ಟೀಂ ಇಂಡಿಯಾದ ಪರವಾಗಿ ರವೀಂದ್ರ ಜಡೇಜಾ, ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಈ ಬಾರಿ ಟೆಸ್ಟ್ ಸರಣಿಯ ಆರಂಭದಲ್ಲೇ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಈ ಮೂವರು ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಮ್ಮ ತಂಡವನ್ನು ಮುನ್ನಡೆಸುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಈ ಮೂವರ ಆಟಕ್ಕೆ ಕ್ರಿಕೆಟ್ ಆಟದ ದೇವರೆಂದೇ ಗುರುತಿಸಿಕೊಂಡಿರುವ ಟೀಂ ಇಂಡಿಯಾದ ಅನುಭವಿ ಆಟಗಾರ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನು ನಾಗ್ಪುರ ಟೆಸ್ಟ್ ಪಂದ್ಯಾಟದ ಎರಡನೇ ದಿನವೂ ಟೀಂ ಇಂಡಿಯಾ ಅದ್ಭುತ ಆಟ ಪ್ರದರ್ಶಿಸಿತು. ಎರಡನೇ ದಿನ 1 ವಿಕೆಟ್‌ಗೆ 77 ರನ್‌ಗಳಿಂದ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಪಂದ್ಯಾಟ ಮುಗಿಯುವ ಹೊತ್ತಿಗೆ 7 ವಿಕೆಟ್ ಕಳೆದುಕೊಂಡು 321 ರನ್ ಗಳಿಸಿದೆ. ಈ ಮೂಲಕ ಭಾರತ 144 ರನ್‌ಗಳ ಮುನ್ನಡೆಯನ್ನು ಸಾಧಿಸಿದೆ. ಈ ಯಶಸ್ಸಿಗೆ ಕಾರಣರಾದ ರವೀಂದ್ರ ಜಡೇಜಾ, ರೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್ ಅವರನ್ನು ಕುರಿತು ಕ್ರಿಕೆಟ್ ದೇವರು RRR ಎಂದು ಟ್ವೀಟ್ ಮಾಡಿದ್ದಾರೆ.