ICC Mens ODI Team: ಐಸಿಸಿ ಏಕದಿನ ತಂಡದಲ್ಲಿ ಕೊಹ್ಲಿ-ರೋಹಿತ್ಗಿಲ್ಲ ಸ್ಥಾನ, ಪಾಕ್ ಆಟಗಾರನಿಗೆ ನಾಯಕನ ಪಟ್ಟ
ICC Mens ODI Team: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2022ರ ವರ್ಷದ ಅತ್ಯುತ್ತಮ ಏಕದಿನ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಮಹಿಳಾ ಮತ್ತು ಪುರುಷರ ಪ್ಲೇಯಿಂಗ್ 11 ತಮಡವನ್ನು ಐಸಿಸಿ ಪ್ರಕಟಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) 2022ರ ವರ್ಷದ ಏಕದಿನ ತಂಡವನ್ನು ಪ್ರಕಟಿಸಿದೆ. ಇಂದು ಐಸಿಸಿ ಮಹಿಳೆಆ ಮತ್ತು ಪುರುಷರ ಏಕದಿನ ತಂಡದ ಅಂತಿಮ ಪ್ಲೇಯಿಂಗ್ 11 ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತೀಯ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
2/ 8
ನ್ಯೂಜಿಲ್ಯಾಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಿಂದ ಗೆದ್ದ ಬಳಿಕ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಭಾರತ ತಂಡ ಅಗ್ರಸ್ಥಾನಕ್ಕೇರಿದೆ. ಆದರೆ ಈ ಬಲಿಷ್ಠ ತಂಡದ ಭಾಗವಾಗಿರುವ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಅವರನ್ನು ಐಸಿಸಿ ಮರೆತಿದೆ.
3/ 8
ಐಸಿಸಿ ಬಿಡುಗಡೆ ಮಾಡುವ ಏಕದಿನ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೆಸರು ಕಾಣೆಯಾಗಿದ್ದು, ಅವರ ಅಭಿಮಾನಿಗಳಿಗೆ ಬೇಸರತರಿಸಿದೆ. ಆದರೆ ಭಾರತದ ಪರ ಶ್ರೇಯಸ್ ಅಯ್ಯರ್ ಹಾಗೂ ಮೊಹಮ್ಮದ್ ಸಿರಾಜ್ ಇಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.
4/ 8
ಈ ಐಸಿಸಿ ಏಕದಿನ ಪುರುಷರ ತಂಡಕ್ಕೆ ಪಾಕಿಸ್ತಾನ ತಂಡದ ಆಟಗಾರ ಬಾಬರ್ ಆಜಮ್ ನಾಯಕರಾಗಿದ್ದಾರೆ. ಆದರೆ, ಟೀಂ ಇಂಡಿಯಾ ಸ್ಟಾರ್ ಆಟಗಾರರಾದ ಕೊಹ್ಲಿ ಹಾಗೂ ರೋಹಿತ್ ಅವರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
5/ 8
ಇದಲ್ಲದೇ, ಐಸಿಸಿ ಏಕದಿನ ತಂಡದಲ್ಲಿ ಜಿಂಬಾಬ್ವೆ ತಂಡದ ಸಿಕಂದರ್ ರಾಜಾ ಅವರು ಆಲ್ರೌಂಡರ್ ಆಗಿ ಆಯ್ಕೆಯಾಗಿದ್ದಾರೆ. ಬೌಲಿಂಗ್ ವಿಚಾರದಲ್ಲಿ ಜೋಸೆಫ್, ಮೊಹಮ್ಮದ್ ಸಿರಾಜ್, ಟ್ರೆಂಟ್ ಬೌಲ್ಟ್ ಹಾಗೂ ಆಡಂ ಝಾಂಪ ಅವರಿಗೆ ಐಸಿಸಿ ಮಣೆ ಹಾಕಿದೆ.
6/ 8
ಇನ್ನು, ತಂಡದಲ್ಲಿ ನಾಯಕನ ಸ್ಥಾನ ನೀಡಿರುವ ಬಾಬರ್ ಆಜಮ್ ಹಾಗೂ ಟ್ರಾವಿಸ್ ಹೆಡ್ ಆರಂಭಿಕರಾದರೆ, ಶ್ರೇಯಸ್ ಅಯ್ಯರ್ಗೆ 4ನೇ ಬ್ಯಾಟಿಂಗ್ ಕ್ರಮಾಂಕವನ್ನು ನೀಡಲಾಗಿದೆ. 2022ರ ವರ್ಷದಲ್ಲಿ ಶ್ರೇಯಸ್ ಅಯ್ಯುರ್ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು.
7/ 8
ಐಸಿಸಿ ODI ತಂಡ 2022: ಬಾಬರ್ ಆಝಮ್(ನಾಯಕ), ಟ್ರಾವಿಡ್ ಹೆಡ್, ಶಾಯ್ ಹೋಪ್, ಶ್ರೇಯಸ್ ಅಯ್ಯುರ್, ಟಾಮ್ ಲೇಥಮ್ (ವಿ.ಕೀ), ಸಿಕಂದರ್ ರಾಜಾ, ಮೆಹದಿ ಹಸನ್, ಅಲ್ಝಾರಿ ಜೋಸೆಫ್, ಮೊಹಮ್ಮದ್ ಸಿರಾಜ್, ಟ್ರೆಂಟ್ ಬೌಲ್ಟ್, ಆಡಂ ಝಾಫ.
8/ 8
ಐಸಿಸಿ ODI ಮಹಿಳಾ ತಂಡ 2022: ಅಲಿಸ್ಸಾ ಹೀಲಿ, ಸ್ಮೃತಿ ಮಂಧಾನ, ಲಾರಾ ವೊಲ್ವಾರ್ಡ್ಟ್, ನಟಾಲಿ ಸ್ಕೈವರ್, ಬೆತ್ ಮೂನಿ, ಹರ್ಮನ್ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಸೋಫಿ ಎಕ್ಲೆಸ್ಟೋನ್, ಅಯಾಬೊಂಗಾ ಖಾಕಾ, ರೇಣುಕಾ ಸಿಂಗ್, ಶಬ್ನಿಮ್ ಇಸ್ಮಾಯಿಲ್.