FIFA World Cup 2022: ಫಿಫಾ ವಿಶ್ವಕಪ್​ನಿಂದ ಪೋರ್ಚುಗಲ್ ಔಟ್, ಮೈದಾನದಲ್ಲಿಯೇ ಕಣ್ಣೀರಿಟ್ಟ ರೊನಾಲ್ಡೊ

FIFA World Cup 2022: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2022ರಿಂದ ಹಾಟ್ ಫೇವರಿಟ್ ತಂಡಗಳು ಮನೆಗೆ ಹೋಗುತ್ತಿವೆ. ಸ್ಟಾರ್ ಆಟಗಾರರೆಲ್ಲಾ ಕಣ್ಣೀರಿಟ್ಟಿದ್ದಾರೆ.

First published:

  • 18

    FIFA World Cup 2022: ಫಿಫಾ ವಿಶ್ವಕಪ್​ನಿಂದ ಪೋರ್ಚುಗಲ್ ಔಟ್, ಮೈದಾನದಲ್ಲಿಯೇ ಕಣ್ಣೀರಿಟ್ಟ ರೊನಾಲ್ಡೊ

    FIFA ವಿಶ್ವಕಪ್ ನಲ್ಲಿ ಪೋರ್ಚುಗಲ್ ತಂಡದ ಪ್ರಯಾಣವು ಡಿಸೆಂಬರ್ 10 ರ ಶನಿವಾರದಂದು ಕೊನೆಗೊಂಡಿತು. ಪೋರ್ಚುಗಲ್ ವಿರುದ್ಧದ ಪಂದ್ಯದಲ್ಲಿ ಮೊರಾಕೊ 1-0 ಗೋಲುಗಳಿಂದ ಗೆದ್ದಿತ್ತು. ಇದರೊಂದಿಗೆ ಹಾಟ್ ಫೇವರಿಟ್ ತಂಡ ಪೋರ್ಚುಗಲ್ ಟೂರ್ನಿಯಿಂದ ಹೊರಬಿದ್ದಿದೆ.

    MORE
    GALLERIES

  • 28

    FIFA World Cup 2022: ಫಿಫಾ ವಿಶ್ವಕಪ್​ನಿಂದ ಪೋರ್ಚುಗಲ್ ಔಟ್, ಮೈದಾನದಲ್ಲಿಯೇ ಕಣ್ಣೀರಿಟ್ಟ ರೊನಾಲ್ಡೊ

    ಈ ಬಾರಿ ಕಪ್ ಗೆ ಮುತ್ತಿಕ್ಕಬೇಕಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ಕನಸನ್ನು ಮೊರೊಕ್ಕೊ ಅಳಿಸಿ ಹಾಕಿತು. ಫಿಫಾ ವಿಶ್ವಕಪ್‌ನಲ್ಲಿ ಮೊರಾಕೊ ಹೊಸ ಇತಿಹಾಸ ನಿರ್ಮಿಸಿದೆ. ಈ ಗೆಲುವಿನೊಂದಿಗೆ ಫಿಫಾ ಇತಿಹಾಸದಲ್ಲಿ ಆಫ್ರಿಕಾದಿಂದ ಸೆಮಿಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಮೊರೊಕ್ಕೊ ಪಾತ್ರವಾಯಿತು.

    MORE
    GALLERIES

  • 38

    FIFA World Cup 2022: ಫಿಫಾ ವಿಶ್ವಕಪ್​ನಿಂದ ಪೋರ್ಚುಗಲ್ ಔಟ್, ಮೈದಾನದಲ್ಲಿಯೇ ಕಣ್ಣೀರಿಟ್ಟ ರೊನಾಲ್ಡೊ

    ಇದು ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕೊನೆಯ ಫಿಫಾ ವಿಶ್ವಕಪ್ ಎಂದು ಅಭಿಮಾನಿಗಳು ನಂಬಿದ್ದಾರೆ. ತಮ್ಮ ಸೂಪರ್‌ಸ್ಟಾರ್ ಈ ಬಾರಿ ಟ್ರೋಫಿ ಗೆಲ್ಲುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು ಆದರೆ ಅದು ಆಗಲಿಲ್ಲ.

    MORE
    GALLERIES

  • 48

    FIFA World Cup 2022: ಫಿಫಾ ವಿಶ್ವಕಪ್​ನಿಂದ ಪೋರ್ಚುಗಲ್ ಔಟ್, ಮೈದಾನದಲ್ಲಿಯೇ ಕಣ್ಣೀರಿಟ್ಟ ರೊನಾಲ್ಡೊ

    ಇದು ಕ್ರಿಸ್ಟಿಯಾನೊ ಅವರ 5 ನೇ ವಿಶ್ವಕಪ್ ಟೂರ್ನಿಯಾಗಿದೆ. ಅವರು 2006 ರಲ್ಲಿ ಮೊದಲ ಬಾರಿಗೆ ಪೋರ್ಚುಗಲ್‌ಗಾಗಿ ವಿಶ್ವಕಪ್‌ನಲ್ಲಿ ಆಡಿದರು, ನಂತರ 2010, 2014, 2018 ಮತ್ತು ಈಗ 2022 ರಲ್ಲಿ ಆಡಿದ್ದಾರೆ.

