ಪ್ರಸ್ತುತ, ಕೇವಲ 32 ತಂಡಗಳು ವಿಶ್ವಕಪ್ ಅಂತಿಮ ತಂಡವಾಗಿ ಕಣಕ್ಕಿಳಿಯುತ್ತಿದ್ದವು. ಆದರೆ ಇದೀಗ ಈ ಸಂಖ್ಯೆ 2026ರಲ್ಲಿ 48ಕ್ಕೆ ತಲುಪಲಿದೆ. ಪ್ರತಿ ಗುಂಪಿಗೆ 3 ತಂಡಗಳಂತೆ 16 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಅಗ್ರ 2 ರಲ್ಲಿ ನಿಲ್ಲುವ ಎಲ್ಲಾ 32 ತಂಡಗಳು ನಾಕೌಟ್ ತಲುಪುತ್ತವೆ. ಏಷ್ಯಾದ 5 ತಂಡಗಳು ಮಾತ್ರ 2022ರ ವಿಶ್ವಕಪ್ಗೆ ನೇರವಾಗಿ ಅರ್ಹತೆ ಪಡೆದಿವೆ. ಕತಾರ್ ಆತಿಥೇಯರಾಗಿ ಅರ್ಹತೆ ಪಡೆದಿತ್ತು.
ಭಾರತ ತನ್ನ ಸಾಮರ್ಥ್ಯ ಮೀರಿ ಆಡಿದರೆ 2026ರ ವಿಶ್ವಕಪ್ ಗೆ ಅರ್ಹತೆ ಪಡೆಯುವುದು ಖಚಿತ. ಅದು ನಡೆದರೆ ಭಾರತೀಯ ಫುಟ್ಬಾಲ್ನ ಸುವರ್ಣಯುಗ ಆರಂಭವಾಗಲಿದೆ. ಇಂಡಿಯನ್ ಸೂಪರ್ ಲೀಗ್ನ ಪ್ರವೇಶದೊಂದಿಗೆ, ಭಾರತದ ಆಟವು ಮೊದಲಿಗಿಂತ ಉತ್ತಮವಾಗಿದೆ. ಅಲ್ಲದೇ 2026ರಲ್ಲಿ ವಿಶ್ವಕಪ್ ಪ್ರವೇಶಿಸಿದರೆ ಭಾರತದ ಫುಟ್ಬಾಲ್ ದಂತಕಥೆ ಸುನೀಲ್ ಛೇತ್ರಿ ತಂಡಲ್ಲಿ ಇರುತ್ತಾರಾ ಎಂಬುದು ಕಾದುನೋಡಬೇಕಿದೆ.