ಈ ಕುರಿತು ಯುವ ತಂಡವನ್ನು ನಿರ್ಮಿಸುವ ಟೀಂ ಇಂಡಿಯಾದ ಯೋಜನೆಯ ಬಗ್ಗೆ ದ್ರಾವಿಡ್ ಮಾತನಾಡಿದ್ದಾರೆ. ಮುಂದಿನ ಟಿ20 ವಿಶ್ವಕಪ್ಗೆ ಭಾರತ ತಂಡವನ್ನು ಸಿದ್ಧಪಡಿಸಲಾಗುತ್ತಿದ್ದು, ಯುವ ಆಟಗಾರರಿಗೆ ಅನುಭವ ನೀಡುವ ಅಗತ್ಯವಿದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ಅಲ್ಲದೇಎರಡನೇ ಟಿ20ಯಲ್ಲಿ ಶ್ರೀಲಂಕಾ ವಿರುದ್ಧದ ಸೋಲಿಗೆ ಆಟಗಾರರ ಅನನುಭವವೇ ಪ್ರಮುಖ ಕಾರಣ ಎಂದು ದ್ರಾವಿಡ್ ಹೇಳಿದ್ದಾರೆ.
ಈ ಸರಣಿಯಲ್ಲಿ ಶಿವಂ ಮಾವಿ, ಉಮ್ರಾನ್ ಮಲಿಕ್, ಶುಭಮನ್ ಗಿಲ್ ಮತ್ತು ರಾಹುಲ್ ತ್ರಿಪಾಠಿ ಅವರಂತಹ ಯುವ ಆಟಗಾರರಿಗೆ ಭಾರತ ಅವಕಾಶ ನೀಡಿದೆ. ಅವರಿಗೆ ಅವಕಾಶಗಳನ್ನು ನೀಡುವುದರ ಜೊತೆಗೆ ಅವರನ್ನು ಬೆಂಬಲಿಸುವ ಅಗತ್ಯವೂ ಇದೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ಅವರೊಂದಿಗೆ ಸಂಯಮದಿಂದ ಕೆಲಸ ಮಾಡಬೇಕು. ಅಂತಹ ಪಂದ್ಯಗಳು ಬರುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.