ICC Test rankings: ನೂತನ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; ಕಿಂಗ್​ ಕೊಹ್ಲಿ ಕಂಬ್ಯಾಕ್​, ಈ ಭಾರತೀಯ ಆಟಗಾರನೇ ನಂಬರ್​ 1

ICC Test rankings: ರವಿಚಂದ್ರನ್ ಅಶ್ವಿನ್ ಅವರು ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್ ಕಬಳಿಸಲು ಅಹಮದಾಬಾದ್ ಪಿಚ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಮೂಲಕ ಇದೀಗ ಬಿಡುಗಡೆಯಾದ ಐಸಿಸಿ ನೂತನ ರ್‍ಯಾಂಕಿಂಗ್‌ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

First published:

  • 18

    ICC Test rankings: ನೂತನ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; ಕಿಂಗ್​ ಕೊಹ್ಲಿ ಕಂಬ್ಯಾಕ್​, ಈ ಭಾರತೀಯ ಆಟಗಾರನೇ ನಂಬರ್​ 1

    ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇತ್ತೀಚಿನ ನೂತನ ಟೆಸ್ಟ್ ಬೌಲಿಂಗ್ ಹಾಗೂ ಬ್ಯಟಿಂಗ್​ ರ್‍ಯಾಂಕಿಂಗ್‌ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ಆಟಗಾರರು ಅಗ್ರಸ್ಥಾನಕ್ಕೇರಿದ್ದಾರೆ. ಭಾರತದ ಈ ಬೌಲರ್ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಹಿಂದಿಕ್ಕಿ ದಾಖಲೆ ಬರೆದಿದ್ದರೆ.

    MORE
    GALLERIES

  • 28

    ICC Test rankings: ನೂತನ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; ಕಿಂಗ್​ ಕೊಹ್ಲಿ ಕಂಬ್ಯಾಕ್​, ಈ ಭಾರತೀಯ ಆಟಗಾರನೇ ನಂಬರ್​ 1

    1025 ದಿನಗಳ ಬಳಿಕ ಟೆಸ್ಟ್​ ಕ್ರಿಕೆಟ್​ನಲ್ಲಿ ಆಸೀಸ್​ ವಿರುದ್ಧ ಭರ್ಜರಿ ಶತಕ ಸಿಡಿಸಿದ ಬಳಿಕ ವಿರಾಟ್ ಕೊಹ್ಲಿ ಸಹ ನೂತನ ಐಸಿಸಿ ಶ್ರೇಯಾಂಕದಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ.ಈ ಮೂಲಕ ಕೊಹ್ಲಿ ಅನೇಕ ದಿನಗಳ ಬಳಿಕ ಮತ್ತೆ ರೇಸ್​ನಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 38

    ICC Test rankings: ನೂತನ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; ಕಿಂಗ್​ ಕೊಹ್ಲಿ ಕಂಬ್ಯಾಕ್​, ಈ ಭಾರತೀಯ ಆಟಗಾರನೇ ನಂಬರ್​ 1

    ಇನ್ನು, ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಅವರು ಇತ್ತೀಚಿನ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ವಿಶ್ವದ ನಂಬರ್ 1 ಬೌಲರ್ ಆಗಿದ್ದಾರೆ. ಅಶ್ವಿನ್ 2015 ರಲ್ಲಿ ನಂಬರ್ 1 ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ. ಇತ್ತೀಚಿನ ಟೆಸ್ಟ್ ಶ್ರೇಯಾಂಕದಲ್ಲಿ ಅಶ್ವಿನ್ 869 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ.

    MORE
    GALLERIES

  • 48

    ICC Test rankings: ನೂತನ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; ಕಿಂಗ್​ ಕೊಹ್ಲಿ ಕಂಬ್ಯಾಕ್​, ಈ ಭಾರತೀಯ ಆಟಗಾರನೇ ನಂಬರ್​ 1

    ಈ ಮೂಲಕ ಅಶ್ವಿನ್ ಇಂಗ್ಲೆಂಡ್‌ ತಂಡದ ಜೇಮ್ಸ್ ಆ್ಯಂಡರ್ಸನ್ ಅವರನ್ನು ಹಿಂದಿಕ್ಕಿದ್ದಾರೆ. ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಅಶ್ವಿನ್​ ಬರೋಬ್ಬರಿ 25 ವಿಕೆಟ್ ಪಡೆದ ಮಿಂಚಿದ್ದರು. ಈ ಮೂಲಕ ಇದೀಗ ಅವರು ನಂಬರ್​ 1 ಸ್ಥಾನಕ್ಕೇರಿದ್ದಾರೆ.

