Yuvraj Singh: ಒಂದಲ್ಲಾ, ಎರಡಲ್ಲಾ 8 ಬಾಲಿವುಡ್‌ ನಟಿಯರೊಂದಿಗೆ ಪ್ರೀತಿ ಪ್ರೇಮ ಪ್ರಣಯ! ಇದು ಯುವರಾಜ್ ಸಿಂಗ್ ಲವ್‌ ಸ್ಟೋರಿ

Yuvraj Singh: ಯುವರಾಜ್ ಸಿಂಗ್ ಅವರ ಸಿಕ್ಸರ್‌ಗಳು ಅನೇಕ ಬೌಲರ್‌ಗಳನ್ನು ಬೆಚ್ಚಿಬೀಳಿಸಿದರೆ ಅವರ ಆಟವು ಅಂದಿನ ಕಾಲದಲ್ಲಿ ಅನೇಕ ಹುಡುಗಿಯರ ಮನಸ್ಸನ್ನು ಕದ್ದಿತ್ತು. ಅದೇ ರೀತಿ ಯುವರಾಜ್​ ಸಿಂಗ್​ ಅವರ ಪ್ರೇಮ ಕಥೆಗಳು ಇಲ್ಲಿದೆ ನೋಡಿ.

First published:

  • 110

    Yuvraj Singh: ಒಂದಲ್ಲಾ, ಎರಡಲ್ಲಾ 8 ಬಾಲಿವುಡ್‌ ನಟಿಯರೊಂದಿಗೆ ಪ್ರೀತಿ ಪ್ರೇಮ ಪ್ರಣಯ! ಇದು ಯುವರಾಜ್ ಸಿಂಗ್ ಲವ್‌ ಸ್ಟೋರಿ

    ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಕ್ರಿಕೆಟ್ ಲೋಕದಲ್ಲಿ ಎಷ್ಟು ಜನಪ್ರಿಯರಾಗಿದ್ದಾರೋ ಅಷ್ಟೇ ಪ್ರೀತಿ ಪ್ರೇಮ ಪ್ರಕರಣಗಳಲ್ಲೂ ಜನಪ್ರಿಯರಾಗಿದ್ದಾರೆ. ಯುವರಾಜ್ ಸಿಂಗ್ ಅವರ ಪ್ರೇಮ ಪ್ರಕರಣಗಳು ಮಾಧ್ಯಮಗಳಲ್ಲಿ ಆಗಾಗ ಚರ್ಚೆಯಾಗುತ್ತಿದ್ದವು. ಮದುವೆಗೂ ಮುನ್ನ ಯುವರಾಜ್ ಸಿಂಗ್ ಹೆಸರು 8 ಮಂದಿ ಬಾಲಿವುಡ್ ಬೆಡಗಿಯರ ಜೊತೆ ತಳುಕು ಹಾಕಿಕೊಂಡಿತ್ತು.ಆದರೆ ಕೊನೆಗೆ ಯುವರಾಜ್ ಸಿಂಗ್ ಹೇಜಲ್ ಕೀಚ್ ಅವರನ್ನು ಸಂಗಾತಿಯನ್ನಾಗಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.

    MORE
    GALLERIES

  • 210

    Yuvraj Singh: ಒಂದಲ್ಲಾ, ಎರಡಲ್ಲಾ 8 ಬಾಲಿವುಡ್‌ ನಟಿಯರೊಂದಿಗೆ ಪ್ರೀತಿ ಪ್ರೇಮ ಪ್ರಣಯ! ಇದು ಯುವರಾಜ್ ಸಿಂಗ್ ಲವ್‌ ಸ್ಟೋರಿ

    ಕಿಮ್ ಶರ್ಮಾ: 'ಮೊಹಬ್ಬತೇ' ಚಿತ್ರದಿಂದ ಖ್ಯಾತಿ ಗಳಿಸಿದ ನಟಿ ಕಿಮ್ ಶರ್ಮಾ ಯುವರಾಜ್ ಸಿಂಗ್ ಅವರ ಮಾಜಿ ಗೆಳತಿ ಎಂದು ಕರೆಯುತ್ತಾರೆ. 2007ರಲ್ಲಿ ಬೇರ್ಪಡುವ ಮೊದಲು, ಯುವರಾಜ್ ಮತ್ತು ಕಿಮ್ ನಾಲ್ಕು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು ಎನ್ನಲಾಗುತ್ತದೆ.

