ODI ವಿಶ್ವಕಪ್ 2019 ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ ನಂತರ ರೋಹಿತ್ ಶರ್ಮಾ ಹೆಸರು ಹೆಚ್ಚು ಪ್ರಸಿದ್ಧವಾಯಿತು. ಆ ವೇಳೆ ಅವರು ಶತಕ ಸಿಡಿಸಿ ಸಂಭ್ರಮಿಸಿದ ವೇಳೆಯ ಫೋಟೋವನ್ನು ಬೃಹತ್ ಕಟೌಟ್ ಮಾಡಿ ಕ್ರಾಸ್ ರೋಡ್ ಏರಿಯಾದಲ್ಲಿ ಹಾಕಲಿದ್ದಾರೆ ಅಭಿಮಾನಿಗಳು. ರೋಹಿತ್ ಶರ್ಮಾ ತಮ್ಮ ಹುಟ್ಟುಹಬ್ಬದ ದಿನದಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯವನ್ನು ಆಡಲಿದ್ದಾರೆ.
ಅಲ್ಲದೆ, ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಅವರ ದಾಖಲೆಗಳ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಅವರು ಐಪಿಎಲ್‌ನಲ್ಲಿ ಅತ್ಯುತ್ತಮ ನಾಯಕರಾಗಿ ಖ್ಯಾತಿ ಗಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಐಪಿಎಲ್ ನಲ್ಲಿ 5 ಬಾರಿ ಟ್ರೋಫಿ ನೀಡಿ ದಾಖಲೆ ಬರೆದಿದ್ದಾರೆ. 2021ರ ಟಿ20 ವಿಶ್ವಕಪ್ ನಂತರ, ರೋಹಿತ್ ಶರ್ಮಾ ಅವರನ್ನು ಟಿ20 ಕ್ರಿಕೆಟ್‌ಗಾಗಿ ಟೀಂ ಇಂಡಿಯಾದ ಪೂರ್ಣ ಸಮಯದ ನಾಯಕರಾಗಿ ನೇಮಿಸಲಾಗಿದೆ.
ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 6,000 ರನ್ ಕ್ಲಬ್ ತಲುಪಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 250 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಲವು ದಾಖಲೆಗಳನ್ನು ತಮ್ಮ ಖಾತೆಯಲ್ಲಿ ಹೊಂದಿರುವ ರೋಹಿತ್ ಶೀಘ್ರದಲ್ಲೇ ಐಸಿಸಿ ಟ್ರೋಫಿಯ ಕೊರತೆಯನ್ನು ನೀಗಲಿದ್ದಾರೆ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ.