FIFA World Cup 2022: ಮೊನ್ನೆ ದೇಶಕ್ಕೇ ರಜೆ, ಈಗ ಸೌದಿ ರಾಜನಿಂದ 11 ಕೋಟಿ ಬೆಲೆಯ ಕಾರ್ ಗಿಫ್ಟ್! ಗೆದ್ದಿರೋದು ಒಂದೇ ಮ್ಯಾಚ್ ಅಂತ ಕಾಲೆಳೆದ ನೆಟ್ಟಿಗರು
FIFA World Cup 2022: ಫಿಫಾ ವಿಶ್ವಕಪ್ ದಿನೇ ದಿನೇ ರಂಗೇರುತ್ತಿದೆ. ಇದರ ನಡುವೆ ಸೌದಿಯ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಸೌದಿ ಫುಟ್ಬಾಲ್ ಆಟಗಾರರಿಗೆ RM6 ಮಿಲಿಯನ್ ರೋಲ್ಸ್ ರಾಯ್ಸ್ ಫ್ಯಾಂಟಮ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.
ಫಿಫಾ ವಿಶ್ವಕಪ್ 2022ರಲ್ಲಿ (FIFA World Cup 2022) ಸೌದಿ ಅರೇಬಿಯಾ (Saudi Arabia) ಅರ್ಜೆಂಟೀನಾ ವಿರುದ್ಧ ಐತಿಹಾಸಿಕ ವಿಜಯದ ನಂತರ ವಿಜಯದ ಸಂಭ್ರಮದಲ್ಲಿ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಿಗಳು ಮತ್ತು ಶಾಲೆಗಳನ್ನು ಬುಧವಾರ ರಜೆಯನ್ನು, ಅಲ್ಲಿನ ದೊರೆ ಘೋಷಿಸಿದ್ದರು.
2/ 8
ಸೌದಿ ಅರೇಬಿಯಾ ವಿಶ್ವಕಪ್ನಲ್ಲಿ ವಿಶ್ವದ 51ನೇ ಶ್ರೇಯಾಂಕಿತ ತಂಡ. ಅರ್ಜೆಂಟೀನಾ ತಂಡ ಕಳೆದ 36 ಪಂದ್ಯಗಳಲ್ಲಿ ಅಜೇಯವಾಗಿತ್ತು, ಆದರೆ ಸೌದಿ ಅರೇಬಿಯಾ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಅಂತಿಮವಾಗಿ 2-1 ಅಂತರದ ಗೋಲ್ನಿಂದ ಸೌಧಿ ಗೆಲುವುದ ದಾಖಲಿಸಿತು.
3/ 8
1 ದಿನ ರಜೆ ಘೋಷಿಸಿದ ಬಳಿಕ ಸೌದಿ ರಾಜ ಮತ್ತೊಂದು ಘೋಷಣೆಯನ್ನು ಮಾಡಿದ್ದಾರೆ. ಅರ್ಜೆಂಟೀನಾ ವಿರುದ್ಧ ಗೆದ್ದ ಸೌದಿ ಅರೇಬಿಯಾ ಫುಟ್ಬಾಲ್ ತಂಡದ ಪ್ರತಿಯೊಬ್ಬ ಆಟಗಾರನಿಗೂ ಸೌದಿ ಸರ್ಕಾರ ದೊಡ್ಡ ಬಹುಮಾನವನ್ನು ಘೋಷಿಸಿದೆ.
4/ 8
ಸೌದಿ ಆಟಗಾರರಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಗಿಫ್ಟ್ ನೀಡುವುದಾಗಿ ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲಾಮ್ ಅಲ್ ಸೌದ್ ಘೋಷಿಸಿದ್ದಾರೆ. ಇವರ ಈ ಘೋಷಣೆ ಕೇಳಿ ಇದೀಗ ಇಡಿ ಪ್ರಪಂಚವೇ ಒಮ್ಮೆ ಅಚ್ಚರಿಪಟ್ಟಿದೆ.
5/ 8
ಇನ್ನು, ಈ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ಬೆಲೆ ಭಾರತದಲ್ಲಿ ಬರೋಬ್ಬರಿ 8ರಿಂದ 11 ಕೋಟಿವರೆಗೆ ಇದೆ. ಇಂತಹ ದುಬಾರಿ ಗಿಫ್ಟ್ ಪಡೆಯುತ್ತಿರುವ ಸಾದಿ ಆಟಗಾರರು ಕಪ್ ಗೆದ್ದರೂ ಗೆಲ್ಲದಿದ್ದರೂ ಮಿಲಿಯನೇರ್ ಆಗುತ್ತಾರೆ.
6/ 8
ಫುಟ್ಬಾಲ್ ಆಟಗಾರರು ತಂಡದ ಕೋಚ್ ಹಾರ್ವೆ ರೆನಾರ್ಡ್ ಅವರಿಗೆ ಪಂದ್ಯವನ್ನು ಗೆದ್ದ ಕೀರ್ತಿಯನ್ನು ನೀಡಿದರು. ಸೌದಿ ಅರೇಬಿಯಾದ ಮಿಡ್ಫೀಲ್ಡರ್ ಅಬ್ದುಲ್ಲಾ ಅಲ್-ಮಲ್ಕಿ ಮಾತನಾಡಿ, ಪಂದ್ಯದ ಮೊದಲು ಕೋಚ್ ದೇಶಕ್ಕಾಗಿ 200 ಪ್ರತಿಶತವನ್ನು ನೀಡಲು ನಮಗೆಲ್ಲರಿಗೂ ಕರೆ ನೀಡಿದರು ಎಂದು ಹೇಳಿದ್ದಾರೆ.
7/ 8
ರೋಲ್ಸ್ ರಾಯ್ಸ್ ಕಾರು ಮಾತ್ರವಲ್ಲ, ವಿಶ್ವಕಪ್ ಗೆದ್ದಲ್ಲಿ ಪ್ರತಿಯೊಬ್ಬ ಫುಟ್ಬಾಲ್ ಆಟಗಾರನಿಗೆ ದೊಡ್ಡ ಉಡುಗೊರೆ ಕಾದಿದೆ ಎಂದು ಆ ದೇಶದ ರಾಜನ ಆಪ್ತರು ಹೇಳಿದ್ದಾರೆ.
8/ 8
ಇನ್ನು, ಕೇವಲ ಒಂದು ಪಂದ್ಯ ಗೆದ್ದಿದ್ದಕ್ಕೆ ದೇಶಕ್ಕೆ ರಜೆ, ಕೋಟಿ ಬೆಲೆಯ ಕಾರು ಉಡುಗರೆ ನೀಡುತ್ತಿರುವ ಸಾದಿಯ ರಾಜನನ್ನು ನೆಟ್ಟಿಗರು ಕಾಲೆಳೆದಿದ್ದು, ಗೆದ್ದಿರುವುದು ಕೇವಲ ಒಂದು ಪಮದ್ಯ ವಿಶ್ವಕಪ್ ಅಲ್ಲ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗುತ್ತಿದೆ.