    MORE
    GALLERIES

  • 58

    FIFA World Cup 2022: ಫಿಫಾ ವಿಶ್ವಕಪ್​ನಿಂದ ಪೋರ್ಚುಗಲ್ ಔಟ್, ಮೈದಾನದಲ್ಲಿಯೇ ಕಣ್ಣೀರಿಟ್ಟ ರೊನಾಲ್ಡೊ

    ಆದರೆ, ಈ ಸೋಲಿನೊಂದಿಗೆ ಪೋರ್ಚುಗಲ್ ತಂಡ ಮನೆಗೆ ತೆರಳುತ್ತಿದ್ದಂತೆ 37ರ ಹರೆಯದ ಸ್ಟಾರ್ ಆಟಗಾರ ರೊನಾಲ್ಡೊ ಕಣ್ಣೀರಿಟ್ಟರು. ಇದೀಗ ಈ ಫೋಟೋಗಳು ವೈರಲ್ ಆಗಿವೆ.

    MORE
    GALLERIES

  • 68

    FIFA World Cup 2022: ಫಿಫಾ ವಿಶ್ವಕಪ್​ನಿಂದ ಪೋರ್ಚುಗಲ್ ಔಟ್, ಮೈದಾನದಲ್ಲಿಯೇ ಕಣ್ಣೀರಿಟ್ಟ ರೊನಾಲ್ಡೊ

    ಈ ಸೋಲಿನೊಂದಿಗೆ ರೊನಾಲ್ಡೊ ಅವರ ಫಿಫಾ ವೃತ್ತಿಜೀವನ ಬಹುತೇಕ ಮುಗಿದಿದೆ. ತನ್ನ ದೇಶಕ್ಕೆ ವಿಶ್ವಕಪ್ ನೀಡುವ ಈ ತಾರೆಯ ಕನಸು ನನಸಾಗಲಿಲ್ಲ. ಪಂದ್ಯ ಮುಗಿದ ನಂತರವೂ ರೊನಾಲ್ಡೊ ಬಹಳ ಹೊತ್ತು ನೋವಿನಿಂದ ತಲೆ ಎತ್ತಲಿಲ್ಲ. ಇದರಿಂದ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ಹೀಗೆ ನೋಡಲಾಗದೆ ಬೇಸರ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 78

    FIFA World Cup 2022: ಫಿಫಾ ವಿಶ್ವಕಪ್​ನಿಂದ ಪೋರ್ಚುಗಲ್ ಔಟ್, ಮೈದಾನದಲ್ಲಿಯೇ ಕಣ್ಣೀರಿಟ್ಟ ರೊನಾಲ್ಡೊ

    ಈ ಪಂದ್ಯದ ಎರಡನೇ ಸುತ್ತಿನಲ್ಲಿ ಪೋರ್ಚುಗಲ್ ಪ್ರಾಬಲ್ಯ ಸಾಧಿಸಿತು. ಆದಾಗ್ಯೂ, ಪೋರ್ಚುಗೀಸ್ ತಂಡವು ಮೊರೊಕನ್ ರಕ್ಷಣಾ ರೇಖೆಯನ್ನು ದಾಟಲು ವಿಫಲವಾಯಿತು. ಉದ್ದಕ್ಕೂ, ಮೊರಾಕೊ ಪೋರ್ಚುಗಲ್ ವಿರುದ್ಧ ದ್ವಂದ್ವಯುದ್ಧದಂತೆ ಹೋರಾಡಿತು.

    MORE
    GALLERIES

  • 88

    FIFA World Cup 2022: ಫಿಫಾ ವಿಶ್ವಕಪ್​ನಿಂದ ಪೋರ್ಚುಗಲ್ ಔಟ್, ಮೈದಾನದಲ್ಲಿಯೇ ಕಣ್ಣೀರಿಟ್ಟ ರೊನಾಲ್ಡೊ

    ರೊನಾಲ್ಡೋ ಅವರ ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ದಿಗ್ಗಜನ ದುಃಖಕ್ಕೆ ಕೋಟ್ಯಾಂತರ ಅಭಿಮಾನಿಗಳು ಬೇಸರಗೊಂಡಿದ್ದಾರೆ.

    MORE
    GALLERIES