Sam Billings: ಯುವರಾಜ್ ಸಿಂಗ್​ರಂತೆ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಮತ್ತೊಬ್ಬ ಸ್ಟಾರ್​ ಕ್ರಿಕೆಟಿಗ!

Sam Billings: ನಾನು ವೃತ್ತಿಪರ ಪಂದ್ಯಗಳ ಬಗ್ಗೆ ಮಾತನಾಡುತ್ತಿಲ್ಲ. ಕ್ಲಬ್ ಕ್ರಿಕೆಟಿಗರು ಮತ್ತು ಪ್ರೇಕ್ಷಕರು ಕೂಡ ಇದರಿಂದ ಎಚ್ಚರವಾಗಿರಬೇಕು.

First published:

  • 18

    Sam Billings: ಯುವರಾಜ್ ಸಿಂಗ್​ರಂತೆ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಮತ್ತೊಬ್ಬ ಸ್ಟಾರ್​ ಕ್ರಿಕೆಟಿಗ!

    2011ರ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಅವರಿಗೆ ಇದ್ದಕ್ಕಿದ್ದಂತೆ 'ಮೆಡಿಯಾಸ್ಟೈನಲ್ ಸೆಮಿನೋಮಾ' ಎಂಬ ಅಪರೂಪದ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಯುವರಾಜ್ ಸಿಂಗ್ ಕ್ಯಾನ್ಸರ್ ಅನ್ನು ಸೋಲಿಸಿದ ನಂತರ ಕ್ರಿಕೆಟ್‌ಗೆ ಮರಳಿದ್ದರು.

    MORE
    GALLERIES

  • 28

    Sam Billings: ಯುವರಾಜ್ ಸಿಂಗ್​ರಂತೆ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಮತ್ತೊಬ್ಬ ಸ್ಟಾರ್​ ಕ್ರಿಕೆಟಿಗ!

    ಇದೀಗ ಯುವರಾಜ್ ಸಿಂಗ್ ಅವರಂತೆಯೇ ಮತ್ತೊಬ್ಬ ಆಟಗಾರನಿಗೆ ಕ್ಯಾನ್ಸರ್ ಉಂಟಾಗಿದೆ. ಈ ಆಟಗಾರ ಇತ್ತೀಚೆಗೆ ತಮ್ಮ ಅನಾರೋಗ್ಯದ ಬಗ್ಗೆ ತಿಳಿಸಿದ್ದಾರೆ. ಸದ್ಯ ಈ ಆಟಗಾರನಿಗೆ ಕೇವಲ 31 ವರ್ಷ. ಇಂಗ್ಲೆಂಡ್‌ನ ವಿಕೆಟ್‌ಕೀಪರ್-ಬ್ಯಾಟರ್ ಸ್ಯಾಮ್ ಬಿಲ್ಲಿಂಗ್ಸ್ ಅವರು ಚರ್ಮದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದಾರೆ.

    MORE
    GALLERIES

  • 38

    Sam Billings: ಯುವರಾಜ್ ಸಿಂಗ್​ರಂತೆ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಮತ್ತೊಬ್ಬ ಸ್ಟಾರ್​ ಕ್ರಿಕೆಟಿಗ!

    ಈ ವಿಚಾರವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ದೀರ್ಘಾವಧಿಯ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ತನ್ನ ತಂಡದ ಸಹ ಆಟಗಾರರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

    MORE
    GALLERIES

  • 48

    Sam Billings: ಯುವರಾಜ್ ಸಿಂಗ್​ರಂತೆ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಮತ್ತೊಬ್ಬ ಸ್ಟಾರ್​ ಕ್ರಿಕೆಟಿಗ!

    ಕಳೆದ ವರ್ಷ 2 ಬಾರಿ ಎದೆಯ ಭಾಗ​ದ ಚರ್ಮದ ಶಸ್ತ್ರ​ಚಿ​ಕಿ​ತ್ಸೆಗೆ ಒಳ​ಗಾ​ಗಿ​ದ್ದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ಬಿಸಿ​ಲಿ​ನಲ್ಲಿ ತುಂಬಾ ಸಮಯ ಕಳೆ​ಯು​ವುದು ಅಪಾ​ಯ​ಕಾರಿ. ನನ್ನ ಸ್ಥಿತಿ ನೋಡಿ​ಯಾ​ದರೂ ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಅವರು ಸಹ ಆಟಗಾರರಲ್ಲಿ ವಿನಂತಿಸಿದ್ದಾರೆ.

