ಅದರಲ್ಲೂ ಇಂಗ್ಲೆಂಡ್, ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ತಂಡದ ವಿರುದ್ಧ ಆಡುವ ಸಂದರ್ಭದಲ್ಲಿ ಆಸೀಸ್ ಆಟಗಾರರು ಮೈಂಡ್ ಗೇಮ್ ಪ್ಲೇ ಮಾಡೋದರಲ್ಲಿ, ಮಾತಿನ ಮೂಲಕ ಆಕ್ರಮಣಕಾರಿ ಎದುರಾಳಿಯನ್ನ ಕುಗ್ಗಿಸುವ ಕೆಲಸ ಮಾಡ್ತಾರೆ. ಸದ್ಯ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದು, ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನವೇ ಆಸೀಸ್ ಆಟಗಾರರು ಮೈಂಡ್ ಗೇಮ್ ಶುರು ಮಾಡಿದ್ದಾರೆ.
ಅಶ್ವಿನ್ ಎಸೆದ ಚೆಂಡು ಪಿಚ್ ಆಗಿ ಬ್ಯಾಟರ್ಗೆ ಅಚ್ಚರಿಯಾಗುವಂತೆ ಬೌನ್ಸ್ ಆಗಿ ಟರ್ನ್ ಆಗಿತ್ತು. ಇದರಿಂದ ಬ್ಯಾಟ್ ಬೀಸುತ್ತಿದ್ದ ಲಬುಶೇನ್ ಕ್ಷಣ ಕಾಲ ಶಾಕ್ಗೆ ಒಳಗಾಗಿದ್ದರು. ಆದರೆ ಇದನ್ನು ಮರೆಮಾಚಲು ಮೈಂಡ್ ಗೇಮ್ ಶುರು ಮಾಡಿದ್ದ ಆತ, ಬೌಲರ್ ಕಡೆ ತಿರುಗಿ ನನ್ನಿಂದ ಆಗುತ್ತೆ ಎಂದು ಸನ್ನೆ ಮಾಡಿದ್ದ. ಇತ್ತ ಲಬುಶೇನ್ಗೆ ಕೌಂಟರ್ಗೆ ಕೊಟ್ಟ ಅಶ್ವಿನ್, ಚೆಂಡು ತಿರುಗಿ ತಿರುಗಿ ನಿನ್ನತ್ತ ಬರುತ್ತೆ ಹುಷಾರು ಅಂತ ಕೈಯಲ್ಲಿ ಸನ್ನೆ ಮಾಡಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇತ್ತ ಆಸೀಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಕೂಡ ತಮ್ಮ ಟ್ರೇಡ್ ಮಾರ್ಕ್ 'ನೋ ಕಾಲ್' ಮೂಲಕ ಟೀಂ ಇಂಡಿಯಾ ಬೌಲರ್ಗಳಿಗೆ ಕಿರಿಕಿರಿ ಮಾಡಲು ಯತ್ನಿಸಿದ್ದರು. ಅಂದಹಾಗೇ, ಎಸೆತವನ್ನು ಎದುರಿಸಿದ ಬಳಿಕ ಸ್ಮಿತ್ ನಾನ್‌ಸ್ಟ್ರೈಕರ್‌ನ ತುದಿಗೆ 'ನೋ' ಎಂದು ಕೂಗುವ ಅಭ್ಯಾಸವಿದ್ದು, ಇದನ್ನು ಬೌಲರ್ಗಳ ಯೋಜನೆಯನ್ನು ವಿಫಲಗೊಳಿಸಲು ಮೈಂಡ್ ಗೇಮ್ ರೀತಿ ಬಳಕೆ ಮಾಡ್ತಾರೆ ಎನ್ನಲಾಗಿದೆ.
ಜಡೇಜಾ ಬೌಲಿಂಗ್ ವೇಳೆಯೂ ಇಂತದ್ದೆ ಘಟನೆ ನಡೆದಿದೆ. ಜಡೇಜಾ ಎಸೆದ ಚೆಂಡು ಬಿಗ್ ಟರ್ನ್ ತೆಗೆದುಕೊಳ್ಳುವ ಮೂಲಕ ಸ್ಮಿತ್ಗೆ ಬ್ಯಾಟ್ಗೆ ಮಿಸ್ ಆಗಿ ವಿಕೆಟ್ಗಳ ಮೇಲೆ ಹಾದು ಹೋಗಿತ್ತು. ಇದರಿಂದ ಅಚ್ಚರಿಗೊಂಡ ಸ್ಮಿತ್, ತಮ್ಮ ಕೈಯನ್ನು ನೇರವಾಗಿ ಬೌಲರ್ ಕಡೆ ತೋರಿಸಿ ಜೋರಾಗಿ ನೋ ಎಂದು ಕೂಗಿದ್ದರು. ಆ ಬಳಿಕ ಟೀಂ ಇಂಡಿಯಾ ಆಟಗಾರ ಜಡೇಜಾರ ಬೌಲಿಂಗ್ ದಾಳಿಗೆ ಮೆಚ್ಚುಗೆ ನೀಡುತ್ತಿದ್ದ ವೇಳೆ ಸ್ಮಿತ್ ಕೂಡ ಥಂಬ್ಸ್ ಅಪ್ ತೋರಿಸಿದ್ದರು.