ರವಿಶಾಸ್ತ್ರಿ ಸೇರಿದಂತೆ ಭಾರತ ತಂಡದ ಕೋಚಿಂಗ್ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವ ಕಾರಣ ಭಾರತ ಐದನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಕಣಕ್ಕಿಳಿಸಿಲ್ಲ. ಹೀಗಾಗಿ, ಇವತ್ತು ಆರಂಭವಾಗಬೇಕಿದ್ದ ಸರಣಿಯ ಕೊನೆಯ ಟೆಸ್ಟ್ ರದ್ದಾಗಿದೆ. ಭಾರತದಿಂದ ತಂಡ ಕಣಕ್ಕಿಳಿಯದ ಕಾರಣ ಪಂದ್ಯ ರದ್ದು ಮಾಡಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಘೋಷಿಸಿದೆ.
ರೋಚಕವಾಗಿ ನಡೆಯುತ್ತಿದ್ದ ಇಡೀ ಸರಣಿಗೆ ಕೋವಿಡ್ ಒಂದು ರೀತಿಯಲ್ಲಿ ಆ್ಯಂಟಿ ಕ್ಲೈಮ್ಯಾಕ್ಸ್ ರೀತಿ ವಕ್ಕರಿಸಿ ಕ್ರಿಕೆಟ್ ರಸಿಕರ ಉತ್ಸಾಹವನ್ನು ಇಳಿಸಿದೆ. ಇದರ ಮಧ್ಯೆ ಐದನೇ ಟೆಸ್ಟ್ ಪಂದ್ಯವನ್ನ ಸಂಪೂರ್ಣವಾಗಿ ಕೈಬಿಡದೇ ಮುಂದಿನ ಯಾವುದಾದರೂ ದಿನಗಳಲ್ಲಿ ಆಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಲಿ (ಬಿಸಿಸಿಐ) ಯೋಜಿಸಿದೆ. ಪಂದ್ಯ ರದ್ದಾದ ಕಾರಣ ಅಭಿಮಾನಿಗಳಿಗೆ ನಿರಾಸೆ ಆಗಿದೆ.
ಕುತೂಹಲವೆಂದರೆ ಇದಕ್ಕೆ ಮುನ್ನ ಇಸಿಬಿ ವಿಚಿತ್ರ ಹೇಳಿಕೆ ನೀಡಿತ್ತು. ಕೋವಿಡ್ ಕಾರಣ ಭಾರತ ಈ ಪಂದ್ಯವನ್ನ ಬಿಟ್ಟುಕೊಟ್ಟಿದೆ ಎಂದು ಹೇಳಿತ್ತು. ಈ ಹೇಳಿಕೆಯನ್ನ ಯಥಾವತ್ತಾಗಿ ಅರ್ಥೈಸಿದರೆ ಭಾರತ ಸೋಲೊಪ್ಪಿತು. ಇಂಗ್ಲೆಂಡ್ ಗೆದ್ದಿತು ಎಂದಾಗುತ್ತದೆ. ಸರಣಿ 2-2ರಿಂದ ಸಮಗೊಂಡಂತಾಗುತ್ತಿತ್ತು. ನಂತರ ಹೇಳಿಕೆ ಬದಲಿಸಿದ ಇಸಿಬಿ, “ಕೋವಿಡ್ ಕಾರಣಕ್ಕೆ ಭಾರತ ತಂಡವನ್ನ ಕಣಕ್ಕಿಳಿಸಲು ಸಾಧ್ಯವಾಗಿಲ್ಲ. ಎಮಿರೇಟ್ಸ್ ಓಲ್ಡ್ ಟ್ರಫಾರ್ಡ್ನಲ್ಲಿ ಶುರುವಾಗಬೇಕಿದ್ದ ಐದನೇ ಪಂದ್ಯ ರದ್ದಾಗಿದೆ” ಎಂದು ಮರುಹೇಳಿಕೆ ನೀಡಿತು.