Hardik Pandya: ರೋಹಿತ್ ಬದಲಿಗೆ ಪಾಂಡ್ಯಗೆ ನಾಯಕತ್ವವನ್ನು ಏಕೆ ನೀಡಬೇಕು? ಇಲ್ಲಿದೆ 5 ಕಾರಣಗಳು
Hardik Pandya: ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡವು 2022 ರ ಟಿ 20 ವಿಶ್ವಕಪ್ನಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಹೀಗಿರುವಾಗ ರೋಹಿತ್ ನಾಯಕತ್ವದ ಬಗ್ಗೆ ಈಗ ಪ್ರಶ್ನೆಗಳು ಎದ್ದಿವೆ. ಭವಿಷ್ಯದಲ್ಲಿ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರಿಗೆ ಟೀಂ ಇಂಡಿಯಾದ ಟಿ20 ತಂಡದ ನಾಯಕತ್ವ ನೀಡಬಹುದು ಎಂಬ ಊಹಾಪೋಹಗಳಿವೆ.
ಟಿ20 ವಿಶ್ವಕಪ್ 2024ರಲ್ಲಿ ಆಯೋಜನೆಯಾಗಲಿದೆ. ವಿಶ್ವ ಕ್ರಿಕೆಟ್ ನಲ್ಲಿ ‘ಹಿಟ್ ಮ್ಯಾನ್’ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾಗೆ ಆಗ 37 ವರ್ಷ. ಆದರೆ ಭವಿಷ್ಯದ ನಾಯಕ ಎಂದು ಗುರುತಿಸಲಾದ ಹಾರ್ದಿಕ್ ಪಾಂಡ್ಯ 29 ವರ್ಷ ವಯಸ್ಸಿನವರಾಗಿದ್ದಾರೆ.
2/ 8
ಹಾರ್ದಿಕ್ ಪಾಂಡ್ಯ ಕಳೆದ ಕೆಲವು ವರ್ಷಗಳಿಂದ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ಗಾಗಿ ಆಯ್ಕೆಗಾರರು ಅವರನ್ನು ನೋಡುತ್ತಿಲ್ಲ. ಪಾಂಡ್ಯ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 2018 ರಲ್ಲಿ ಆಡಿದ್ದರು. ಅವರ ಸಂಪೂರ್ಣ ಗಮನ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿದೆ.
3/ 8
29ರ ಹರೆಯದ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಇತ್ತೀಚೆಗೆ ನ್ಯೂಜಿಲೆಂಡ್ಗೆ ತೆರಳಿ 3 ಪಂದ್ಯಗಳ ಟಿ20 ಸರಣಿಯನ್ನು ಗೆದ್ದುಕೊಂಡಿತ್ತು. ಆತಿಥೇಯ ಕಿವೀಸ್ ತಂಡವನ್ನು ಭಾರತ 1-0 ಅಂತರದಿಂದ ಸೋಲಿಸಿತು. ಹಾರ್ದಿಕ್ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.
4/ 8
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಋತುವಿನಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಐಪಿಎಲ್ 15ನೇ ಸೀಸನ್ ನಲ್ಲಿ ಹಾರ್ದಿಕ್ ತಂಡವನ್ನು ಮುಂಚೂಣಿಯಿಂದ ಮುನ್ನಡೆಸಿದ್ದರು. 15 ಐಪಿಎಲ್ ಪಂದ್ಯಗಳಲ್ಲಿ 487 ರನ್ ಗಳಿಸುವುದರೊಂದಿಗೆ ಒಟ್ಟು 8 ವಿಕೆಟ್ ಕಬಳಿಸಿದ್ದರು.
5/ 8
ಸವಾಲನ್ನು ಸರಿಯಾದ ರೀತಿಯಲ್ಲಿ ಸ್ವೀಕರಿಸುವುದು ಹಾರ್ದಿಕ್ ಪಾಂಡ್ಯ ಅವರ ದೊಡ್ಡ ವಿಶೇಷತೆ. ಅವರು ಯಾವುದೇ ಪರಿಸ್ಥಿತಿಯಲ್ಲಿ ತಂಡವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುತ್ತಾರೆ. ಅಲ್ಲದೇ ಅವರು ಉತ್ತಮ ಫಿನಿಶರ್ ಸಹ ಹೌದು.
6/ 8
ಹಾರ್ದಿಕ್ ಪಾಂಡ್ಯ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು ಟೀಂ ಇಂಡಿಯಾದಿಂದ ಬಹಳ ಕಾಲ ದೂರ ಉಳಿದಿದ್ದರು. ವರ್ಷದ ಆರಂಭದಲ್ಲಿ ಟೀಂ ಇಂಡಿಯಾದಲ್ಲಿ ಪುನರಾಗಮನ ಮಾಡಿದರು. ಈ ವರ್ಷ ಭಾರತ 34 ಟಿ20 ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಅವರು 27 ಟಿ20ಗಳ ಭಾಗವಾಗಿದ್ದರು.
7/ 8
ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನ ನೀಡಿದ್ದಾರೆ. ಹಿಂದಿರುಗಿದ ನಂತರ, ಅವರು ಸುಮಾರು 146 ರ ಸ್ಟ್ರೈಕ್ ರೇಟ್ನಲ್ಲಿ ಒಟ್ಟು 607 ರನ್ ಗಳಿಸಿದ್ದಾರೆ. ಈ ವೇಳೆ ಅವರು ಒಟ್ಟು 20 ವಿಕೆಟ್ಗಳನ್ನು ಕಬಳಿಸಿದ್ದಾರೆ.
8/ 8
ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರಿಗೆ ಟಿ20 ತಂಡದ ನಾಯಕತ್ವವನ್ನು ನೀಡಬಹುದು. ಇದರಿಂದ ರೋಹಿತ್ ಅವರ ಕೆಲಸದ ಹೊರೆಯೂ ಕಡಿಮೆಯಾಗಲಿದೆ.