    MORE
    GALLERIES

  • 58

    ICC Test rankings: ನೂತನ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; ಕಿಂಗ್​ ಕೊಹ್ಲಿ ಕಂಬ್ಯಾಕ್​, ಈ ಭಾರತೀಯ ಆಟಗಾರನೇ ನಂಬರ್​ 1

    ಅಶ್ವಿನ್ 869 ರೇಟಿಂಗ್ ಪಾಯಿಂಟ್ ಹೊಂಡಿದ್ದಾರೆ. ಬಳಿಕ 2ನೇ ಸ್ಥಾನದಲ್ಲಿ ಜೇಮ್ಸ್ ಆಂಡರ್ಸನ್ 859 ರೇಟಿಂಗ್ ಪಡೆದುಕೊಂಡಿದ್ದಾರೆ. ಅಲ್ಲದೇ ಸದ್ಯ ಇನ್ನೇರಡು ತಿಂಗಳವರೆಗೆ ಇವರಿಬ್ಬರೂ ಇದೇ ಸ್ಥಾನದಲ್ಲಿ ಉಳಿಯುವುದು ಖಚಿತವಾಗಿದೆ.

    MORE
    GALLERIES

  • 68

    ICC Test rankings: ನೂತನ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; ಕಿಂಗ್​ ಕೊಹ್ಲಿ ಕಂಬ್ಯಾಕ್​, ಈ ಭಾರತೀಯ ಆಟಗಾರನೇ ನಂಬರ್​ 1

    ಇವರುಗಳನ್ನು ಹೊರತುಪಡಿಸಿ ಐಸಿಸಿಯ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಪ್ಯಾಟ್ ಕಮ್ಮಿನ್ಸ್ (841), ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (825) ಮತ್ತು ಪಾಕಿಸ್ತಾನದ ಶಾಹೀನ್ ಶಾ ಆಫ್ರಿದಿ (787) ಟಾಪ್ 5ರಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ 7ನೇ ಸ್ಥಾನದಲ್ಲಿದ್ದರೆ, ಜಡೇಜಾ 9 ನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 78

    ICC Test rankings: ನೂತನ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; ಕಿಂಗ್​ ಕೊಹ್ಲಿ ಕಂಬ್ಯಾಕ್​, ಈ ಭಾರತೀಯ ಆಟಗಾರನೇ ನಂಬರ್​ 1

    ಇನ್ನು ಐಸಿಸಿ ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕದಲ್ಲಿ ಭರ್ಜರಿ ಬಡ್ತಿ ಪಡೆದಿರುವ ವಿರಾಟ್ ಕೊಹ್ಲಿ 8 ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿದ್ದಾರೆ. ಈ ಮೂಲಕ 13ನೇ ಸ್ಥಾನಕ್ಕೇರಿದ್ದಾರೆ. ಕೊಹ್ಲಿಯನ್ನು ಹೊರತುಪಡಿಸಿ ರಿಷಭ್​ ಪಂತ್ 9ನೇ ಸ್ಥಾನದಲ್ಲಿ ಹಾಗೂ ನಾಯಕ ರೋಹಿತ್ ಶರ್ಮಾ 10ನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 88

    ICC Test rankings: ನೂತನ ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; ಕಿಂಗ್​ ಕೊಹ್ಲಿ ಕಂಬ್ಯಾಕ್​, ಈ ಭಾರತೀಯ ಆಟಗಾರನೇ ನಂಬರ್​ 1

    ಜೊತೆಗೆ ಅಗ್ರ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಕ್ಷರ್ ಎಂಟು ಸ್ಥಾನ ಮೇಲೇರಿ 44ನೇ ಸ್ಥಾನಕ್ಕೆ ತಲುಪಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಏಳನೇ ಸ್ಥಾನಕ್ಕೆ ಹಾಗೂ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರ ಚೊಚ್ಚಲ ಶತಕದಿಂದ 37ನೇ ಸ್ಥಾನದಿಂದ 26ನೇ ಸ್ಥಾನಕ್ಕೇರಿದ್ದಾರೆ.

    MORE
    GALLERIES