Kambala: ಕಂಬಳ ನೋಡ್ಬೇಕೇ? ಹಾಗಿದ್ರೆ ಈ ಸೀಸನ್​ನ ಕೊನೆಯ ಈ 6 ಕ್ರೀಡಾಕೂಟ ಮಿಸ್ ಮಾಡ್ಲೇಬೇಡಿ!

ಕಂಬಳ ತುಳುನಾಡಿನ ಜಾನಪದ ಕ್ರೀಡೆ. ಒಂದು ಕಾಲದಲ್ಲಿ ಕರಾವಳಿ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಈ ಸ್ಪರ್ಧೆ ಇಂದು ತನ್ನ ಖ್ಯಾತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲೂ ಪಸರಿಸಿದೆ. ಸಾಮಾನ್ಯವಾಗಿ ನವೆಂಬರ್‌ ತಿಂಗಳಿಂದ ಏಪ್ರಿಲ್ ಕೊನೆಯ ವಾರದ ತನಕ ನಡೆಯುವ ಕಂಬಳ ಕೂಟ ಪ್ರಸ್ತುತ ಪ್ರತೀ ವಾರಾಂತ್ಯದಲ್ಲಿ ಕರಾವಳಿ ಭಾಗದ ಒಂದೊಂದು ಕಡೆ ನಡೆಯುತ್ತಿದೆ. ಕಾಂತಾರ ಸಿನಿಮಾ ಬಂದ ನಂತರ ದೈವಾರಾಧನೆಯ ಜೊತೆಗೆ ಕಂಬಳದ ಬಗ್ಗೆಯೂ ತುಳುನಾಡು ಹೊರತಾದ ಜನರಿಗೆ ಕ್ರೇಜ್ ಹುಟ್ಟಿದ್ದು, ಹೀಗಾಗಿ ಕಂಬಳ ನೋಡಲು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಜನರು ಬರುತ್ತಿದ್ದಾರೆ. ನೀವೇನಾದರೂ ಈ ವರ್ಷ ಕಂಬಳ ನೋಡುವ ಹಂಬಲ ಹೊಂದಿದ್ದರೆ ಈ ಸೀಸನ್‌ನಲ್ಲಿ ಬಾಕಿ ಉಳಿದಿರುವ ಕಂಬಳ ಸ್ಪರ್ಧೆಯ ವಿವರಗಳನ್ನು ನಿಮಗಾಗಿ ಇಲ್ಲಿ ಕೊಡಲಾಗಿದೆ.

First published:

  • 18

    Kambala: ಕಂಬಳ ನೋಡ್ಬೇಕೇ? ಹಾಗಿದ್ರೆ ಈ ಸೀಸನ್​ನ ಕೊನೆಯ ಈ 6 ಕ್ರೀಡಾಕೂಟ ಮಿಸ್ ಮಾಡ್ಲೇಬೇಡಿ!

    ಈ ವರ್ಷ ಅಂದ್ರೆ 2022ರ ನವೆಂಬರ್‌ 26ರಂದು ಆರಂಭಗೊಂಡು 2023ರ ಏಪ್ರಿಲ್ 8ರ ತನಕ ಪ್ರತೀ ವಾರಂತ್ಯ ಒಂದರಂತೆ ಒಟ್ಟು 20 ಕಂಬಳಗಳು ನಡೆಯಲಿವೆ. ಆ ಪೈಕಿ ಈವರೆಗೆ ಒಟ್ಟು 14 ಕಂಬಳ ಕ್ರೀಡಾಕೂಟಗಳು ಯಶಸ್ವಿಯಾಗಿ ನಡೆದಿದ್ದು, ಇನ್ನು ಕೇವಲ 6 ಕಂಬಳ ಸ್ಪರ್ಧೆಗಳು ಮಾತ್ರ ಬಾಕಿ ಉಳಿದಿವೆ. (ಫೋಟೋ ಕೃಪೆ: ಪ್ರಣಾಮ್ ಶೆಟ್ಟಿ ಮಿಯ್ಯಾರ್)

    MORE
    GALLERIES

  • 28

    Kambala: ಕಂಬಳ ನೋಡ್ಬೇಕೇ? ಹಾಗಿದ್ರೆ ಈ ಸೀಸನ್​ನ ಕೊನೆಯ ಈ 6 ಕ್ರೀಡಾಕೂಟ ಮಿಸ್ ಮಾಡ್ಲೇಬೇಡಿ!

