Team India: ವಿಶ್ವಕಪ್​ ವೇಳೆಗೆ ಟೀಂ ಇಂಡಿಯಾ ಕೋಚ್​ ಬದಲಾವಣೆ? ಶಾಕಿಂಗ್​ ಹೇಳಿಕೆ ನೀಡಿದ ಹರ್ಭಜನ್ ಸಿಂಗ್​

Team India: ಭಾರತ ತಂಡಕ ಪ್ರತಿ ಬಾರಿ ಹಾಟ್ ಫೇವರಿಟ್ ಆಗಿ ವಿಶ್ವಕಪ್​ಗೆ ಹೋಗಿ ಬರಿಗೈಯಲ್ಲಿ ವಾಪಸಾಗುವುದು ಅಭ್ಯಾಸವಾಗಿ ಹೋಗಿದೆ. ಇದಕ್ಕಾಗಿ ಭಾರತ ತಂಡ ಕೆಳೆದ 2014ರಿಂದ ಒಂದೇ ಒಂದು ಐಸಿಸಿ ಟೂರ್ನಿಗಳನ್ನು ಗೆದ್ದಿಲ್ಲ.

First published:

  • 18

    Team India: ವಿಶ್ವಕಪ್​ ವೇಳೆಗೆ ಟೀಂ ಇಂಡಿಯಾ ಕೋಚ್​ ಬದಲಾವಣೆ? ಶಾಕಿಂಗ್​ ಹೇಳಿಕೆ ನೀಡಿದ ಹರ್ಭಜನ್ ಸಿಂಗ್​

    ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ನಲ್ಲಿ ವಿಶ್ವ ಚಾಂಪಿಯನ್ ಆದ ನಂತರ, ಟೀಂ ಇಂಡಿಯಾ ಮತ್ತೊಮ್ಮೆ ಅಂತಹ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ.

    MORE
    GALLERIES

  • 28

    Team India: ವಿಶ್ವಕಪ್​ ವೇಳೆಗೆ ಟೀಂ ಇಂಡಿಯಾ ಕೋಚ್​ ಬದಲಾವಣೆ? ಶಾಕಿಂಗ್​ ಹೇಳಿಕೆ ನೀಡಿದ ಹರ್ಭಜನ್ ಸಿಂಗ್​

    ಇದರ ಬಳಿಕ ಭಾರತ ತಂಡಕ್ಕೆ ಹಾಟ್ ಫೇವರಿಟ್ ಆಗಿ ವಿಶ್ವಕಪ್​ಗೆ ಹೋಗಿ ಬರಿಗೈಯಲ್ಲಿ ವಾಪಸಾಗುವುದು ಅಭ್ಯಾಸವಾಗಿ ಹೋಗಿದೆ. 2021ರ ಟಿ20 ವಿಶ್ವಕಪ್ ಬಳಿಕ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ರವಿಶಾಸ್ತ್ರಿ ಕೋಚ್ ಸ್ಥಾನಕ್ಕೆ ವಿದಾಯ ಹೇಳಿದರು.

    MORE
    GALLERIES

  • 38

    Team India: ವಿಶ್ವಕಪ್​ ವೇಳೆಗೆ ಟೀಂ ಇಂಡಿಯಾ ಕೋಚ್​ ಬದಲಾವಣೆ? ಶಾಕಿಂಗ್​ ಹೇಳಿಕೆ ನೀಡಿದ ಹರ್ಭಜನ್ ಸಿಂಗ್​

    ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಎನ್‌ಸಿಎ ಮುಖ್ಯಸ್ಥರಾಗಿದ್ದ ರಾಹುಲ್ ದ್ರಾವಿಡ್ ಅವರನ್ನು ಟೀಂ ಇಂಡಿಯಾದ ಕೋಚ್ ಆಗಿ ನೇಮಿಸಿದ್ದರು. ದ್ರಾವಿಡ್ ಅವರ ಕೋಚಿಂಗ್‌ನಲ್ಲಿ, ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಆರಂಭದಲ್ಲಿ ಸರಣಿ ಗೆಲುವು ಸಾಧಿಸಿತು.

    MORE
    GALLERIES

  • 48

    Team India: ವಿಶ್ವಕಪ್​ ವೇಳೆಗೆ ಟೀಂ ಇಂಡಿಯಾ ಕೋಚ್​ ಬದಲಾವಣೆ? ಶಾಕಿಂಗ್​ ಹೇಳಿಕೆ ನೀಡಿದ ಹರ್ಭಜನ್ ಸಿಂಗ್​

    ಆದರೆ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ವಿಫಲವಾಗುತ್ತಿದೆ. ಅದರೊಂದಿಗೆ ಟಿ20ಗೆ ದ್ರಾವಿಡ್ ಕೋಚ್ ಆಗಿ ಸೂಕ್ತರಲ್ಲ ಎಂಬ ವಾದ ಬಲವಾಗಿ ಕೇಳಿಬಂದಿತ್ತು. ಆದರೆ 2023ರ ಏಕದಿನ ವಿಶ್ವಕಪ್ ವರೆಗೆ ದ್ರಾವಿಡ್ ಅವರನ್ನು ಕೋಚ್ ಆಗಿ ಮುಂದುವರಿಸಲು ಬಿಸಿಸಿಐ ಸಿದ್ಧವಾಗಿದೆ.

