ODI World Cup 2023: ಭಾರತ-ಪಾಕ್​ ವಿಶ್ವಕಪ್​ ಪಂದ್ಯಕ್ಕೆ ಡೇಟ್​ ಫಿಕ್ಸ್! ವೇಳಾಪಟ್ಟಿ ರಿಲೀಸ್​?

ODI World Cup 2023: 2023ರ ಏಕದಿನ ವಿಶ್ವಕಪ್‌ಗೆ 8 ತಂಡಗಳು ಅರ್ಹತೆ ಪಡೆದಿವೆ. ಇದರಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಅಹರ್ತೆ ಪಡೆದಿದೆ. 

First published:

  • 19

    ODI World Cup 2023: ಭಾರತ-ಪಾಕ್​ ವಿಶ್ವಕಪ್​ ಪಂದ್ಯಕ್ಕೆ ಡೇಟ್​ ಫಿಕ್ಸ್! ವೇಳಾಪಟ್ಟಿ ರಿಲೀಸ್​?

    ಐಸಿಸಿ ಏಕದಿನ ವಿಶ್ವಕಪ್ 2023 ಈ ವರ್ಷದ ಕೊನೆಯಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ. ಈ ದೊಡ್ಡ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಸಾಧ್ಯತೆ ಇದೆ.

    MORE
    GALLERIES

  • 29

    ODI World Cup 2023: ಭಾರತ-ಪಾಕ್​ ವಿಶ್ವಕಪ್​ ಪಂದ್ಯಕ್ಕೆ ಡೇಟ್​ ಫಿಕ್ಸ್! ವೇಳಾಪಟ್ಟಿ ರಿಲೀಸ್​?

    ನರೇಂದ್ರ ಮೋದಿ ಕ್ರೀಡಾಂಗಣವು 1 ಲಕ್ಷಕ್ಕೂ ಹೆಚ್ಚು ಸಾಮರ್ಥ್ಯವಿರುವ ವಿಶ್ವಕಪ್‌ನ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ. ಇದೀಗ ಇತ್ತೀಚಿನ ವರದಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಬಹುದು ಎನ್ನಲಾಗುತ್ತಿದೆ.

    MORE
    GALLERIES

  • 39

    ODI World Cup 2023: ಭಾರತ-ಪಾಕ್​ ವಿಶ್ವಕಪ್​ ಪಂದ್ಯಕ್ಕೆ ಡೇಟ್​ ಫಿಕ್ಸ್! ವೇಳಾಪಟ್ಟಿ ರಿಲೀಸ್​?

    ಇದಲ್ಲದೇ, ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಪಂದ್ಯವು ಭಾನುವಾರ, ಅಕ್ಟೋಬರ್ 15 ರಂದು ನಡೆಯಲಿದೆ ಎಂದು ವರದಿಯಾಗಿದೆ. ಅಂತರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಪಂದ್ಯಾವಳಿಯ ಮೊದಲ ಪಂದ್ಯವು ಕಳೆದ ಆವೃತ್ತಿಯ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಅಕ್ಟೋಬರ್ 5 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

    MORE
    GALLERIES

  • 49

    ODI World Cup 2023: ಭಾರತ-ಪಾಕ್​ ವಿಶ್ವಕಪ್​ ಪಂದ್ಯಕ್ಕೆ ಡೇಟ್​ ಫಿಕ್ಸ್! ವೇಳಾಪಟ್ಟಿ ರಿಲೀಸ್​?

    ಜೊತೆಗೆ ಫೈನಲ್ ಕೂಡ ನವೆಂಬರ್ 19 ರಂದು ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಜೊತೆಗೆ ಭಾರತದ ಲೀಗ್ ಪಂದ್ಯಗಳು 7 ಸ್ಥಳಗಳಲ್ಲಿ ನಡೆಯಲಿವೆ. ಆತಿಥೇಯ ತಂಡ ಫೈನಲ್ ತಲುಪಿದರೆ, ಭಾರತ-ಪಾಕಿಸ್ತಾನ ಪಂದ್ಯ ಹೊರತುಪಡಿಸಿ, ಅಹಮದಾಬಾದ್‌ನಲ್ಲಿ ಮತ್ತೊಂದು ಪಂದ್ಯವನ್ನು ಆಡಲಿದೆ.

    MORE
    GALLERIES

  • 59

    ODI World Cup 2023: ಭಾರತ-ಪಾಕ್​ ವಿಶ್ವಕಪ್​ ಪಂದ್ಯಕ್ಕೆ ಡೇಟ್​ ಫಿಕ್ಸ್! ವೇಳಾಪಟ್ಟಿ ರಿಲೀಸ್​?

