ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಫೈನಲ್ನಲ್ಲಿ ಫ್ರಾನ್ಸ್ ವಿರುದ್ಧ ಗೆಲ್ಲುವ ಮೂಲಕ ಹಲವಾರು ದಾಖಲೆಗಳನ್ನು ಮುರಿದರು. ಇದೀಗ ಮೆಸ್ಸಿ ಮೈದಾನದ ಹೊರಗೆ ದಾಖಲೆ ಬರೆದಿದ್ದಾರೆ. ವಿಶ್ವಕಪ್ ವಿಜಯದ ನಂತರ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಕ್ರಿಸ್ಟಿಯಾನೋ ರೊನಾಲ್ಡೊ ಅವರ ದಾಖಲೆಯನ್ನು ಮೀರಿಸಿದೆ. ಇದಲ್ಲದೇ ವಿಶ್ವದಲ್ಲಿ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಎಂಬ ದಾಖಲೆ ಮುರಿದಿದೆ.
ಪ್ರಸ್ತುತ, ಕೇವಲ 32 ತಂಡಗಳು ವಿಶ್ವಕಪ್ ಅಂತಿಮ ತಂಡವಾಗಿ ಕಣಕ್ಕಿಳಿಯುತ್ತಿದ್ದವು. ಆದರೆ ಇದೀಗ ಈ ಸಂಖ್ಯೆ 2026ರಲ್ಲಿ 48ಕ್ಕೆ ತಲುಪಲಿದೆ. ಪ್ರತಿ ಗುಂಪಿಗೆ 3 ತಂಡಗಳಂತೆ 16 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಅಗ್ರ 2 ರಲ್ಲಿ ನಿಲ್ಲುವ ಎಲ್ಲಾ 32 ತಂಡಗಳು ನಾಕೌಟ್ ತಲುಪುತ್ತವೆ. ಏಷ್ಯಾದ 5 ತಂಡಗಳು ಮಾತ್ರ 2022ರ ವಿಶ್ವಕಪ್ಗೆ ನೇರವಾಗಿ ಅರ್ಹತೆ ಪಡೆದಿವೆ. ಕತಾರ್ ಆತಿಥೇಯರಾಗಿ ಅರ್ಹತೆ ಪಡೆದಿತ್ತು.