ಟೀಂ ಇಂಡಿಯಾ (Team India) ಆಟಗಾರ ರಿಷಭ್ ಪಂತ್ (Rishabh Pant) ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು (Car Accident) ಪಂತ್ ಸ್ಥಿತಿ ಗಂಭೀರವಾಗಿದೆ.
2/ 8
ಬೆಳಗ್ಗೆ 5.30ರ ಸುಮಾರಿಗೆ ತಮ್ಮ ತಾಯಿಗೆ ಸರ್ಪ್ರೈಸ್ ನೀಡಬೇಕೆಂದು ಪಂತ್ ಬೆನ್ಜ್ ಕಾರಿನಲ್ಲಿ ಮನೆ ಕಡೆ ಹೊರಟಿದ್ದರು.
3/ 8
ಈ ವೇಳೆ ಡಿವೈಡರ್ಗೆ ಡಿಕ್ಕಿಯಾಗಿ 20 ಅಡಿ ಆ ಐಷಾರಾಮಿ ಕಾರು ಉಜ್ಜಿಕೊಂಡು ಹೋಗಿದೆ. ಬಳಿಕ ಆ ಕಡೆ ರಸ್ತೆಗೆ ಕಾರು ಬಿದ್ದಿದೆ.
4/ 8
ಬಿದ್ದ ತಕ್ಷಣ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಲೆ ಕಾರಿಗೆ ಬೆಂಕಿ ಹೊತ್ತಿ ಉರಿಯುತ್ತಿದೆ. ತಕ್ಷಣ ರಿಷಬ್ ಪಂತ್ ಗಾಯಗೊಂಡಿದ್ದರೂ ಕಿಟಕಿಯಿಂದ ಜಿಗಿದಿದ್ದಾರೆ.
5/ 8
ಸದ್ಯ ಅವರ ತಲೆ, ಬೆನ್ನು ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
6/ 8
ರಿಷಬ್ ಪಂತ್ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಪ್ಲಾಸ್ಟಿಕ್ ಸರ್ಜರಿಯ ಅಗತ್ಯವೂ ಇದೆ ಎಂದು ವರದಿಯಾಗಿದೆ.
7/ 8
ಮತ್ತೊಂದೆಡೆ, ಪಂತ್ ಅಪಘಾತದ ಸುದ್ದಿಯಿಂದ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರಿಕೆಟಿಗರು ಆಘಾತಕ್ಕೊಳಗಾಗಿದ್ದಾರೆ. ರಿಷಬ್ ಪಂತ್ ಅವರು ಶೀಘ್ರ ಗುಣಮುಖರಾಗಿ ಬರಲಿ ಅಂತ ಪ್ರಾರ್ಥಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಆರೋಗ್ಯದ ಬಗ್ಗೆ ಪೋಸ್ಟ್ ಮಾಡುತ್ತಿದ್ದಾರೆ.
8/ 8
ಏಕದಿನ ವಿಶ್ವಕಪ್ನಲ್ಲಿ ಸ್ಥಾನ ಪಡೆಯುವ ಮೂಲಕ ಪಂತ್ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲು ಬಯಸಿದ್ದರು. ಆದರೆ, ಇದೀಗ ಈ ಘಟನೆ ನಡೆದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.