Pele is No More: ಪೀಲೆ ಅವರು ಸ್ವಲ್ಪ ಸಮಯದವರೆಗೆ ಕ್ಯಾನ್ಸರ್ನೊಂದಿಗೆ ಹೋರಾಡುತ್ತಿದ್ದರು. ಇತ್ತೀಚೆಗೆ, ಅವರ ಆರೋಗ್ಯ ಸ್ಥಿತಿಯು ಹದಗೆಟ್ಟಿತ್ತು ಎಂದು ವೈದ್ಯರು ಈ ವಾರದ ಆರಂಭದಲ್ಲಿ ಘೋಷಿಸಿದ್ದರು.
ಫುಟ್ಬಾಲ್ ದಂತಕಥೆ ಪೀಲೆ (Pele) ಕೊನೆಯುಸಿರೆಳೆದಿದ್ದಾರೆ. ಕೊಲೊನ್ ಟ್ಯೂಮರ್ ನಂತರ ಕ್ಯಾನ್ಸರ್ ಚಿಕಿತ್ಸೆಯಲ್ಲಿದ್ದ 82 ವರ್ಷದ ಪೀಲೆ ನಿಧನರಾಗಿದ್ದಾರೆ.
2/ 8
ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಪರಿಗಣಿಸಲ್ಪಟ್ಟ ಎಡ್ಸನ್ ಅರಾಂಟೆಸ್ ಡೊ ನಾಸಿಮೆಂಟೊ ಪೀಲೆ ಅವರ ನಿಜವಾದ ಹೆಸರಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ದುರ್ಬಲವಾದ ಆರೋಗ್ಯದಿಂದ ಅವರು ಬಳಲುತ್ತಿದ್ದರು.
3/ 8
ಪೀಲೆ ಅವರು ಸ್ವಲ್ಪ ಸಮಯದವರೆಗೆ ಕ್ಯಾನ್ಸರ್ನೊಂದಿಗೆ ಹೋರಾಡುತ್ತಿದ್ದರು. ಇತ್ತೀಚೆಗೆ, ಅವರ ಆರೋಗ್ಯ ಸ್ಥಿತಿಯು ಹದಗೆಟ್ಟಿತ್ತು ಎಂದು ವೈದ್ಯರು ಈ ವಾರದ ಆರಂಭದಲ್ಲಿ ಘೋಷಿಸಿದ್ದರು.
4/ 8
ಮೂರು ವಿಶ್ವಕಪ್ಗಳನ್ನು ಗೆದ್ದ ಇತಿಹಾಸದಲ್ಲಿ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ (1958, 1962 ಮತ್ತು 1970), ಪೀಲೆ ಅವರು 1977ರಲ್ಲಿ ನಿವೃತ್ತರಾಗುವ ಮೊದಲು 1,000 ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ ಕ್ರೀಡೆಯಲ್ಲಿ ಅತ್ಯಂತ ಶ್ರೇಷ್ಠ ವೃತ್ತಿಜೀವನವನ್ನು ಹೊಂದಿದ್ದರು.
5/ 8
1956ರಿಂದ 1974ರ ವರೆಗೆ ಬ್ರೆಝಿಲ್ನ ಸ್ಯಾಂಟೋಸ್ ಕ್ಲಬ್ ಪರ ಆಡಿದ್ದ ಪೀಲೆ 757 ಪಂದ್ಯಗಳಲ್ಲಿ 643 ಗೋಲ್ ಬಾರಿಸಿ ಫುಟ್ಬಾಲ್ ಇತಿಹಾಸದಲ್ಲೇ ಯಾರು ಮಾಡದ ಸಾಧನೆ ಮರೆದಿದ್ದರು.
6/ 8
ಈ ಅಪೂರ್ವ ದಾಖಲೆಯನ್ನು ಮೆಸ್ಸಿ 644 ಗೋಲು ಗಳಿಸುವುದರೊಂದಿಗೆ ಮುರಿದಿದ್ದರು. 17 ಸೀಸನ್ಗಳಿಂದ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಪರ ಕಣಕ್ಕಿಳಿಯುತ್ತಿರುವ ಅರ್ಜೆಂಟೀನಾ ಆಟಗಾರ ಮೆಸ್ಸಿ 644 ಗೋಲ್ಗಳನ್ನು ಬಾರಿಸುವ ಮೂಲಕ ಈ ಅಪರೂಪದ ದಾಖಲೆ ನಿರ್ಮಿಸಿದ್ದರು.
7/ 8
ಇನ್ನೂ ಪೀಲೆ ನಿಧನಕ್ಕೆ ಫುಟ್ಬಾಲ್ ಪ್ರೇಮಿಗಳು ಕಣ್ಣೀರಿಡುತ್ತಿದ್ದಾರೆ. ಜೊತೆಗೆ ಮೆಸ್ಸಿ ಹಾಗೂ ರೊನಾಲ್ಡೋ ಸಂತಾಪ ಸೂಚಿಸಿದ್ದಾರೆ.
8/ 8
ಅಕ್ಟೋಬರ್ 23, 1940 ರಂದು ಮಿನಾಸ್ ಗೆರೈಸ್ ಪಟ್ಟಣವಾದ ಟ್ರೆಸ್ ಕೊರಾಸ್ ನಲ್ಲಿ ಪೀಲೆ ಜನಿಸಿದರು. ತನ್ನ ತಂದೆಯಿಂದ ಈ ಫುಟ್ಬಾಲ್ ಆಟವನ್ನು ಕಲಿತಿದ್ದರು.