    ಮುಂದಿನ ಶನಿವಾರ ಅಂದ್ರೆ ಮಾರ್ಚ್‌ 4ರಂದು ಬಂಟ್ವಾಳ ಕಂಬಳ ನಡೆಯಲಿದ್ದು, ಮಾಜಿ ಸಚಿವರೂ ಅಗಿರುವ ಬಿ ರಮಾನಾಥ ರೈ ನೇತೃತ್ವದಲ್ಲಿ ಬಂಟ್ವಾಳದ ನಾವೂರಿನಲ್ಲಿ  ಅದ್ಧೂರಿಯಾಗಿ ಕಂಬಳ ನಡೆಯಲಿದೆ. ಕಳೆದ ಅನೇಕ ವರ್ಷಗಳಿಂದ ನಿಂತಿದ್ದ ಬಂಟ್ವಾಳ ಕಂಬಳವನ್ನು ಕಳೆದ ವರ್ಷ ರಮಾನಾಥ ರೈ ಅವರು ಪುನರ್‌ ಆಯೋಜನೆ ಮಾಡಿದ್ದರು.(ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Kambala: ಕಂಬಳ ನೋಡ್ಬೇಕೇ? ಹಾಗಿದ್ರೆ ಈ ಸೀಸನ್​ನ ಕೊನೆಯ ಈ 6 ಕ್ರೀಡಾಕೂಟ ಮಿಸ್ ಮಾಡ್ಲೇಬೇಡಿ!

    ಮಾರ್ಚ್‌ 11ರ ಶನಿವಾರ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಕಂಬಳ ನಡೆಯಲಿದೆ. ಉದ್ಯಮಿ ಹಾಗೂ ರಾಜಕಾರಣಿ ಅಶೋಕ್ ರೈ ನೇತೃತ್ವದಲ್ಲಿ ನಡೆಯಲಿರುವ ಈ ಕಂಬಳ ನೇತ್ರಾವತಿ ನದಿ ತಟದಲ್ಲಿ ನಡೆಯಲಿದ್ದು, ಸಾವಿರಾರು ಕಂಬಳಾಭಿಮಾನಿಗಳನ್ನು ಸೆಳೆಯುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Kambala: ಕಂಬಳ ನೋಡ್ಬೇಕೇ? ಹಾಗಿದ್ರೆ ಈ ಸೀಸನ್​ನ ಕೊನೆಯ ಈ 6 ಕ್ರೀಡಾಕೂಟ ಮಿಸ್ ಮಾಡ್ಲೇಬೇಡಿ!

    ಮಾರ್ಚ್‌ 18ರ ಶನಿವಾರದಂದು ಬಂಗಾಡಿ ಕಂಬಳ ನಡೆಯಲಿದ್ದು, ಬಹಳ ಪ್ರಸಿದ್ಧವಾಗಿರುವ ಬಂಗಾಡಿ ಕಂಬಳಕ್ಕೆ ಸಾವಿರಾರು ಜನರು ಸೇರುತ್ತಾರೆ. ಬಂಗಾಡಿ ಅನ್ನೋದು ಬೆಳ್ತಂಗಡಿ ತಾಲೂಕಿನಲ್ಲಿ ಬರುವ ಒಂದು ಹಳ್ಳಿ ಪ್ರದೇಶವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Kambala: ಕಂಬಳ ನೋಡ್ಬೇಕೇ? ಹಾಗಿದ್ರೆ ಈ ಸೀಸನ್​ನ ಕೊನೆಯ ಈ 6 ಕ್ರೀಡಾಕೂಟ ಮಿಸ್ ಮಾಡ್ಲೇಬೇಡಿ!

