Hardik Pandya: ಟೆಸ್ಟ್​ ಕ್ರಿಕೆಟ್​ನಿಂದ ಹಾರ್ದಿಕ್ ನಿವೃತ್ತಿ? ಮಹತ್ವದ ಸುಳಿವು ನೀಡಿದ ಪಾಂಡ್ಯ!

Hardik Pandya: ಕಳೆದ ವರ್ಷ ಗಾಯಗೊಂಡ ನಂತರ ಹಾರ್ದಿಕ್ ಪಾಂಡ್ಯ IPL 2022 ರಿಂದ ಉತ್ತಮ ಪುನರಾಗಮನವನ್ನು ಮಾಡಿದರು. ನಾಯಕನಾಗಿ ಟಿ20 ಲೀಗ್ ಪ್ರಶಸ್ತಿ ಗೆದ್ದುಕೊಂಡರು. ಇದಾದ ನಂತರ ಬಿಸಿಸಿಐ ಅವರನ್ನು ಭಾರತೀಯ ಟಿ20 ನಾಯಕನನ್ನಾಗಿ ಮಾಡಿದೆ.

First published:

  • 18

    Hardik Pandya: ಟೆಸ್ಟ್​ ಕ್ರಿಕೆಟ್​ನಿಂದ ಹಾರ್ದಿಕ್ ನಿವೃತ್ತಿ? ಮಹತ್ವದ ಸುಳಿವು ನೀಡಿದ ಪಾಂಡ್ಯ!

    ಮೂರನೇ ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಮೊದಲು ನಾಯಕ ಪಾಂಡ್ಯ 17 ಎಸೆತಗಳಲ್ಲಿ 30 ರನ್ ಗಳಿಸಿದರು. ಇದಾದ ಬಳಿಕ ವೇಗದ ಬೌಲರ್ ಆಗಿ 16 ರನ್ ನೀಡಿ 4 ವಿಕೆಟ್ ಪಡೆದರು. ಇದರಿಂದಾಗಿ ಈ ಪಂದ್ಯವನ್ನು ಟೀಂ ಇಂಡಿಯಾ 168 ರನ್‌ಗಳ ದೊಡ್ಡ ಅಂತರದಿಂದ ಗೆಲ್ಲಲು ಸಾಧ್ಯವಾಯಿತು.

    MORE
    GALLERIES

  • 28

    Hardik Pandya: ಟೆಸ್ಟ್​ ಕ್ರಿಕೆಟ್​ನಿಂದ ಹಾರ್ದಿಕ್ ನಿವೃತ್ತಿ? ಮಹತ್ವದ ಸುಳಿವು ನೀಡಿದ ಪಾಂಡ್ಯ!

    ಟಿ20 ಸರಣಿಯಲ್ಲಿ ಕಿವೀಸ್ ತಂಡವನ್ನು ಭಾರತ 2-1 ಅಂತರದಿಂದ ಸೋಲಿಸಿದೆ. ಕಳೆದ ಪಂದ್ಯದಲ್ಲಿ ಭಾರತ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ರನ್ ಗಳಿಕೆಯಲ್ಲಿ ಅತಿ ದೊಡ್ಡ ಗೆಲುವು ದಾಖಲಿಸಿದೆ. ಸರಣಿಯಲ್ಲಿ 66 ರನ್ ಗಳಿಸಿದ್ದಲ್ಲದೆ, ಪಾಂಡ್ಯ 5 ವಿಕೆಟ್ ಪಡೆದಿದ್ದಾರೆ.

    MORE
    GALLERIES

  • 38

    Hardik Pandya: ಟೆಸ್ಟ್​ ಕ್ರಿಕೆಟ್​ನಿಂದ ಹಾರ್ದಿಕ್ ನಿವೃತ್ತಿ? ಮಹತ್ವದ ಸುಳಿವು ನೀಡಿದ ಪಾಂಡ್ಯ!

    ಟೀಂ ಇಂಡಿಯಾ ಈಗ ಫೆಬ್ರವರಿ 9 ರಿಂದ ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಉಭಯ ತಂಡಗಳು ಟೆಸ್ಟ್ ಅನ್ನು 5 ವರ್ಷಗಳ ಹಿಂದೆ 2018ರಲ್ಲಿ ಆಡಿದ್ದರು. ಹೀಗಿರುವಾಗ ಪಾಂಡ್ಯ ಟೆಸ್ಟ್​ಗೆ ಸಂಪೂರ್ಣ ಫಿಟ್ ಆಗಿಲ್ಲವೇ ಎಂಬ ಪ್ರಶ್ನೆಗಳು ಎದ್ದಿವೆ.

    MORE
    GALLERIES

  • 48

    Hardik Pandya: ಟೆಸ್ಟ್​ ಕ್ರಿಕೆಟ್​ನಿಂದ ಹಾರ್ದಿಕ್ ನಿವೃತ್ತಿ? ಮಹತ್ವದ ಸುಳಿವು ನೀಡಿದ ಪಾಂಡ್ಯ!

