ICC New Rules: ವಿಶ್ವ ಕ್ರಿಕೆಟ್​ನಿಂದ ಹೊಸ ರೂಲ್ಸ್ ಜಾರಿ​! ಭಾರತ - ಆಸೀಸ್ ಸರಣಿಯಿಂದಲೇ ಅನ್ವಯ

ICC New Rules: ಹೆಲ್ಮೆಟ್ ವಿಷಯದಲ್ಲಿ ಹೊಸ ನಿಯಮಗಳನ್ನು ತರಲಾಗಿದೆ. ಇವೆಲ್ಲವೂ ಜೂನ್ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಘೋಷಿಸಲಾಗಿದೆ.

First published:

  • 17

    ICC New Rules: ವಿಶ್ವ ಕ್ರಿಕೆಟ್​ನಿಂದ ಹೊಸ ರೂಲ್ಸ್ ಜಾರಿ​! ಭಾರತ - ಆಸೀಸ್ ಸರಣಿಯಿಂದಲೇ ಅನ್ವಯ

    ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಹತ್ವದ ನಿರ್ಧಾರ ಕೈಗೊಂಡಿದೆ. ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್‌ನಲ್ಲಿ ವಿವಾದಕ್ಕೆ ಕಾರಣವಾಗಿದ್ದ ‘ಸಾಫ್ಟ್ ಸಿಗ್ನಲ್’ ನಿಯಮವನ್ನು ತೆಗೆದುಹಾಕುವ ಸಾಧ್ಯತೆ ಇದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಇದು ಜಾರಿಗೆ ಬರಲಿದೆ.

    MORE
    GALLERIES

  • 27

    ICC New Rules: ವಿಶ್ವ ಕ್ರಿಕೆಟ್​ನಿಂದ ಹೊಸ ರೂಲ್ಸ್ ಜಾರಿ​! ಭಾರತ - ಆಸೀಸ್ ಸರಣಿಯಿಂದಲೇ ಅನ್ವಯ

    ಈ ಹೊಸ ನಿಯಮವನ್ನು ಜೂನ್ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಘೋಷಿಸಲಾಗಿದೆ. ಬಿಸಿಸಿಐನ ಮಾಜಿ ಬಾಸ್ ಸೌರವ್ ಗಂಗೂಲಿ ನೇತೃತ್ವದ ಐಸಿಸಿ ಸಮಿತಿಯು ಅವರಿಗೆ ಗ್ರೀನ್ ಸಿಗ್ನಲ್ ನೀಡಿದೆ.

    MORE
    GALLERIES

  • 37

    ICC New Rules: ವಿಶ್ವ ಕ್ರಿಕೆಟ್​ನಿಂದ ಹೊಸ ರೂಲ್ಸ್ ಜಾರಿ​! ಭಾರತ - ಆಸೀಸ್ ಸರಣಿಯಿಂದಲೇ ಅನ್ವಯ

    ಸಾಫ್ಟ್ ಸಿಗ್ನಲ್‌ನಿಂದಾಗಿ ಬಹಳಷ್ಟು ಕ್ಯಾಚ್ ಔಟ್‌ಗಳು ವಿವಾದಕ್ಕೆ ಕಾರಣವಾಗಿತ್ತು. ಮೈದಾನದಲ್ಲಿ ಪ್ರಶ್ನಾರ್ಹ ಔಟ್ ಸಂದರ್ಭದಲ್ಲಿ, ಅಂಪೈರ್‌ಗಳು ಥರ್ಡ್ ಅಂಪೈರ್‌ಗೆ ವರದಿ ಮಾಡುತ್ತಾರೆ, ಸಾಫ್ಟ್ ಸಿಗ್ನಲ್ ರೂಪದಲ್ಲಿ ಔಟ್? ನಾಟೌಟಾ? ನಿರ್ಧಾರ ಕೈಗೊಳ್ಳಬೇಕಿತ್ತು.