    MORE
    GALLERIES

  • 310

    Yuvraj Singh: ಒಂದಲ್ಲಾ, ಎರಡಲ್ಲಾ 8 ಬಾಲಿವುಡ್‌ ನಟಿಯರೊಂದಿಗೆ ಪ್ರೀತಿ ಪ್ರೇಮ ಪ್ರಣಯ! ಇದು ಯುವರಾಜ್ ಸಿಂಗ್ ಲವ್‌ ಸ್ಟೋರಿ

    ಪ್ರೀತಿ ಝಂಗಿಯಾನಿ: ಕಿಮ್ ಶರ್ಮಾ ಜೊತೆಗಿನ ಬ್ರೇಕಪ್​ ನಂತರ, ಯುವರಾಜ್ ಸಿಂಗ್ ಅವರ ಹೆಸರು ಶಾರುಖ್ ಖಾನ್ ಚಿತ್ರದಲ್ಲಿ ನಟಿಸಿದ್ದ ನಟಿ ಪ್ರೀತಿ ಝಂಗಿಯಾನಿಯೊಂದಿಗೆ ಕೇಳಿ ಬಂದಿತ್ತು. ಆ ಸಮಯದಲ್ಲಿ ಯುವರಾಜ್ ಮತ್ತು ಪ್ರೀತಿ ಕೆಲವು ಸಮಯ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಹರಡಿದ್ದವು. ಆದರೆ, ಯುವರಾಜ್ ಅಥವಾ ಪ್ರೀತಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ.

    MORE
    GALLERIES

  • 410

    Yuvraj Singh: ಒಂದಲ್ಲಾ, ಎರಡಲ್ಲಾ 8 ಬಾಲಿವುಡ್‌ ನಟಿಯರೊಂದಿಗೆ ಪ್ರೀತಿ ಪ್ರೇಮ ಪ್ರಣಯ! ಇದು ಯುವರಾಜ್ ಸಿಂಗ್ ಲವ್‌ ಸ್ಟೋರಿ

    ದೀಪಿಕಾ ಪಡುಕೋಣೆ: ಯುವರಾಜ್ ಅವರ ಪ್ರೇಮ ವಿಷಯದಲ್ಲಿ ದೀಪಿಕಾ ಪಡುಕೋಣೆ ಹೆಸರು ಹೆಚ್ಚು ಕೇಳಿಬಂದಿತ್ತು. 2007ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಅದ್ಭುತ ಪ್ರದರ್ಶನ ನೀಡಿದ ನಂತರ, ದೀಪಿಕಾ ಸ್ಟ್ಯಾಂಡ್‌ನಿಂದ ಹಲವಾರು ಬಾರಿ ಯುವರಾಜ್‌ಗಾಗಿ ಹುರಿದುಂಬಿಸುತ್ತಿರುವುದು ಕಂಡುಬಂದಿತ್ತು. ಆ ಸಮಯದಲ್ಲಿ ಕ್ರಿಕೆಟಿಗನ ಹುಟ್ಟುಹಬ್ಬದಂದು ದೀಪಿಕಾ ಹುಟ್ಟುಹಬ್ಬದ ಸಂತೋಷಕೂಟವನ್ನು ಆಯೋಜಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

    MORE
    GALLERIES

  • 510

    Yuvraj Singh: ಒಂದಲ್ಲಾ, ಎರಡಲ್ಲಾ 8 ಬಾಲಿವುಡ್‌ ನಟಿಯರೊಂದಿಗೆ ಪ್ರೀತಿ ಪ್ರೇಮ ಪ್ರಣಯ! ಇದು ಯುವರಾಜ್ ಸಿಂಗ್ ಲವ್‌ ಸ್ಟೋರಿ

    ರಿಯಾ ಸೇನ್: ದೀಪಿಕಾ ಪಡುಕೋಣೆ ಅವರೊಂದಿಗಿನ ಬ್ರೇಕಪ್​ ನಂತರ, ಯುವರಾಜ್ ಸಿಂಗ್ ಮತ್ತು ಬೆಂಗಾಲಿ ಸುಂದರಿ ರಿಯಾ ಸೇನ್ ನಡುವಿನ ಪ್ರೇಮ ಸಂಬಂಧದ ಬಗ್ಗೆ ಚರ್ಚೆ ಪ್ರಾರಂಭವಾಯಿತು. ಯುವರಾಜ್ ಪಾರ್ಟಿಯೊಂದರಲ್ಲಿ ರಿಯಾ ಸೇನ್ ಅವರನ್ನು ಭೇಟಿಯಾದರು. ಇದರ ನಂತರ, ಯುವರಾಜ್ ಮತ್ತು ರಿಯಾ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಪಾರ್ಟಿಗಳಲ್ಲಿಯೂ ಸಹ ಅನೇಕ ಬಾರಿ ಇಬ್ಬರೂ ಪರಸ್ಪರರ ಕೈ ಹಿಡಿದಿರುವುದನ್ನು ಕಂಡುಬಂದಿತ್ತು.