    MORE
    GALLERIES

  • 58

    Sam Billings: ಯುವರಾಜ್ ಸಿಂಗ್​ರಂತೆ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಮತ್ತೊಬ್ಬ ಸ್ಟಾರ್​ ಕ್ರಿಕೆಟಿಗ!

    ಇನ್ನು, ನಾನು ಇದನ್ನು ಮೊದಲಿಗೆ ಚರ್ಮದ ಮೇಲಿನ ಕಲೆಗಳು ಎಂದುಕೊಂಡಿದ್ದೆ. ಅದು 0.6 ಮಿಲಿಮೀಟರ್‌ನಷ್ಟು ಆಳವಾಗಿತ್ತು. ಅದು 0.7 ಮಿಲಿಮೀಟರ್‌ ಆಳಕ್ಕೆ ಇಳಿದಾಗ ಇದರ ಬಗ್ಗೆ ನಾನು ವೈದ್ಯರ ಬಳಿ ಹೋದಾಗ ಚರ್ಮದ ಕ್ಯಾನ್ಸರ್​ ಇದೆ ಎಂದು ತಿಳಿಯಿತು ಎಂದಿದ್ದಾರೆ.

    MORE
    GALLERIES

  • 68

    Sam Billings: ಯುವರಾಜ್ ಸಿಂಗ್​ರಂತೆ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಮತ್ತೊಬ್ಬ ಸ್ಟಾರ್​ ಕ್ರಿಕೆಟಿಗ!

    ಬಿಲ್ಲಿಂಗ್ಸ್ ಇಂಗ್ಲೆಂಡ್ ಪರ 3 ಟೆಸ್ಟ್, 28 ODI ಮತ್ತು 37 T20 ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ಅವರು ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವ ಅಪಾಯದ ಬಗ್ಗೆ ಅವರು ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    MORE
    GALLERIES

  • 78

    Sam Billings: ಯುವರಾಜ್ ಸಿಂಗ್​ರಂತೆ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಮತ್ತೊಬ್ಬ ಸ್ಟಾರ್​ ಕ್ರಿಕೆಟಿಗ!

    ನಾನು ವೃತ್ತಿಪರ ಪಂದ್ಯಗಳ ಬಗ್ಗೆ ಮಾತನಾಡುತ್ತಿಲ್ಲ. ಕ್ಲಬ್ ಕ್ರಿಕೆಟಿಗರು ಮತ್ತು ಪ್ರೇಕ್ಷಕರು ಕೂಡ ಇದರಿಂದ ಎಚ್ಚರವಾಗಿರಬೇಕು. 18 ಡಿಗ್ರಿಗಳಲ್ಲಿಯೂ ಸಹ ನೀವು ಬಿಸಿಲಿನಿಂದ ತೊಂದರೆಗೆ ಒಳಗಾಗಬಹುದು ಎಂದು ಹೇಳಿದ್ದಾರೆ.

    MORE
    GALLERIES

  • 88

    Sam Billings: ಯುವರಾಜ್ ಸಿಂಗ್​ರಂತೆ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಮತ್ತೊಬ್ಬ ಸ್ಟಾರ್​ ಕ್ರಿಕೆಟಿಗ!

    ಸದ್ಯ ಈ ವಿಚಾರ ತಿಳಿದ ಅವರ ಅಭಿಮಾನಿಗಳು ಬೇಗ ಗುಣಮುಖರಾಗಿ ಬನ್ನಿ ಎಂದು ಪ್ರಾರ್ಥಿಸುತ್ತಿದ್ದಾರೆ. ಅಲ್ಲದೇ ಅನೇಕ ಕ್ರಿಕೆಟಿಗರು ಅವರ  ಆರೋಗ್ಯದ ಬಗ್ಗೆ ವಿಚಾರಿಸಿದ್ದಾಗಿ ತಿಳಿದುಬಂದಿದೆ.

    MORE
    GALLERIES