    MORE
    GALLERIES

  • 47

    ICC New Rules: ವಿಶ್ವ ಕ್ರಿಕೆಟ್​ನಿಂದ ಹೊಸ ರೂಲ್ಸ್ ಜಾರಿ​! ಭಾರತ - ಆಸೀಸ್ ಸರಣಿಯಿಂದಲೇ ಅನ್ವಯ

    ಅಂಪೈರ್ ಸಾಫ್ಟ್ ಸಿಗ್ನಲ್ ಅನ್ನು ಔಟ್ ಎಂದು ಘೋಷಿಸುವ ಸಮಯದಲ್ಲಿ, ಕ್ಯಾಚ್ ಅನುಮಾನಾಸ್ಪದವಾಗಿದ್ದರೂ ಸಹ ಮೂರನೇ ಅಂಪೈರ್ ಸಾಫ್ಟ್ ಸಿಗ್ನಲ್ ಕಡೆಗೆ ವಾಲುತ್ತಿದ್ದರು. ಒಮ್ಮೊಮ್ಮೆ ನಾಟೌಟ್ ಎನಿಸಿದರೂ ಬ್ಯಾಟರ್‌ಗಳು ಔಟಾಗುವ ಸಾಧ್ಯತೆಗಳಿದ್ದವು.

    MORE
    GALLERIES

  • 57

    ICC New Rules: ವಿಶ್ವ ಕ್ರಿಕೆಟ್​ನಿಂದ ಹೊಸ ರೂಲ್ಸ್ ಜಾರಿ​! ಭಾರತ - ಆಸೀಸ್ ಸರಣಿಯಿಂದಲೇ ಅನ್ವಯ

    ಐಪಿಎಲ್‌ನಲ್ಲಿ ಸಾಫ್ಟ್ ಸಿಗ್ನಲ್ ನಿಯಮವನ್ನು ಈಗಾಗಲೇ ತೆಗೆದುಹಾಕಲಾಗಿದೆ. ಆದರೆ ಇದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುಂದುವರಿಯಲಿದೆ. ಆದರೆ ಇತ್ತೀಚೆಗೆ, ಐಸಿಸಿ ಸಾಫ್ಟ್ ಸಿಗ್ನಲ್‌ಗೆ ಫುಲ್​ ಸ್ಟಾಪ್​ ಇಟ್ಟಿದೆ.

    MORE
    GALLERIES

  • 67

    ICC New Rules: ವಿಶ್ವ ಕ್ರಿಕೆಟ್​ನಿಂದ ಹೊಸ ರೂಲ್ಸ್ ಜಾರಿ​! ಭಾರತ - ಆಸೀಸ್ ಸರಣಿಯಿಂದಲೇ ಅನ್ವಯ

    ಇದಲ್ಲದೇ ಸೌರವ್ ಗಂಗೂಲಿ ಸಮಿತಿಯು ಹೆಲ್ಮೆಟ್ ಧರಿಸುವ ಕುರಿತು ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಬ್ಯಾಟರ್ ವೇಗದ ಬೌಲರ್ ಎದುರು ನಿಂತಾಗ.. ವಿಕೆಟ್ ಕೀಪರ್ ಸ್ಟಂಪ್ ಹಿಂದೆ ಕೀಪಿಂಗ್ ಮಾಡುತ್ತಿದ್ದರೆ.. ಬ್ಯಾಟರ್ ಹತ್ತಿರ ಫೀಲ್ಡಿಂಗ್ ಮಾಡುವಾಗ ಫೀಲ್ಡರ್ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂಬ ನಿಯಮವನ್ನು ತರಲಾಗಿದೆ.

    MORE
    GALLERIES

  • 77

    ICC New Rules: ವಿಶ್ವ ಕ್ರಿಕೆಟ್​ನಿಂದ ಹೊಸ ರೂಲ್ಸ್ ಜಾರಿ​! ಭಾರತ - ಆಸೀಸ್ ಸರಣಿಯಿಂದಲೇ ಅನ್ವಯ

    ಸ್ಪಿನ್ ಬೌಲಿಂಗ್ ನಲ್ಲಿ ಕೆಲವು ವಿಕೆಟ್ ಕೀಪರ್ ಗಳು ಸ್ಟಂಪ್ ಹಿಂದೆ ಇದ್ದರೂ ಹೆಲ್ಮೇಟ್​ನ್ನು ಬಳಸುವುದಿಲ್ಲ. ಆದರೆ ಇನ್ನು ಮುಂದೆ ಬೌಲರ್ ಯಾರೇ ಆಗಿರಲಿ, ವಿಕೆಟ್ ಕೀಪರ್ ಸ್ಟಂಪ್ ಹತ್ತಿರ ಕೀಪಿಂಗ್ ಮಾಡುತ್ತಿದ್ದರೆ, ಅವರು ಖಂಡಿತವಾಗಿಯೂ ಹೆಲ್ಮೇಟ್ ಅನ್ನು ಬಳಸಬೇಕು.

    MORE
    GALLERIES