ಭಾರತದ ವೈವಿಧ್ಯತೆ ಮತ್ತು ಅದರ ಸಂಸ್ಕೃತಿಯಿಂದಾಗಿ ದಕ್ಷಿಣ ಆಫ್ರಿಕಾದ ಅತ್ಯುತ್ತಮ ಫೀಲ್ಡರ್ ಜಾಂಟಿ ರೋಡ್ಸ್ ಭಾರತದ ಮೇಲೆವಿಶೇಷ ಪ್ರೀತಿಯನ್ನು ಹೊಂದಿದ್ದಾರೆ. ಇಲ್ಲಿನ ಸಂಸ್ಕೃತಿ, ನಾಗರೀಕತೆ, ಆಧ್ಯಾತ್ಮಿಕತೆ ಮತ್ತು ಸಾತ್ವಿಕ ಆಹಾರವನ್ನು ಯಾವಾಗಲೂ ಅನುಸರಿಸುತ್ತಾರೆ. ಜಾಂಟಿ ರೋಡ್ಸ್ ಯೋಗ ಶಿಕ್ಷಕಿಯನ್ನು ಮದುವೆ ಆಗುವ ಮೂಲಕ ಯೋಗದ ಕಡೆಗೆ ಅವರ ಆಕರ್ಷಣೆ ಇನ್ನಷ್ಟು ಹೆಚ್ಚಾಯಿತು. ಯೋಗವು ಈಗ ಜಾಂಟಿ ರೋಡ್ಸ್ ಅವರ ಜೀವನದಲ್ಲಿ ಬಹಳ ಮುಖ್ಯವಾದ ಭಾಗವಾಗಿದೆ.
ಜಾಂಟಿ ರೋಡ್ಸ್ 2014ರಲ್ಲಿ ಯೋಗ ಶಿಕ್ಷಕಿ ಮೆಲಾನಿ ವೋಲ್ಫ್ ಅವರನ್ನು ವಿವಾಹವಾದರು. 2015ರಲ್ಲಿ, ಜಾಂಟಿ ಮಗಳ ತಂದೆಯಾದರು. ಜಾಂಟಿಯವರ ಮಗಳು ಮುಂಬೈನಲ್ಲಿ ಜನಿಸಿದರು, ಇದರಿಂದಾಗಿ ಮಗಳಿಗೆ 'ಇಂಡಿಯಾ' ಎಂದು ಹೆಸರಿಟ್ಟರು. ಇದರ ನಂತರ, 2017ರಲ್ಲಿ, ಜಾಂಟಿ ಅವರ ದಂಪತಿಗೆ ಒಂದು ಗಂಡು ಮಗು ಸಹ ಜನಿಸಿದೆ. ಜಾಂಟಿ ಮತ್ತು ಮೆಲಾನಿ ಆಗಾಗ್ಗೆ ತಮ್ಮ ಮಕ್ಕಳೊಂದಿಗೆ ಭಾರತಕ್ಕೆ ಬರುತ್ತಾರೆ.