    MORE
    GALLERIES

  • 610

    Yuvraj Singh: ಒಂದಲ್ಲಾ, ಎರಡಲ್ಲಾ 8 ಬಾಲಿವುಡ್‌ ನಟಿಯರೊಂದಿಗೆ ಪ್ರೀತಿ ಪ್ರೇಮ ಪ್ರಣಯ! ಇದು ಯುವರಾಜ್ ಸಿಂಗ್ ಲವ್‌ ಸ್ಟೋರಿ

    ಮಿನಿಶಾ ಲಾಂಬಾ: ಯುವರಾಜ್ ಸಿಂಗ್ ಮತ್ತು ಮಿನಿಶಾ ಲಂಬಾ ಅವರ ಸಂಬಂಧದ ಸುದ್ದಿ ಸಹ ಹರಿದಾಡಿತ್ತು. 2011ರಲ್ಲಿ, ಮಿನಿಶಾ ಮತ್ತು ಯುವರಾಜ್ ಪರಸ್ಪರ ಚುಂಬಿಸುತ್ತಿರುವ ಫೋಟೋ ವೈರಲ್ ಆಗಿತ್ತು. ಆದಾಗ್ಯೂ, ಮಿನಿಶಾ ಲಾಂಬಾ ಈ ವರದಿಗಳನ್ನು ತಳ್ಳಿಹಾಕಿದ್ದರು. ಈ ಚಿತ್ರದಲ್ಲಿ ನನ್ನಂತೇ ಕಾಣುವ ಹುಡುಗಿ ಇದ್ದಾರೆ ಎಂದು ಹೇಳಿದ್ದರು.

    MORE
    GALLERIES

  • 710

    Yuvraj Singh: ಒಂದಲ್ಲಾ, ಎರಡಲ್ಲಾ 8 ಬಾಲಿವುಡ್‌ ನಟಿಯರೊಂದಿಗೆ ಪ್ರೀತಿ ಪ್ರೇಮ ಪ್ರಣಯ! ಇದು ಯುವರಾಜ್ ಸಿಂಗ್ ಲವ್‌ ಸ್ಟೋರಿ

    ಆಂಚಲ್ ಕುಮಾರ್: ಯುವರಾಜ್ ಸಿಂಗ್ ಅವರ ಬಾಲ್ಯದ ಗೆಳತಿ ಆಂಚಲ್ ಕುಮಾರ್‌ ಹೆಸರು ಸಹ ತಳಕು ಹಾಕಿಕೊಂಡಿತ್ತು. ಇಬ್ಬರೂ ಅನೇಕ ಐಪಿಎಲ್ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಂತರ ಯುವರಾಜ್ ಸಿಂಗ್ ಮತ್ತು ಆಂಚಲ್ ಕುಮಾರ್ ಅವರ ಪ್ರೇಮ ಪ್ರಕರಣದ ಸುದ್ದಿ ಮುನ್ನೆಲೆಗೆ ಬಂದಿತು. ಆದರೆ, ಈ ವಿಚಾರದಲ್ಲಿ ಎರಡೂ ಕಡೆಯಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಹೀಗಿರುವಾಗ ಅದರಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎನ್ನುವುದನ್ನು ಹೇಳಲಾಗದು.

