ಆಸ್ಟ್ರೇಲಿಯಾ ತಂಡದ ನಾಲ್ವರು ಕ್ರಿಕೆಟಿಗರು ವರ್ಷದ ಟೆಸ್ಟ್ ತಂಡದ ಭಾಗವಾಗಿದ್ದಾರೆ. ಉಸ್ಮಾನ್ ಖವಾಜಾಗೆ ಆರಂಭಿಕ ಬ್ಯಾಟ್ಸ್ಮನ್ ಆಗಿ ಅವಕಾಶ ನೀಡಲಾಗಿದೆ. ಯಂಗ್ ಬ್ಯಾಟರ್ ಮಾರ್ನಸ್ ಲಬುಶಾನೆ ಅವರು ನಂಬರ್-3 ಸ್ಥಾನಕ್ಕಾಗಿ ತಂಡದ ಭಾಗವಾಗಲಿದ್ದಾರೆ. ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ಗೆ ಈ ತಂಡದಲ್ಲಿ ವೇಗದ ಬೌಲರ್ ಆಗಿ ಅವಕಾಶ ನೀಡಲಾಗಿದೆ. ಅಲ್ಲದೇ ನಾಥನ್ ಲಿಯಾನ್ ಮಾತ್ರ ಈ ತಂಡದಲ್ಲಿ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ.
ವಿಕೆಟ್ ಕೀಪರ್ ಬ್ಯಾಟರ್ ಆಗಿ ಅವರಿಗೆ ಈ ತಂಡದಲ್ಲಿ ಸ್ಥಾನ ನೀಡಲಾಗಿದೆ. 2022 ರ ಕೊನೆಯಲ್ಲಿ, ಅವರು ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದಾಗ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಸದ್ಯ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಗಾಯದಿಂದಾಗಿ ಅವರು ಮುಂದಿನ ತಿಂಗಳು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಗವಾಸ್ಕರ್ ಬಾರ್ಡರ್ ಟ್ರೋಫಿಯಿಂದ ಹೊರಗುಳಿಯಲಿದ್ದಾರೆ.