    ಮಾರ್ಚ್‌ 25ರಂದು ಪೈವಳಿಕೆ ಗ್ರಾಮದಲ್ಲಿ ಕಂಬಳ ನಡೆಯಲಿದ್ದು, ಕಾಸರಗೋಡು ಜಿಲ್ಲೆಯ ಏಕೈಕ ಕಂಬಳ ಎಂದೇ ಪ್ರಸಿದ್ಧಿ ಪಡೆದಿರುವ ಈ ಕಂಬಳದಲ್ಲಿ ಕೇರಳ ಭಾಗದ ಬಹುತೇಕ ಜನರು ಸೇರುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Kambala: ಕಂಬಳ ನೋಡ್ಬೇಕೇ? ಹಾಗಿದ್ರೆ ಈ ಸೀಸನ್​ನ ಕೊನೆಯ ಈ 6 ಕ್ರೀಡಾಕೂಟ ಮಿಸ್ ಮಾಡ್ಲೇಬೇಡಿ!

    ಏಪ್ರಿಲ್ 1ರಂದು ಸುರತ್ಕಲ್ ಕಂಬಳ ನಡೆಯಲಿದ್ದು, ಮಂಗಳೂರು ನಗರದ ಹೃದಯ ಭಾಗದಲ್ಲಿ ನಡೆಯುವ ಈ ಕಂಬಳದಲ್ಲಿ ಹೆಚ್ಚಾಗಿ ನಗರದಲ್ಲಿ ನೆಲೆಸಿರುವ ಹೊರ ರಾಜ್ಯ, ವಿದೇಶದ ವಿದ್ಯಾರ್ಥಿಗಳು ಪ್ರೇಕ್ಷಕರಾಗಿ ಆಗಮಿಸುತ್ತಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Kambala: ಕಂಬಳ ನೋಡ್ಬೇಕೇ? ಹಾಗಿದ್ರೆ ಈ ಸೀಸನ್​ನ ಕೊನೆಯ ಈ 6 ಕ್ರೀಡಾಕೂಟ ಮಿಸ್ ಮಾಡ್ಲೇಬೇಡಿ!

    ಏಪ್ರಿಲ್ 8ರಂದು ಈ ವರ್ಷದ ಕೊನೆಯ ಕಂಬಳ ನಡೆಯಲಿದ್ದು, ಇದು ಮೂಡಬಿದ್ರೆ ತಾಲೂಕಿನ ಪಣಪಿಲದಲ್ಲಿ ನಡೆಯಲಿದೆ. ವಿಶೇಷ ಅಂದ್ರೆ ಪಣಪಿಲದಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆಯಲಿದ್ದು, ಈ ಸೀಸನ್‌ನ ಕೊನೆಯ ಕಂಬಳ ಇದಾಗಿರುವುದರಿಂದ ಅತೀ ಹೆಚ್ಚು ಕೋಣಗಳು ಸ್ಪರ್ಧೆಗೆ ಭಾಗವಹಿಸುವ ನಿರೀಕ್ಷೆ ಇದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Kambala: ಕಂಬಳ ನೋಡ್ಬೇಕೇ? ಹಾಗಿದ್ರೆ ಈ ಸೀಸನ್​ನ ಕೊನೆಯ ಈ 6 ಕ್ರೀಡಾಕೂಟ ಮಿಸ್ ಮಾಡ್ಲೇಬೇಡಿ!

    ಇವಿಷ್ಟು ಈ ವರ್ಷ ಬಾಕಿ ಉಳಿದಿರುವ ಕಂಬಳಗಳು. ನೀವೇನಾದೂ ಆಸಕ್ತರಿದ್ದು, ಕಂಬಳ ನೋಡಲೇಬೇಕೆಂಬ ಕುತೂಹಲ ನಿಮಗಿದ್ದರೆ ಕನಿಷ್ಠ ಒಂದು ಕಂಬಳಕ್ಕಾದರೂ ಭೇಟಿ ನೀಡಿ. ಆ ಬಳಿಕ ಕಂಬಳವೇ ನಿಮ್ಮನ್ನು ಪ್ರತೀ ವರ್ಷ ಬರುವಂತೆ ಮಾಡುತ್ತೆ. ಈ ಬಾರಿ ಕಂಬಳ ಮಿಸ್ ಮಾಡಿಕೊಂಡವರು ಮುಂದಿನ ವರ್ಷದ ತನಕ ಕಾಯಬೇಕಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES