FIFA World Cup 2022 Final: ಭಾರತದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಫುಟ್ಬಾಲ್ ಸ್ಟಾರ್ ಪ್ಲೇಯರ್, ಏನ್ ಹೇಳಿದ್ದಾರೆ ನೋಡಿ
Neymar: ಕತಾರ್ ವಿಶ್ವಕಪ್ ಫೈನಲ್ ಹಂತಕ್ಕೆ ತಲುಪಿದ್ದು, ಚಿನ್ನದ ವಿಶ್ವಕಪ್ಗೆ ಯಾರು ಮುತ್ತಿಕ್ಕುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇದರ ನಡುವೆ ಭಾರತದ ಫುಟ್ಬಾಲ್ ಅಭಿಮಾನಿಗಳಿಗೆ ಫುಟ್ಬಾಲ್ ಸ್ಟಾರ್ ಪ್ಲೇಯರ್ ಧನ್ಯವಾದ ತಿಳಿಸಿದ್ದಾರೆ.
ಕತಾರ್ ವಿಶ್ವಕಪ್ ಫೈನಲ್ ಹಂತಕ್ಕೆ ತಲುಪಿದ್ದು, ಚಿನ್ನದ ವಿಶ್ವಕಪ್ಗೆ ಯಾರು ಮುತ್ತಿಕ್ಕುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇದರ ನಡುವೆ ಭಾರತದ ಫುಟ್ಬಾಲ್ ಅಭಿಮಾನಿಗಳಿಗೆ ಫುಟ್ಬಾಲ್ ಸ್ಟಾರ್ ಪ್ಲೇಯರ್ ಧನ್ಯವಾದ ತಿಳಿಸಿದ್ದಾರೆ.
2/ 8
ಫಿಫಾ ವಿಶ್ವಕಪ್ ನಲ್ಲಿ 32 ತಂಡಗಳು ಭಾಗವಹಿಸಿದ್ದವು. ಫಿಫಾ ಪಂದ್ಯಾವಳಿಯು ಬಹುಮಾನದ ಮೊತ್ತದ ದೃಷ್ಟಿಯಿಂದ ವಿಶ್ವದ ಅತಿದೊಡ್ಡ ಪಂದ್ಯಾವಳಿಯಾಗಿದೆ. ಈ ಮೆಗಾ ಟೂರ್ನಿಯು ಅಂತಿಮ ಘಟ್ಟಕ್ಕೆ ಬಂದಿದ್ದು, ಡಿಸೆಂಬರ್ 18ರಂದು ನಡೆಯಲಿರುವ ಫೈನಲ್ ಫೈಟ್ನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ಸೆಣಸಾಡಲಿದೆ.
3/ 8
ಇದರ ನಡುವೆ ಭಾರತದ ರಾಜ್ಯವಾದ ಕೇರಳದ ಜನತೆಗೆ ಫುಟ್ಬಾಳ್ ಸ್ಟಾರ್ ಪ್ಲೇಯರ್ ಒಬ್ಬರು ಧನ್ಯವಾದ ತಿಳಿಸಿದ್ದಾರೆ. ಕೇರಳದ ಅಭಿಮಾನಿಗಳಿಗೆ ಬ್ರೆಜಿಲಿಯನ್ ಸೂಪರ್ಸ್ಟಾರ್ ನೇಮಾರ್ ಧನ್ಯವಾದ ಹೇಳಿದ್ದಾರೆ.
4/ 8
ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ನೇಮಾರ್ ಅವರು, ತಮ್ಮ ಅಭಿಮಾನಿಯು ಮಗುವನ್ನು ತನ್ನ ಬೆನ್ನಿನ ಮೇಲೆ ಎತ್ತಿಕೊಂಡಿದ್ದು, ನೇಮಾರ್ ಅವರ ದೈತ್ಯ ಕಟೌಟ್ ಎದುರು ಇಬ್ಬರು ನಿಂತುಕೊಂಡಿದ್ದಾರೆ. ಈ ಫೋಟೋವನ್ನು ನೇಮಾರ್ ಹಂಚಿಕೊಂಡು ಧನ್ಯವಾದ ಕೇರಳ ಎಂದು ಬರೆದುಕೊಂಡಿದ್ದಾರೆ.
5/ 8
ಕ್ರೊವೇಷಿಯಾ ವಿರುದ್ಧದ ಕ್ವಾರ್ಟರ್ ಫೈನಲ್ನಲ್ಲಿ ಶೂಟೌಟ್ನಲ್ಲಿ ಸೋತರೂ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲ ತಂಡಕ್ಕೆ ಕೊರತೆಯಾಗಿಲ್ಲ. ಬ್ರೆಜಿಲ್ 2 ಗೋಲುಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.
6/ 8
ಬ್ರೆಜಿಲ್ ವೈಫಲ್ಯದ ನಂತರ ನೇಮಾರ್ ಬ್ರೆಜಿಲ್ ಜೆರ್ಸಿಯಲ್ಲಿ ಆಡುತ್ತಾರೋ ಇಲ್ಲವೋ ಎಂಬ ಚರ್ಚೆ ಮುಂದುವರೆದಿದೆ. ಕ್ವಾರ್ಟರ್ ಫೈನಲ್ನಲ್ಲಿ ಸೋಲಿನ ನಂತರ ನೇಮರ್ ಪ್ರತಿಕ್ರಿಯಿಸಿದ್ದು, ತಮ್ಮ ವೃತ್ತಿಜೀವನದಲ್ಲಿ ಇಂತಹ ನೋವಿನ ಹಿನ್ನಡೆ ಎಂದಿಗೂ ಸಂಭವಿಸಿಲ್ಲ ಎಂದು ಹೇಳಿದ್ದಾರೆ.
7/ 8
ಆದರೆ ಅವರು ಇನ್ನು ಮುಂದೆ ಬ್ರೆಜಿಲ್ ಜೆರ್ಸಿಯಲ್ಲಿ ಆಡುತ್ತಾರೋ ಇಲ್ಲವೋ ಎನ್ನುವುದರ ಬಗ್ಗೆ ಅವರು ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.
8/ 8
ಪ್ರಸ್ತುತ ಫಿಫಾ ವಿಶ್ವಕಪ್ನಲ್ಲಿ ಲಿಯೋನೆಲ್ ಮೆಸ್ಸಿ ಮತ್ತು ಕೈಲಿಯನ್ ಎಂಬಪ್ಪೆ 5-5 ಗೋಲುಗಳನ್ನು ಗಳಿಸಿದ್ದಾರೆ. ಇಬ್ಬರೂ ಪ್ರಸ್ತುತ ಗೋಲ್ಡನ್ ಬೂಟ್ಗಾಗಿ ಪ್ರಬಲ ಸ್ಪರ್ಧಿಗಳಲ್ಲಿದ್ದಾರೆ.