    ಇದೀಗ ಹಾರ್ದಿಕ್ ಪಾಂಡ್ಯ ತಮ್ಮ ಟೆಸ್ಟ್ ವೃತ್ತಿ ಜೀವನದ ಬಗ್ಗೆ ಆಡುವ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ T20 ಸರಣಿಯ ನಂತರ, ODI ಮತ್ತು T20 ವಿಶ್ವಕಪ್ ದೃಷ್ಟಿಯಲ್ಲಿ ತನ್ನ ಸಂಪೂರ್ಣ ಗಮನವು ಸೀಮಿತ ಓವರ್‌ಗಳ ಮೇಲೆ ಅಂದರೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿದೆ ಎಂದು ಹೇಳಿದರು.

    MORE
    GALLERIES

  • 58

    Hardik Pandya: ಟೆಸ್ಟ್​ ಕ್ರಿಕೆಟ್​ನಿಂದ ಹಾರ್ದಿಕ್ ನಿವೃತ್ತಿ? ಮಹತ್ವದ ಸುಳಿವು ನೀಡಿದ ಪಾಂಡ್ಯ!

    ಮುಂದಿನ ಟಿ20 ವಿಶ್ವಕಪ್ 2024ರಲ್ಲಿ ನಡೆಯಲಿದೆ. ಹೀಗಿರುವಾಗ ಅಲ್ಲಿಯವರೆಗೆ ಪಾಂಡ್ಯ ಟೆಸ್ಟ್ ಆಡುವುದಿಲ್ಲವೇ? ಇದು ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಗಾಯದ ನಂತರ ಪಾಂಡ್ಯ 2019 ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅವರು ಯಾವುದೇ ಟೆಸ್ಟ್ ಆಡಿಲ್ಲ. ಟೆಸ್ಟ್ ಆಡಲು ಇದೇ ಸರಿಯಾದ ಸಮಯ ಎಂದು ಅನಿಸಿದಾಗ ಹಿಂತಿರುಗುತ್ತೇನೆ ಎಂದು ಪಾಂಡ್ಯ ಹೇಳಿದ್ದಾರೆ.

    MORE
    GALLERIES

  • 68

    Hardik Pandya: ಟೆಸ್ಟ್​ ಕ್ರಿಕೆಟ್​ನಿಂದ ಹಾರ್ದಿಕ್ ನಿವೃತ್ತಿ? ಮಹತ್ವದ ಸುಳಿವು ನೀಡಿದ ಪಾಂಡ್ಯ!

    ಸಮಯ ಸರಿಯಾಗಿದ್ದು ದೇಹ ಚೆನ್ನಾಗಿದ್ದರೆ ಖಂಡಿತಾ ಮುಂದೆ ಟೆಸ್ಟ್​ನಲ್ಲಿ ಭಾಗವಹಿಸುತ್ತೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಆಧರೆ ಪಾಂಡ್ಯ ಇದೀಗ ಹೀಗೆ ಹೇಳಿದ ಬಳಿಕ ಅವರು ಟೆಸ್ಟ್ ಮಾದರಿಯಿಂದ ದೂರವಾಗುತ್ತಿದ್ದಾರೆಯೇ? ಅಥವಾ ನಿವೃತ್ತಿ ಪಡೆಯುತ್ತಾರೆಯೇ ಎಂಬುದರ ಕುರಿತು ಚರ್ಚೆಗಳು ಪ್ರಾರಂಭವಾಗಿದೆ.

    MORE
    GALLERIES

  • 78

    Hardik Pandya: ಟೆಸ್ಟ್​ ಕ್ರಿಕೆಟ್​ನಿಂದ ಹಾರ್ದಿಕ್ ನಿವೃತ್ತಿ? ಮಹತ್ವದ ಸುಳಿವು ನೀಡಿದ ಪಾಂಡ್ಯ!

    ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮಹತ್ವದ್ದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಥಾನ ಪಡೆಯಲು, ಭಾರತವು ಯಾವುದೇ ಬೆಲೆ ತೆತ್ತಾದರೂ ಸರಣಿಯನ್ನು ಗೆಲ್ಲಲೇಬೇಕು.

    MORE
    GALLERIES

  • 88

    Hardik Pandya: ಟೆಸ್ಟ್​ ಕ್ರಿಕೆಟ್​ನಿಂದ ಹಾರ್ದಿಕ್ ನಿವೃತ್ತಿ? ಮಹತ್ವದ ಸುಳಿವು ನೀಡಿದ ಪಾಂಡ್ಯ!

    29ರ ಹರೆಯದ ಹಾರ್ದಿಕ್ ಪಾಂಡ್ಯ ಅವರ ಟೆಸ್ಟ್ ದಾಖಲೆಯನ್ನು ಗಮನಿಸಿದರೆ, ಅವರು 11 ಪಂದ್ಯಗಳಲ್ಲಿ 31 ಸರಾಸರಿಯಲ್ಲಿ 532 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 4 ಅರ್ಧಶತಕಗಳನ್ನು ಗಳಿಸಿದ್ದಾರೆ. ಅಲ್ಲದೆ 17 ವಿಕೆಟ್‌ಗಳನ್ನು ಪಡೆದಿದ್ದಾರೆ.

    MORE
    GALLERIES