ICC Test Rankings: ನೂತನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ, ಟಾಪ್​ 10 ಪಟ್ಟಿಯಲ್ಲಿ ಮೂವರು ಭಾರತೀಯರು

ICC Test Rankings: ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ 40ನೇ ವಯಸ್ಸಿನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

First published:

  • 18

    ICC Test Rankings: ನೂತನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ, ಟಾಪ್​ 10 ಪಟ್ಟಿಯಲ್ಲಿ ಮೂವರು ಭಾರತೀಯರು

    ಐಸಿಸಿ ನೂತನ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಈ ಬಾರಿ ಟೆಸ್ಟ್​ ರ‍್ಯಾಂಕಿಂಗ್​ನಲ್ಲಿ ಮಹತ್ವದ ಬದಲಾವಣೆ ಆಗಿದ್ದು, ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಐಸಿಸಿ ಬೌಲರ್‌ಗಳ ಟೆಸ್ಟ್ ಶ್ರೇಯಾಂಕದಲ್ಲಿ ಪ್ಯಾಟ್ ಕಮಿನ್ಸ್ ಅವರನ್ನು ಹಿಂದಿಕ್ಕಿದ್ದಾರೆ.

    MORE
    GALLERIES

  • 28

    ICC Test Rankings: ನೂತನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ, ಟಾಪ್​ 10 ಪಟ್ಟಿಯಲ್ಲಿ ಮೂವರು ಭಾರತೀಯರು

    ಆಂಡರ್ಸನ್ ವಿಶ್ವದ ನಂಬರ್-1 ಬೌಲರ್ ಆಗಿದ್ದಾರೆ. ಆಂಡರ್ಸನ್ 40 ವರ್ಷ 207 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆಂಡರ್ಸನ್ 1936 ರಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಕ್ಲಾರಿ ಗ್ರಿಮ್ಮೆಟ್ ನಂತರ ಅಗ್ರ ಶ್ರೇಯಾಂಕವನ್ನು ಸಾಧಿಸಿದ ಅತ್ಯಂತ ಹಳೆಯ ಬೌಲರ್ ಆಗಿದ್ದರು.

    MORE
    GALLERIES

  • 38

    ICC Test Rankings: ನೂತನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ, ಟಾಪ್​ 10 ಪಟ್ಟಿಯಲ್ಲಿ ಮೂವರು ಭಾರತೀಯರು

    ಕಳೆದ ವಾರ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಆಂಡರ್ಸನ್ 7 ವಿಕೆಟ್‌ಗಳನ್ನು ಕಬಳಿಸಿದ್ದರು. ಕಮ್ಮಿನ್ಸ್ ಎರಡು ಸ್ಥಾನ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 48

    ICC Test Rankings: ನೂತನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ, ಟಾಪ್​ 10 ಪಟ್ಟಿಯಲ್ಲಿ ಮೂವರು ಭಾರತೀಯರು

    ಅಶ್ವಿನ್ ಹೊರತಾಗಿ ಭಾರತದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಕೂಡ ಇತ್ತೀಚಿನ ಐಸಿಸಿ ಶ್ರೇಯಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಈ ಆಟಗಾರರು ಇದುವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಜೇಮ್ಸ್ ಆಂಡರ್ಸನ್ ಟೆಸ್ಟ್ ನ ನಂಬರ್ 1 ಬೌಲರ್ ಆಗಿದ್ದು ಇದು ಆರನೇ ಬಾರಿ ಆಗಿದೆ.

    MORE
    GALLERIES

  • 58

    ICC Test Rankings: ನೂತನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ, ಟಾಪ್​ 10 ಪಟ್ಟಿಯಲ್ಲಿ ಮೂವರು ಭಾರತೀಯರು

    ಆಂಡರ್ಸನ್ ಬಳಿಕ ಅಶ್ವಿನ್ 2ನೇ ಸ್ಥಾನದಲ್ಲಿದ್ದು, ಒಟ್ಟು 864 ರೇಟಿಂಗ್ ಪಾಯಿಂಟ್‌ ಗಳಿಸಿದ್ದಾರೆ. ಆಂಡರ್ಸನ್​ಗಿಂತ ಕೇವಲ 2 ರೇಟಿಂಗ್ ಪಾಯಿಂಟ್‌ಗಳ ಹಿಂದೆ ಉಳಿದಿದ್ದು, ಅಶ್ವಿನ್​ಗೆ ನಂ.1 ಸ್ಥಾನಕ್ಕೇರುವ ಅವಕಾಶವಿದೆ.

    MORE
    GALLERIES

  • 68

    ICC Test Rankings: ನೂತನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ, ಟಾಪ್​ 10 ಪಟ್ಟಿಯಲ್ಲಿ ಮೂವರು ಭಾರತೀಯರು

    ಅದೇ ರೀತಿ ಆಸೀಸ್​ ವಿರುದ್ಧ ಟೆಸ್ಟ್​ ಸರಣಿ ಮೂಲಕ ಕಂಬ್ಯಾಕ್ ಮಾಡಿರುವ ಜಡೇಜಾ ಸಹ ಭರ್ಜರಿ ಏರಿಕೆ ಕಂಡಿದ್ದಾರೆ. ಅವರು 763 ಪಾಯಿಂಟ್​ ನಿಂದ 9ನೇ ಸ್ಥಾನಕ್ಕೇರಿದ್ದಾರೆ.

    MORE
    GALLERIES

  • 78

    ICC Test Rankings: ನೂತನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ, ಟಾಪ್​ 10 ಪಟ್ಟಿಯಲ್ಲಿ ಮೂವರು ಭಾರತೀಯರು

    ಅದೇ ಸಮಯದಲ್ಲಿ, ರವೀಂದ್ರ ಜಡೇಜಾ ಆಲ್ ರೌಂಡರ್ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಲ್ಲದೆ, ಬೌಲರ್‌ಗಳ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರ-10ರೊಳಗೆ ಸೇರಿಕೊಂಡಿದ್ದಾರೆ. ಜಡೇಜಾ 9ನೇ ಸ್ಥಾನದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಐದನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

    MORE
    GALLERIES

  • 88

    ICC Test Rankings: ನೂತನ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ, ಟಾಪ್​ 10 ಪಟ್ಟಿಯಲ್ಲಿ ಮೂವರು ಭಾರತೀಯರು

    ಇನ್ನು, ICC ಟೆಸ್ಟ್​ ರ‍್ಯಾಂಕಿಂಗ್ ಪಟ್ಟಿ ನೋಡುವುದಾದರೆ, ಜೇಮ್ಸ್​ ಆ್ಯಂಡ್ರಸನ್​, ಆರ್​ ಅಶ್ವಿನ್, ಪ್ಯಾಟ್​ ಕಮಿನ್ಸ್, ರೋಬಿಸನ್, ಬುಮ್ರಾ, ಶಾಹೀನ್​ ಅಫ್ರಿದಿ, ಕಗಿಸೋ ರಬಾಡಾ, ಕೈಲಿ ಜೆಮಿಸನ್, ಜಡೇಜಾ ಮತ್ತು ಮಿಚೆಲ್ ಸ್ಟಾರ್ಕ್​ ಇದ್ದಾರೆ.

    MORE
    GALLERIES