Ravindra Jadeja: ಬಾಲ್‌ ಟ್ಯಾಂಪರಿಂಗ್‌ ಮಾಡಿದ್ರಾ ಜಡೇಜಾ? ಐಸಿಸಿಯಿಂದ ಬ್ಯಾನ್ ಆಗ್ತಾರಾ ಜಡ್ಡು-ಸಿರಾಜ್​?

Ravindra Jadeja: ರವೀಂದ್ರ ಜಡೇಜಾ ಮೊದಲ ಟೆಸ್ಟ್‌ನ ಮೊದಲ ದಿನದಲ್ಲಿ 5 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೀಂ ಇಂಡಿಯಾದ ಮೇಲುಗೈ ಸಾಧಿಸಲು ಸಹಾಯಕರಾದರು. ಆದರೆ ಈ ವೇಳೆ ಹೊಸ ವಿವಾದವೊಂದು ಜಡೇಜಾ ಸುತ್ತ ಸುಳಿಯುತ್ತಿದೆ.

First published:

  • 18

    Ravindra Jadeja: ಬಾಲ್‌ ಟ್ಯಾಂಪರಿಂಗ್‌ ಮಾಡಿದ್ರಾ ಜಡೇಜಾ? ಐಸಿಸಿಯಿಂದ ಬ್ಯಾನ್ ಆಗ್ತಾರಾ ಜಡ್ಡು-ಸಿರಾಜ್​?

    ಗಾಯದ ನಂತರ ರವೀಂದ್ರ ಜಡೇಜಾ ಮೈದಾನದಲ್ಲಿ ಭರ್ಜರಿ ಕಂಬ್ಯಾಕ್​ ಮಾಡಿದ್ದಾರೆ, ಜಡೇಜಾ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ (IND vs AUS) ಮೊದಲ ದಿನದಲ್ಲಿ 5 ವಿಕೆಟ್ ಪಡೆದು ಮಿಂಚಿದರು. ಇದರಿಂದಾಗಿ ಕಾಂಗರೂ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 177 ರನ್​ಗಳಿಗೆ ಆಲೌಟ್​ ಆಯಿತು.

    MORE
    GALLERIES

  • 28

    Ravindra Jadeja: ಬಾಲ್‌ ಟ್ಯಾಂಪರಿಂಗ್‌ ಮಾಡಿದ್ರಾ ಜಡೇಜಾ? ಐಸಿಸಿಯಿಂದ ಬ್ಯಾನ್ ಆಗ್ತಾರಾ ಜಡ್ಡು-ಸಿರಾಜ್​?

    ಇದರ ನಡುವೆ ಜಡೇಜಾ ಅವರ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದಾದ ನಂತರ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಅನುಭವಿಗಳು ಅವರ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಅದರಲ್ಲಿಯೂ ಜಡ್ಡು ಮತ್ತು ಸಿರಾಜ್ ಮೇಲೆ ಅನೇಕರು ಬಾಲ್ ಟ್ಯಾಂಪರಿಂಗ್​ ವಿವಾದವನ್ನು ಹೇಳುತ್ತಿದ್ದಾರೆ.

    MORE
    GALLERIES

  • 38

    Ravindra Jadeja: ಬಾಲ್‌ ಟ್ಯಾಂಪರಿಂಗ್‌ ಮಾಡಿದ್ರಾ ಜಡೇಜಾ? ಐಸಿಸಿಯಿಂದ ಬ್ಯಾನ್ ಆಗ್ತಾರಾ ಜಡ್ಡು-ಸಿರಾಜ್​?

    ರವೀಂದ್ರ ಜಡೇಜಾ ಜೊತೆ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಬೆರಳಿಗೆ ಕ್ರೀಂನಂಥದ್ದನ್ನು ಹಚ್ಚುತ್ತಿರುವುದು ಕಂಡುಬಂದಿದೆ. ಈ ಸಮಯದಲ್ಲಿ, ಅವರ ಕೈಯಲ್ಲಿ ಬಾಲ್​ ಕೂಡ ಇರುವುದು ಕಂಡುಬಂದಿದೆ. ಆದರೆ ಇದರ ಬಗ್ಗೆ ಜಡೇಜಾ ಅಥವಾ ಸಿರಾಜ್​ ಅವರೇ ಉತ್ತರ ನೀಡಬೇಕಾಗಿದೆ.

    MORE
    GALLERIES

  • 48

    Ravindra Jadeja: ಬಾಲ್‌ ಟ್ಯಾಂಪರಿಂಗ್‌ ಮಾಡಿದ್ರಾ ಜಡೇಜಾ? ಐಸಿಸಿಯಿಂದ ಬ್ಯಾನ್ ಆಗ್ತಾರಾ ಜಡ್ಡು-ಸಿರಾಜ್​?

