರು ಪಂದ್ಯಕ್ಕೆ ಫಿಟ್ ಆಗಿ ಉಳಿದರೆ, ಅವರು ನೇರವಾಗಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಬಹುದು ಎಂದು ಹೇಳಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಬದಲಾವಣೆಗೆ ಸಿದ್ಧವಾಗಿದೆ ಎಂಬುದು ಕೋಚ್ ಹೇಳಿಕೆಯಿಂದ ಸ್ಪಷ್ಟವಾಗಿದೆ.