FIFA World Cup 2022: ಫುಟ್ಬಾಲ್ ಆಟದಲ್ಲಿ ಬೆತ್ತಲೆಯ ನೋಟ! ಕ್ರೀಡೋನ್ಮಾದದಲ್ಲಿ ಬಟ್ಟೆ ಬಿಚ್ಚಿ ಕುಣಿದ ಅಭಿಮಾನಿ!
FIFA World Cup 2022: ಈ ಹಿಂದೆ ಕತಾರ್ನಲ್ಲಿ ಇಂಗ್ಲೆಂಡ್ ಅಭಿಮಾನಿಯೊಬ್ಬರು ಸಾರ್ವಜನಿಕವಾಗಿ ತನ್ನ ದೇಹವನ್ನು ತೋರಿಸುವ ಮೂಲಕ ಸುದ್ದಿಯಾಗಿದ್ದರು. ಈ ಬಾರಿ ಇನ್ನೊಬ್ಬ ಅಭಿಮಾನಿ ಬೆತ್ತಲೆಯಾಗಿ ಹೊರಗೆ ಹೋಗುವ ಮೂಲಕ ಕತಾರ್ ನಿಯಮಗಳಿಗೆ ಸವಾಲು ಹಾಕಿದ್ದಾರೆ.
ಸಂಪ್ರದಾಯವಾದಿ ಕತಾರ್ನಲ್ಲಿ ವಿಶ್ವಕಪ್ನ ಹಲವಾರು ನಿಯಮಗಳು ಕಠಿಣವಾಗಿವೆ. ಕಡಿಮೆ ಬಟ್ಟೆ ತೊಟ್ಟ ಮಹಿಳೆಯರಿಂದ ಹಿಡಿದು ಸಾರ್ವಜನಿಕವಾಗಿ ಮದ್ಯಪಾನ ಮಾಡುವುದರಿಂದ ಹಿಡಿದು ಚುಂಬಿಸುವ ಗೆಳತಿಯರ ತನಕ ಎಲ್ಲವನ್ನೂ ನಿಷೇಧಿಸಲಾಗಿದೆ.
2/ 8
ಆದರೆ ಬ್ರಿಟಿಷ್ ಅಭಿಮಾನಿಗಳು ನಿಯಮಗಳ ಕಟ್ಟುನಿಟ್ಟನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಮಹಿಳೆಯೊಬ್ಬಳು ತನ್ನ ದೇಹದ ಭಾಗಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಳು. ಇದೀಗ ಅದೇ ರೀತಿ ಆಂಗ್ಲ ಅಭಿಮಾನಿಯೊಬ್ಬ ಎಲ್ಲ ನಿಯಮಗಳನ್ನು ಮುರಿದಿದ್ದಾನೆ.
3/ 8
ಆ ಇಂಗ್ಲಿಷ್ ಅಭಿಮಾನಿಯ ಹೆಸರು ಪಾಲ್ ಗ್ರೆಗೊರಿ ಅಲಿಯಾಸ್ ಟ್ಯಾಂಗೋ. ಅವರು EPL ನಲ್ಲಿ ಬಹಳ ಪರಿಚಿತ ಮುಖ. ಅವರು ಅಂಗಿ ಕಳಚಿ ಆಟ ನೋಡಲು ಇಷ್ಟಪಡುತ್ತಾರೆ. ಹೀಗಾಗಿ ಕತಾರ್ ತಲುಪಿದ ನಂತರವೂ ಬಟ್ಟೆ ಕಳಚಿ ತಿರುಗಾಡುತ್ತಿದ್ದಾರೆ.
4/ 8
ಕತಾರ್ನ ಕಡಲ ತೀರದಲ್ಲಿ ಇಂಗ್ಲೆಂಡ್ ಧ್ವಜದೊಂದಿಗೆ ಶರ್ಟ್ ಇಲ್ಲದೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೊ ಎಲ್ಲಡೆ ಸಖತ್ ವೈರಲ್ ಆಗಿದೆ.
5/ 8
ಮತ್ತೊಂದು ಚಿತ್ರದಲ್ಲಿ, ಅವರು ಸಮುದ್ರ ತೀರದಲ್ಲಿ ಕುಳಿತಿರುವುದನ್ನು ಕಾಣಬಹುದು. ಅದರ ಪಕ್ಕದಲ್ಲಿ ಇಂಗ್ಲೆಂಡ್ ಧ್ವಜವಿದೆ. ಎರಡೂ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಕತಾರ್ ನಿಯಮ ಮುರಿದ ಕಾರಣ ಅವರಿಗೆ ಶಿಕ್ಷೆ ಆಗಲಿದೆಯೇ ಎಂದು ಕಾದುನೋಡಬೇಕಿದೆ.
6/ 8
ಆದರೆ, ಹ್ಯಾರಿ ಕೇನ್ ಮೈದಾನದಲ್ಲಿ ಅರೆ ಬೆತ್ತಲೆಯಾಗಿ ಪಂದ್ಯಗಳನ್ನು ನೋಡುತ್ತಿದ್ದಾರೆ. ಈ ಮೂಲಕ ತಮ್ಮ ದೇಶದ ತಂಡಕ್ಕೆ ಬೆಂಬಲ ನೀಡುತ್ತಿದ್ದಾರೆ. ಆದರೆ ಅವರ ಈ ನಡವಳಿಕೆ ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ.
7/ 8
ಇದರ ನಡುವೆ ಕೇರಳದ ಮುಸ್ಲಿಂ ಸಂಘಟನೆ ನೀಡಿದ ಹೇಳಿಕೆ ಇದೀಗ ಎಲ್ಲಡೆ ಸಖತ್ ಚರ್ಚೆಯಾಗುತ್ತಿದೆ. ಹೌದು, ಫುಟ್ಬಾಲ್ ತಾರೆಯರ (Football Stars) ಆರಾಧನೆ ಮಾಡುವುದು ಇಸ್ಲಾಂ (Islam) ಧರ್ಮಕ್ಕೆ ವಿರುದ್ಧವಾಗಿದೆ” ಅಂತ ಮುಸ್ಲಿ ಸಂಘಟನೆಗಳು ಹೇಳಿವೆ.
8/ 8
ಈ ರೀತಿಯ ಹೀರೋ ಆರಾಧನೆಯು ಇಸ್ಲಾಮಿಕ್ ಅಲ್ಲ ಮತ್ತು ಇದು ಮುಸ್ಲಿಂ ಧರ್ಮದಲ್ಲಿ ಇರುವ ಒಬ್ಬ ದೇವರ ಆರಾಧನೆ ತತ್ವಗಳಿಗೆ ವಿರುದ್ಧವಾಗಿದೆ. ಫುಟ್ಬಾಲ್ ಮೇಲಿನ ಪ್ರೀತಿ ಹುಚ್ಚುತನವಾಗುವುದು ಆರೋಗ್ಯಕರ ಪ್ರವೃತ್ತಿಯಲ್ಲ ಎಂದು ಹೇಳಲಾಗಿದೆ