    ಈ ಬಗ್ಗೆ, ಮಾಜಿ ಇಂಗ್ಲೆಂಡ್ ನಾಯಕ ಅವರು ತಮ್ಮ ಸ್ಪಿನ್ನರ್ ಬೆರಳಿಗೆ ಏನು ಹಾಕುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೇಳಿದ್ದಾರೆ. ಯಾವುದೇ ರೀತಿಯ ವಸ್ತುಗಳನ್ನು ಹಚ್ಚುವುದು ಸರಿಯಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೈನ್ ಬರೆದಿದ್ದು, ಸದ್ಯ ಕ್ರಿಕೆಟ್​ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.

    MORE
    GALLERIES

  • 58

    Ravindra Jadeja: ಬಾಲ್‌ ಟ್ಯಾಂಪರಿಂಗ್‌ ಮಾಡಿದ್ರಾ ಜಡೇಜಾ? ಐಸಿಸಿಯಿಂದ ಬ್ಯಾನ್ ಆಗ್ತಾರಾ ಜಡ್ಡು-ಸಿರಾಜ್​?

    ಇದೀಗ ಜಡೇಜಾ ಅವರ ಈ ವಿಚಾರ ಮುನ್ನಲೆಗೆ ಬರುತ್ತಿದ್ದಂತೆ ಟೀಂ ಇಂಡಿಯಾ ಮೋಸದಿಂದ ಆಸ್ಟ್ರೇಲಿಯಾ ತಂಡವನ್ನು ಮೊದಲ ಇನಿಂಗ್ಸ್​ನಲ್ಲಿ ಆಲೌಟ್ ಮಾಡಿತು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಪ್ರೇಮಿಗಳು ಆರೋಪಿಸುತ್ತಿದ್ದಾರೆ.

    MORE
    GALLERIES

  • 68

    Ravindra Jadeja: ಬಾಲ್‌ ಟ್ಯಾಂಪರಿಂಗ್‌ ಮಾಡಿದ್ರಾ ಜಡೇಜಾ? ಐಸಿಸಿಯಿಂದ ಬ್ಯಾನ್ ಆಗ್ತಾರಾ ಜಡ್ಡು-ಸಿರಾಜ್​?

    ಐಸಿಸಿ ನಿಯಮದ ಪ್ರಕಾರ ಆಟಗಾರರು ಬಾಲ್​ಗೆ ಹೊಳಪಿಸಲು ಯಾವುದೇ ವಸ್ತುವಿನ ಬಳಕೆಯನ್ನು ನಿರ್ಬಂಧಿಸಿದೆ, ಉಗುಳನ್ನು ಸಹ ಚೆಂಡಿಗೆ ಹಚ್ಚುವಂತಿಲ್ಲ. ಏನಾದರೂ ಇದು ಸಾಭೀತಾದಲ್ಲಿ ಜಡೇಜಾ ಮತ್ತು ಸಿರಾಜ್​ ಅವರನ್ನು ಐಸಿಸಿ ಬ್ಯಾನ್​ ಮಾಡಬಹುದು. ಸ್ಟೀವ್​ ಸ್ಮಿತ್​ ಸೇರಿದಂತೆ ಆಸೀಸ್​ ಆಟಗಾರರೂ ಸಹ ಒಮ್ಮೆ ಇದೇ ರೀತಿ ಬಾಲ್​ ಟ್ಯಾಂಪರಿಂಗ್​ ವಿವಾದಲ್ಲಿ ಬ್ಯಾನ್ ಆಗಿದ್ದರು.

    MORE
    GALLERIES

  • 78

    Ravindra Jadeja: ಬಾಲ್‌ ಟ್ಯಾಂಪರಿಂಗ್‌ ಮಾಡಿದ್ರಾ ಜಡೇಜಾ? ಐಸಿಸಿಯಿಂದ ಬ್ಯಾನ್ ಆಗ್ತಾರಾ ಜಡ್ಡು-ಸಿರಾಜ್​?

    ಆದರೆ, ಈ ವಿವಾದ ಹೆಚ್ಚಾಗುತ್ತಿದ್ದಂತೆ ಜಡೇಜಾ ಬಾಲ್​ಗೆ ಕೈ ತೋರು ಬೆರಳಿಗೆ ಪೇನ್‌ ಕಿಲ್ಲರ್‌ ಕ್ರೀಮ್ ಹಚ್ಚಿದ್ದಾರೆ ಎಂದು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಈಗಾಗಲೇ ಐಸಿಸಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್‌ಗೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.

    MORE
    GALLERIES

  • 88

    Ravindra Jadeja: ಬಾಲ್‌ ಟ್ಯಾಂಪರಿಂಗ್‌ ಮಾಡಿದ್ರಾ ಜಡೇಜಾ? ಐಸಿಸಿಯಿಂದ ಬ್ಯಾನ್ ಆಗ್ತಾರಾ ಜಡ್ಡು-ಸಿರಾಜ್​?

    ಭಾರತ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಎಸ್​.ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಆರ್. ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

    MORE
    GALLERIES