IPL 2023: ಒಂದೇ ಒಂದು ರನ್​ ಗಳಿಸದೆಯೇ ರೋಹಿತ್​ ದಾಖಲೆ ಮುರಿದ ದಿನೇಶ್​ ಕಾರ್ತಿಕ್​!

IPL 2023: ಐಪಿಎಲ್ 2023 ರಲ್ಲಿ RCB ಬ್ಯಾಟ್ಸ್‌ಮನ್ ಮತ್ತು ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಅವರ ಕುಸಿತ ಮುಂದುವರೆದಿದೆ. ಭಾನುವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನವು ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದಿದೆ.

First published:

  • 17

    IPL 2023: ಒಂದೇ ಒಂದು ರನ್​ ಗಳಿಸದೆಯೇ ರೋಹಿತ್​ ದಾಖಲೆ ಮುರಿದ ದಿನೇಶ್​ ಕಾರ್ತಿಕ್​!

    ಐಪಿಎಲ್ 2023ರ 60ನೇ ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಈ ಪಂದ್ಯದಲ್ಲಿ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು.

    MORE
    GALLERIES

  • 27

    IPL 2023: ಒಂದೇ ಒಂದು ರನ್​ ಗಳಿಸದೆಯೇ ರೋಹಿತ್​ ದಾಖಲೆ ಮುರಿದ ದಿನೇಶ್​ ಕಾರ್ತಿಕ್​!

    ಆರ್‌ಸಿಬಿ ತಂಡ ದೊಡ್ಡ ಮೊತ್ತದ ಸವಾಲೊಡ್ಡಲು ಬ್ಯಾಟ್ಸ್‌ಮನ್‌ಗಳು ಹೆಚ್ಚು ರನ್ ಗಳಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾಗ ದಿನೇಶ್ ಕಾರ್ತಿಕ್ ಮತ್ತೊಮ್ಮೆ ತಂಡದ ನಿರೀಕ್ಷೆಯನ್ನು ಪೂರೈಸುವಲ್ಲಿ ವಿಫಲರಾದರು.

    MORE
    GALLERIES

  • 37

    IPL 2023: ಒಂದೇ ಒಂದು ರನ್​ ಗಳಿಸದೆಯೇ ರೋಹಿತ್​ ದಾಖಲೆ ಮುರಿದ ದಿನೇಶ್​ ಕಾರ್ತಿಕ್​!

    ಕಳೆದ ಸೀಸನ್​ನ ಹೀರೋ ಆಗಿದ್ದ ದಿನೇಶ್​ ಕಾರ್ತಿಕ್​​ ಈ ಸೀಸನ್​ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಪದೇ ಪದೇ ವಿಫಲವಾಗುತ್ತಿದ್ದು, ಆರ್​ಸಿಬಿ ತಂಡಕ್ಕೆ ದೊಡ್ಡ ತಲೆನೋವಾಗಿದೆ.

    MORE
    GALLERIES

  • 47

    IPL 2023: ಒಂದೇ ಒಂದು ರನ್​ ಗಳಿಸದೆಯೇ ರೋಹಿತ್​ ದಾಖಲೆ ಮುರಿದ ದಿನೇಶ್​ ಕಾರ್ತಿಕ್​!

    ದಿನೇಶ್ ಕಾರ್ತಿಕ್ ಅವರನ್ನು ರಾಜಸ್ಥಾನ ಬೌಲರ್ ಝಂಪಾ ಔಟ್ ಮಾಡಿದರು. ಈ ಪಂದ್ಯದಲ್ಲಿ ದಿನೇಶ್​ ಕಾರ್ತಿಕ್​ 3 ಎಸೆತವನ್ನು ಆಡಿದ್ದು ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಈ ಮೂಲಕ ಮತ್ತೊಂದು ಕೆಟ್ಟ ದಾಖಲೆ ಮಾಡಿದರು.

    MORE
    GALLERIES

  • 57

    IPL 2023: ಒಂದೇ ಒಂದು ರನ್​ ಗಳಿಸದೆಯೇ ರೋಹಿತ್​ ದಾಖಲೆ ಮುರಿದ ದಿನೇಶ್​ ಕಾರ್ತಿಕ್​!

    ಇದು ದಿನೇಶ್ ಕಾರ್ತಿಕ್ ಅವರ ಐಪಿಎಲ್ ವೃತ್ತಿಜೀವನದಲ್ಲಿ 16ನೇ ಡಕ್ ಔಟ್ ಆಗಿದ್ದು, ಇದರೊಂದಿಗೆ ಅವರು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

    MORE
    GALLERIES

  • 67

    IPL 2023: ಒಂದೇ ಒಂದು ರನ್​ ಗಳಿಸದೆಯೇ ರೋಹಿತ್​ ದಾಖಲೆ ಮುರಿದ ದಿನೇಶ್​ ಕಾರ್ತಿಕ್​!

    ಈ ಹಿಂದೆ ಐಪಿಎಲ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಮಾತ್ರ 16 ಬಾರಿ ಡಕ್ ಔಟ್ ಆದ ದಾಖಲೆ ಬರೆದಿದ್ದರು. ಆದರೆ ಇದೀಗ ಈ ದಾಖಲೆ ದಿನೇಶ್ ಕಾರ್ತಿಕ್ ಹೆಸರಿನಲ್ಲಿ ದಾಖಲಾಗಿದೆ.

    MORE
    GALLERIES

  • 77

    IPL 2023: ಒಂದೇ ಒಂದು ರನ್​ ಗಳಿಸದೆಯೇ ರೋಹಿತ್​ ದಾಖಲೆ ಮುರಿದ ದಿನೇಶ್​ ಕಾರ್ತಿಕ್​!

    ಐಪಿಎಲ್​ 2023ರಲ್ಲಿ ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ಪ್ರದರ್ಶನವು ಉತ್ತಮವಾಗಿಲ್ಲ. ಇದುವರೆಗೆ 12 ಪಂದ್ಯಗಳಲ್ಲಿ 140 ರನ್ ಗಳಿಸಿದ್ದಾರೆ. ಇದರಲ್ಲಿ ಅವರ ಉತ್ತಮ ಸ್ಕೋರ್ 30 ಆಗಿದೆ.

    MORE
    GALLERIES