    MORE
    GALLERIES

  • 58

    Team India: ವಿಶ್ವಕಪ್​ ವೇಳೆಗೆ ಟೀಂ ಇಂಡಿಯಾ ಕೋಚ್​ ಬದಲಾವಣೆ? ಶಾಕಿಂಗ್​ ಹೇಳಿಕೆ ನೀಡಿದ ಹರ್ಭಜನ್ ಸಿಂಗ್​

    ಇತ್ತೀಚೆಗಷ್ಟೇ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಭಾರತ ತಂಡದ ಮುಖ್ಯ ಕೋಚ್ ಹುದ್ದೆಯ ಕುರಿತು ಮಹತ್ವದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಇಬ್ಬರು ನಾಯಕರಿರುವಾಗ ಇಬ್ಬರು ಕೋಚ್‌ಗಳು ಏಕೆ ಇರಬಾರದು ಎಂದು ಕೇಳಿದರು.

    MORE
    GALLERIES

  • 68

    Team India: ವಿಶ್ವಕಪ್​ ವೇಳೆಗೆ ಟೀಂ ಇಂಡಿಯಾ ಕೋಚ್​ ಬದಲಾವಣೆ? ಶಾಕಿಂಗ್​ ಹೇಳಿಕೆ ನೀಡಿದ ಹರ್ಭಜನ್ ಸಿಂಗ್​

    ಟಿ20 ಕೋಚ್ ಸ್ಥಾನದಿಂದ ದ್ರಾವಿಡ್ ಅವರನ್ನು ತೆಗೆದು ಹಾಕಿ ಅವರ ಜಾಗಕ್ಕೆ ಬೇರೆಯವರನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಟಿ20 ಮುಖ್ಯ ಕೋಚ್ ಆಗಿ ಆಶಿಶ್ ನೆಹ್ರಾ ಅಥವಾ ವೀರೇಂದ್ರ ಸೆಹ್ವಾಗ್ ಪರಿಪೂರ್ಣರಾಗುತ್ತಾರೆ ಎಂದು ಭಜ್ಜಿ ಪ್ರತಿಕ್ರಿಯಿಸಿದ್ದಾರೆ.

    MORE
    GALLERIES

  • 78

    Team India: ವಿಶ್ವಕಪ್​ ವೇಳೆಗೆ ಟೀಂ ಇಂಡಿಯಾ ಕೋಚ್​ ಬದಲಾವಣೆ? ಶಾಕಿಂಗ್​ ಹೇಳಿಕೆ ನೀಡಿದ ಹರ್ಭಜನ್ ಸಿಂಗ್​

    ಆಶಿಶ್ ನೆಹ್ರಾ ಅವರು ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್‌ನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದನ್ನು ನೆನಪಿಸಿದರು. ಟೆಸ್ಟ್ ಮತ್ತು ಏಕದಿನ ತಂಡಗಳ ಕೋಚ್ ಆಗಿ ದ್ರಾವಿಡ್ ಅವರನ್ನೇ ಮುಂದುವರಿಸಬೇಕು ಎಂದು ಸಲಹೆ ನೀಡಿದ್ದಾರೆ.

    MORE
    GALLERIES

  • 88

    Team India: ವಿಶ್ವಕಪ್​ ವೇಳೆಗೆ ಟೀಂ ಇಂಡಿಯಾ ಕೋಚ್​ ಬದಲಾವಣೆ? ಶಾಕಿಂಗ್​ ಹೇಳಿಕೆ ನೀಡಿದ ಹರ್ಭಜನ್ ಸಿಂಗ್​

    ಇಂಗ್ಲೆಂಡ್ ತಂಡದಲ್ಲೂ ಇಬ್ಬರು ಕೋಚ್‌ಗಳಿದ್ದಾರೆ ಎಂದು ಹರ್ಭಜನ್ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಇಂಗ್ಲೆಂಡ್‌ ಟೆಸ್ಟ್‌ ತಂಡದ ಕೋಚ್‌ ಆಗಿರುವ ಬ್ರೆಂಡನ್‌ ಮೆಕಲಂ, ಆ ಮಾದರಿಯಲ್ಲಿ ಆಡುವ ರೀತಿಯನ್ನು ಬದಲಾಯಿಸಿದ್ದಾರೆ ಎಂದು ಹೇಳಿದ್ದಾರೆ. ಅದೇ ರೀತಿ ಟೀಂ ಇಂಡಿಯಾ ನೆಹ್ರಾ ಅಥವಾ ಸೆಹ್ವಾಗ್ ಅವರಲ್ಲಿ ಒಬ್ಬರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಬೇಕು ಅಂದಾಗ ಮಾತ್ರ ಟಿ20 ವಿಶ್ವಕಪ್‌ನಲ್ಲಿ ತಂಡದ ಸ್ಕ್ರಿಪ್ಟ್ ಬದಲಾಗಲಿದೆ ಎಂದು ಹೇಳಿದ್ದಾರೆ.

    MORE
    GALLERIES