ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ಸ್ನೇಹದ ಕುರಿತು ಹೊಸದಾಗಿ ಹೇಳುವಂತಹದು ಏನೂ ಉಳಿದಿಲ್ಲ. ಆದರೆ ವಿಶ್ವಕಪ್ ನಂತರ ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಯುವರಾಜ್ ಸಿಂಗ್ ಅವರ ತಂದೆ ಯೋಗ್ ರಾಜ್ ಅವರು ಧೋನಿ ಬಗ್ಗೆ ಸಾಕಷ್ಟು ಕಾಮೆಂಟ್ ಮಾಡಿದ್ದರು. ಯುವಿ ಟೀಂ ಇಂಡಿಯಾದಿಂದ ಸ್ಥಾನ ಕಳೆದುಕೊಳ್ಳಲು ಧೋನಿ ಕಾರಣ ಎಂದು ಸಹ ಹೇಳಿದ್ದರು.
ಮತ್ತೊಂದೆಡೆ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಹರ್ಭಜನ್ ಸಿಂಗ್ ಮತ್ತು VVS ಲಕ್ಷ್ಮಣ್ ಅವರಿಗೆ ಧೋನಿ ನೀಡಿದಷ್ಟು ಬೆಂಬಲ ಸಿಗಲಿಲ್ಲ. ಆದ್ದರಿಂದಲೇ ಅವರ ವೃತ್ತಿಜೀವನವು ಥಟ್ಟನೆ ಕೊನೆಗೊಂಡಿತು. ‘ಕೊರಳಿಗೆ ಕತ್ತಿ ನೇತಾಡುತ್ತಿದೆ ಎಂದು ಗೊತ್ತಾದಾಗ ಮುಕ್ತವಾಗಿ ಆಡಲು ಸಾಧ್ಯವಿಲ್ಲ. ಸೆಹ್ವಾಗ್, ಗಂಭೀರ್, ಹರ್ಭಜನ್ ಮತ್ತು ಲಕ್ಷ್ಮಣ್ ವಿಷಯದಲ್ಲೂ ಅದೇ ಆಯಿತು. ತಂಡದ ನಾಯಕರು ಮತ್ತು ಕೋಚ್‌ಗಳ ಬೆಂಬಲವಿದ್ದರೆ ನಿಮ್ಮ ಆಟದ ಶೈಲಿಯೇ ಬೇರೆಯಾಗಿರುತ್ತದೆ.