Ravindra Jadeja: ಕ್ರಿಕೆಟ್ ಆಡೋಕೆ ಚಕ್ಕರ್, ಪ್ರಚಾರಕ್ಕೆ ಮಾತ್ರ ಹಾಜರ್! ಪತ್ನಿ ಪರ ಜಡೇಜಾ ಭರ್ಜರಿ ಕ್ಯಾಂಪೇನ್
Ravindra Jadeja: ಗುಜರಾತ್ ಚುನಾವಣೆಯಲ್ಲಿ ಟೀಂ ಇಂಡಿಯಾದ ಜೆರ್ಸಿ ಭರ್ಜರಿ ಸೌಂಡ್ ಮಾಡುತ್ತಿದೆ. ರವೀಂದ್ರ ಜಡೇಜಾ ಅವರ ಪತ್ನಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.
ಗುಜರಾತ್ ನಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಕುಟುಂಬ ಹಾಟ್ ಟಾಪಿಕ್ ಆಗಿದೆ.
2/ 7
ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಬಿಜೆಪಿ ಪರವಾಗಿ ಜಾಮ್ನಗರ ಉತ್ತರ ಕ್ಷೇತ್ರದಿಂದ ಶಾಸಕರಾಗಿ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಪ್ರಚಾರದಲ್ಲಿದ್ದಾರೆ. ಮನೆ ಮನೆಗೆ ತೆರಳಿ ತಮಗೆ ಮತ ನೀಡುವಂತೆ ವಿನಂತಿಸುತ್ತಿದ್ದಾರೆ.
3/ 7
ಪತ್ನಿಗಾಗಿ ರವೀಂದ್ರ ಜಡೇಜಾ ಕೂಡ ಪ್ರಚಾರ ಮಾಡುತ್ತಿದ್ದಾರೆ. ಒಂದೆಡೆ ಪತ್ನಿ ಮನೆ ಮನೆಗೆ ತಿರುಗಿ ಪ್ರಚಾರ ನಡೆಸುತ್ತಿದ್ದರೆ, ಇನ್ನೊಂದೆಡೆ ರವೀಂದ್ರ ಜಡೇಜಾ ರೋಡ್ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ.
4/ 7
ಜಾಮ್ನಗರ ಉತ್ತರ ಕ್ಷೇತ್ರದ ಹಲವೆಡೆ ರವೀಂದ್ರ ಜಡೇಜಾ ಫ್ಲೆಕ್ಸಿ ಕಾಣಿಸಿಕೊಂಡಿದೆ. ಟೀಂ ಇಂಡಿಯಾ ಜೆರ್ಸಿಯಲ್ಲಿ ರವೀಂದ್ರ ಜಡೇಜಾ ಅವರ ಚಿತ್ರಗಳಿವೆ. ಈಗ ಆ ಫ್ಲೆಕ್ಸಿಗಳ ಮೇಲೆ ಗುಜರಾತ್ ನಲ್ಲಿ ಕೋಲಾಹಲ ಎದ್ದಿದೆ.
5/ 7
ಜಡೇಜಾ ಕ್ರಿಕೆಟಿಗರಾಗಿರುವುದರಿಂದ ಟೀಂ ಇಂಡಿಯಾ ಜೆರ್ಸಿಯನ್ನು ಪ್ರಚಾರಕ್ಕೆ ಬಳಸಿದರೆ ಹೇಗೆ ಎಂದು ಎದುರಾಳಿ ಪಕ್ಷಗಳ ಅಭ್ಯರ್ಥಿಗಳು ಸಿಟ್ಟಾಗಿದ್ದಾರೆ. ಇದಕ್ಕೆ ಬಿಸಿಸಿಐ ಕೂಡಲೇ ಸ್ಪಂದಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
6/ 7
ಭಾರತ ಕ್ರಿಕೆಟ್ ತಂಡವನ್ನು ರಾಜಕೀಯಕ್ಕೆ ಎಳೆದು ತರುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿರುವ ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಟೀಂ ಇಂಡಿಯಾ ಜೆರ್ಸಿಯಲ್ಲಿ ಜಡೇಜಾ ಇರುವ ಫ್ಲೆಕ್ಸಿಯನ್ನು ತೆಗೆಯುವಂತೆ ಒತ್ತಾಯಿಸುತ್ತಿದ್ದಾರೆ.
7/ 7
ಇದರ ನಡುವೆ ಮುಂಬರಲಿರುವ ಬಾಂಗ್ಲಾದೇಶ ಸರಣಿಯಿಂದ ಜಡೇಜಾ ದೂರವಿದ್ದಾರೆ. ಅವರಿಗೆ ಇಂಜೂರಿ ಸಮಸ್ಯೆಯಿಂದ ಸರಣಿಗೆ ಆಯ್ಕೆ ಆಗಲಿಲ್ಲ. ಆದರೆ ಇದೀಗ ಪತ್ನಿ ಪರ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿರುವುದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.