    ಆಸ್ಟ್ರೇಲಿಯಾ ವಿರುದ್ಧ ಭಾರತ ಅಭಿಯಾನ ಆರಂಭಿಸಲಿದೆ. ವರದಿ ಪ್ರಕಾರ ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಇಲ್ಲಿಯವರೆಗೆ ಸಿದ್ಧಪಡಿಸಲಾದ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, 1992ರ ವಿಶ್ವಕಪ್ ವಿಜೇತ ಪಾಕಿಸ್ತಾನವು ಅಹಮದಾಬಾದ್, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ತಮ್ಮ ಪಂದ್ಯಗಳನ್ನು ಆಡಲಿದೆ.

    MORE
    GALLERIES

  • 69

    ODI World Cup 2023: ಭಾರತ-ಪಾಕ್​ ವಿಶ್ವಕಪ್​ ಪಂದ್ಯಕ್ಕೆ ಡೇಟ್​ ಫಿಕ್ಸ್! ವೇಳಾಪಟ್ಟಿ ರಿಲೀಸ್​?

    ಅಹಮದಾಬಾದ್, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಹೊರತುಪಡಿಸಿ, ಕೋಲ್ಕತ್ತಾ, ದೆಹಲಿ, ಇಂದೋರ್, ಧರ್ಮಶಾಲಾ, ಗುವಾಹಟಿ, ರಾಜ್‌ಕೋಟ್, ರಾಯ್‌ಪುರ ಮತ್ತು ಮುಂಬೈಗಳನ್ನು ಗೊತ್ತುಪಡಿಸಿದ ಸ್ಥಳಗಳಾಗಿವೆ. ವಿಶ್ವಕಪ್ ಪಂದ್ಯಗಳು ನಡೆಯಲಿರುವ ಕ್ರೀಡಾಂಗಣಗಳ ಪಟ್ಟಿಯಿಂದ ಮೊಹಾಲಿ ಮತ್ತು ನಾಗ್ಪುರ ಹೊರಬಿದ್ದಿವೆ.

    MORE
    GALLERIES

  • 79

    ODI World Cup 2023: ಭಾರತ-ಪಾಕ್​ ವಿಶ್ವಕಪ್​ ಪಂದ್ಯಕ್ಕೆ ಡೇಟ್​ ಫಿಕ್ಸ್! ವೇಳಾಪಟ್ಟಿ ರಿಲೀಸ್​?

    2011ರ ಏಕದಿನ ವಿಶ್ವಕಪ್ ಫೈನಲ್‌ಗೆ ಸಾಕ್ಷಿಯಾದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೆಮಿಫೈನಲ್ ಪಂದ್ಯಗಳು ನಡೆಯುವ ನಿರೀಕ್ಷೆಯಿದೆ. ವಿಶ್ವಕಪ್‌ನ 2019ರ ಆವೃತ್ತಿಯಂತೆಯೇ, ಪಂದ್ಯಗಳನ್ನು ರೌಂಡ್-ರಾಬಿನ್ ಮಾದರಿಯಲ್ಲಿ ನಡೆಯಲಿದೆ.

    MORE
    GALLERIES

  • 89

    ODI World Cup 2023: ಭಾರತ-ಪಾಕ್​ ವಿಶ್ವಕಪ್​ ಪಂದ್ಯಕ್ಕೆ ಡೇಟ್​ ಫಿಕ್ಸ್! ವೇಳಾಪಟ್ಟಿ ರಿಲೀಸ್​?

    ಪ್ರತಿ ತಂಡವು 9 ಪಂದ್ಯಗಳನ್ನು ಆಡಿದ ನಂತರ, ಕೊನೆಯಲ್ಲಿ ಅಗ್ರ 4 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಒಟ್ಟಾರೆಯಾಗಿ ವಿಶ್ವಕಪ್‌ನಲ್ಲಿ 10 ತಂಡಗಳು ಮತ್ತು 48 ಪಂದ್ಯಗಳು ಇರುತ್ತವೆ. ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ಗೆ 8 ತಂಡಗಳು ಪ್ರವೇಶ ಪಡೆದಿವೆ.

    MORE
    GALLERIES

  • 99

    ODI World Cup 2023: ಭಾರತ-ಪಾಕ್​ ವಿಶ್ವಕಪ್​ ಪಂದ್ಯಕ್ಕೆ ಡೇಟ್​ ಫಿಕ್ಸ್! ವೇಳಾಪಟ್ಟಿ ರಿಲೀಸ್​?

    2023ರ ಏಕದಿನ ವಿಶ್ವಕಪ್‌ಗೆ 8 ತಂಡಗಳು ಅರ್ಹತೆ ಪಡೆದಿವೆ. ಇದರಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಅಹರ್ತೆ ಪಡೆದಿದೆ.

    MORE
    GALLERIES