    MORE
    GALLERIES

  • 810

    Yuvraj Singh: ಒಂದಲ್ಲಾ, ಎರಡಲ್ಲಾ 8 ಬಾಲಿವುಡ್‌ ನಟಿಯರೊಂದಿಗೆ ಪ್ರೀತಿ ಪ್ರೇಮ ಪ್ರಣಯ! ಇದು ಯುವರಾಜ್ ಸಿಂಗ್ ಲವ್‌ ಸ್ಟೋರಿ

    ನೇಹಾ ಧೂಪಿಯಾ: 2014ರಲ್ಲಿ ಸೋಫಿ ಚೌದ್ರಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಬ್ಬರೂ ಒಟ್ಟಿಗೆ ಭಾಗವಹಿಸಿದಾಗ ನೇಹಾ ಧೂಪಿಯಾ ಯುವರಾಜ್ ಸಿಂಗ್ ಜೊತೆಗಿನ ಪ್ರಣಯ ಸಂಬಂಧದ ವದಂತಿಗಳು ಪ್ರಾರಂಭವಾದವು. ಆದರೆ, ನೇಹಾ ಧೂಪಿಯಾ ತಮ್ಮ ಡೇಟಿಂಗ್ ವದಂತಿಗಳನ್ನು ನಿರಾಕರಿಸಿದ್ದಾರೆ. ಅದೇ ಸಮಯದಲ್ಲಿ, ಯುವರಾಜ್ ಸಿಂಗ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

    MORE
    GALLERIES

  • 910

    Yuvraj Singh: ಒಂದಲ್ಲಾ, ಎರಡಲ್ಲಾ 8 ಬಾಲಿವುಡ್‌ ನಟಿಯರೊಂದಿಗೆ ಪ್ರೀತಿ ಪ್ರೇಮ ಪ್ರಣಯ! ಇದು ಯುವರಾಜ್ ಸಿಂಗ್ ಲವ್‌ ಸ್ಟೋರಿ

    ಪ್ರೀತಿ ಜಿಂಟಾ: ಐಪಿಎಲ್ ಫ್ರಾಂಚೈಸಿ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಸಹ-ಮಾಲೀಕರಾದ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರೊಂದಿಗೆ ಯುವರಾಜ್ ಸಿಂಗ್ ಅವರ ಸಂಬಂಧದ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ವರದಿಗಳ ನಂತರ ಪ್ರೀತಿ ಜಿಂಟಾ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡುವ ಮೂಲಕ ಈ ವರದಿಗಳಿಗೆ ಅಂತ್ಯ ಹಾಡಿದ್ದರು. ನಾನು ಯುವರಾಜ್ ಸಿಂಗ್ ಅವರೊಂದಿಗೆ ಎಂದಿಗೂ ಡೇಟಿಂಗ್ ಮಾಡಿಲ್ಲ ಮತ್ತು ಡೇಟಿಂಗ್ ಮಾಡುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದರು.

    MORE
    GALLERIES

  • 1010

    Yuvraj Singh: ಒಂದಲ್ಲಾ, ಎರಡಲ್ಲಾ 8 ಬಾಲಿವುಡ್‌ ನಟಿಯರೊಂದಿಗೆ ಪ್ರೀತಿ ಪ್ರೇಮ ಪ್ರಣಯ! ಇದು ಯುವರಾಜ್ ಸಿಂಗ್ ಲವ್‌ ಸ್ಟೋರಿ

    ಹ್ಯಾಝೆಲ್ ಕೀಚ್: 8 ಬಾಲಿವುಡ್ ಸುಂದರಿಯರೊಂದಿಗಿನ ಪ್ರೇಮ ಸಂಬಂಧದ ಬಗ್ಗೆ ಚರ್ಚೆಯಲ್ಲಿದ್ದ ಯುವರಾಜ್ ಸಿಂಗ್, 2016ರಲ್ಲಿ 'ಬಾಡಿಗಾರ್ಡ್' ಚಿತ್ರದ ನಟಿ ಹೇಜೆಲ್ ಕೀಚ್ ಅವರನ್ನು ಮದುವೆಯಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಯುವರಾಜ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಹ್ಯಾಝೆಲ್ ಅವರೊಂದಿಗಿನ ಸಂಬಂಧವನ್ನು ದೃಢಪಡಿಸಿದರು. ಸಂದರ್ಶನವೊಂದರಲ್ಲಿ, ಯುವರಾಜ್ ಅವರು ಹ್ಯಾಝೆಲ್​ ತಮ್ಮ ತಾಯಿಯ ನೋಟವನ್ನು ಹೊಂದಿದ್ದಾರೆ ಎಂದು ಹೇಳಿದ್ದರು. ಇದೀಗ ಈ ಜೋಡಿಗೆ ಒಂದು ಮುದ್ದಾದ ಮಗು ಸಹ ಇದೆ.

    MORE
    GALLERIES